ಬೆಂಗಳೂರು: ನಿರಂತರ ಅತಿಯಾದ ಮಳೆಯಿಂದ ದ.ಕ. ಜಿಲ್ಲೆಯ ಹೆಚ್ಚಿನ ರಸ್ತೆಗಳು ಹಾಳಾಗಿ ಹೋಗಿವೆ. ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ರಚಿಸಲಾದ ಕರಾವಳಿ ಅಭಿವೃದ್ಧಿ ಪ್ರಧಿಕಾರಕ್ಕೆ 500 ಕೋಟಿ ಅನುಧಾನವನ್ನು ಬಿಡುಗಡೆಗೊಳಿಸಿ ನಮ್ಮ ಜಿಲ್ಲೆಗಳ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಆಗಸ್ಟ್ 20 ರಂದು ಅಧಿವೇಶನದ ಕಲಾಪದಲ್ಲಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ರವರು ಸರ್ಕಾರದ ಗಮನಸೆಳೆದರು.

