ಭಾರತೀಯ ಸಂಸ್ಕೃತಿಯ ಆಕರ್ಷಣೆ; ಇಲ್ಲಿಯೇ ಶಾಶ್ವತವಾಗಿ ಉಳಿದ ವಿದೇಶಿ ದಂಪತಿ!

0
85

ಭಾರತಕ್ಕೆ ಇಡೀ ಜಗತ್ತನ್ನು ಸೆಳೆಯುವ ಶಕ್ತಿ ಇದೆ. ಇಲ್ಲಿನ ಆಚರಣೆ, ಜನರಿಗೆ ಅಂತಹ ಮಹತ್ವವಿದೆ. ಭಾರತ “ಅತಿಥಿ ದೇವೋ ಭವ” ಎಂಬ ಮಾತಿನಂತೆ ನಡೆದುಕೊಳ್ಳುತ್ತದೆ. ಭಾರತ ಇಂತಹ ಸ್ವಭಾವವನ್ನು ಹಿಂದಿನಿಂದಲ್ಲೂ ಹೊಂದಿದೆ. ನಮ್ಮ ಹಿರಿಯರು ಮಾಡಿದ ಆಚರಣೆಗಳೇ ಅದೆಷ್ಟೋ ಜನ ಭಾರತದಲ್ಲಿ ಉಳಿಯುವಂತೆ ಮಾಡಿದೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿದೇಶಿ ದಂಪತಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರತದ ಬಗ್ಗೆ ಹಂಚಿಕೊಂಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದ, ಅಮೆರಿಕದ ಮಹಿಳೆಯೊಬ್ಬರು ಭಾರತದ ಭಾಷೆಯನ್ನು, ಇಲ್ಲಿ ಆಚರಣೆಗಳನ್ನು ಕಲಿತುಕೊಂಡ ಒಬ್ಬ ಪರಿಪೂರ್ಣ ಭಾರತೀಯರಾಗಿದ್ದಾರೆ. ಕ್ರಿಸ್ಟನ್ ಫಿಷರ್ ಎಂಬುವವರು ತಮ್ಮ ಕುಟುಂಬದ ಜತೆಗೆ ಭಾರತಕ್ಕೆ ಬಂದ ದಿನಗಳನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ.

ಈ ಬಗ್ಗೆ ಕ್ರಿಸ್ಟನ್ ಫಿಷರ್ ತಮ್ಮ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಕ್ಯಾಮರದಲ್ಲಿ ಸೆರೆಹಿಡಿಯಲಾದ ಕೆಲವೊಂದು ಫೋಟೋಗಳನ್ನು ಇನ್ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದಾರೆ. ನನ್ನ ಹೆಸರು ಕ್ರಿಸ್ಟನ್, ಮತ್ತು ಇದು ನನ್ನ ಕಥೆ. ನಾನು ಮೂಲತಃ ಯುನೈಟೆಡ್ ಸ್ಟೇಟ್ಸ್‌ನವಳು, ಮತ್ತು ನಾನು ಎಂಟು ವರ್ಷಗಳ ಹಿಂದೆ ನನ್ನ ಪತಿಯೊಂದಿಗೆ ಭಾರತಕ್ಕೆ ಭೇಟಿ ನೀಡಿದ್ದೆ, ನಾವು ಭಾರತವನ್ನು ಪ್ರೀತಿಸುತ್ತಿದ್ದೆವು. ನಾವು ಮೂರು ತಿಂಗಳು ಇಲ್ಲೇ ಇದ್ದೆವು, ಈ ಮೂರು ತಿಂಗಳ ಪ್ರವಾಸ ನಮ್ಮನ್ನು ಬದಲಾವಣೆ ಮಾಡಿದೆ. ಅಮೆರಿಕಕ್ಕೆ ಹಿಂದಿರುಗಿ ಇಬ್ಬರು ಹೆಣ್ಣು ಮಕ್ಕಳನ್ನು ಹೆತ್ತ ನಂತರವೂ ಭಾರತಕ್ಕೆ ಮರಳುವ ಬಯಕೆ ಎಂದಿಗೂ ಕಡಿಮೆಯಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here