ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್, ಲಯನ್ಸ್ ಕ್ಲಬ್ ಕಿನ್ನಿಗೋಳಿ ಜಂಟಿ ಆಶ್ರಯದಲ್ಲಿ ಆರೋಗ್ಯ ಶಿಬಿರ

0
121

ಮುಲ್ಕಿ: ಬಪ್ಪನಾಡು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಲಯನ್ಸ್ ಕ್ಲಬ್ ಕಿನ್ನಿಗೋಳಿ, ಟೈಲರ್ಸ್ ಎಶೋಸಿಷನ್, ಯುಗಪುರುಷ ಕಿನ್ನಿಗೋಳಿ ಜಂಟಿ ಆಶ್ರಯದಲ್ಲಿ ಕೆ.ಎಂ.ಸಿ ದುರ್ಗಾಸಂಜೀವಿನಿ ಕಟೀಲು ಸಹಯೋಗದೊಂದಿಗೆ ಆರೋಗ್ಯ ಶಿಬಿರವು ಅತ್ಯಂತ ಯಶಸ್ವಿಯಾಗಿ ಜರಗಿತು.

158 ಜನ ಶಿಬಿರದ ಪ್ರಯೋಜನವನ್ನು ಪಡೆದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಭುವನಾಭಿರಾಮ ಉಡುಪರು ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವುದು ಕೇವಲ ಕಾಟಚಾರಕಾಗದೆ ಪರಿಸರದ ಜನರು ಅದರ ಪ್ರಯೋಜನನ್ನು ಪಡೆದು ಆರೋಗ್ಯ ಪೂರ್ಣ ಜೀವನವನ್ನು ನಡೆಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ನ ಅಧ್ಯಕ್ಷರಾದ ಅನಿಲ್ ಕುಮಾರ್ ಸ್ಥಾಪಕ ಅಧ್ಯಕ್ಷರಾದ ವೆಂಕಟೇಶ್ ಹೆಬ್ಬಾರ್ ಅಶ್ವಿನಿ ಶರ್ಮ, ಸಂತೋಷ್ ಕುಮಾರ್, ಬಿ. ಶಿವಪ್ರಸಾದ್ ಪ್ರಣವ್ ಶರ್ಮ, ಲಯನ್ಸ್ ಕ್ಲಬ್ ಕಿನ್ನಿಗೋಳಿ ಅಧ್ಯಕ್ಷರಾದ ಸುಧಾಕರ್ ಶಿಬರೂರು, ಪೀಟರ್ ಪೌಲ್ ಮಿರಂದ, ಡೇರಿಲ್ ಮಿರಂದ, ಟೈಲರ್ ಅಸೋಸಿಯೇಷನ್ ಅಧ್ಯಕ್ಷ ಶೇಖರ್ ಪೂಜಾರಿ ಗೌರವಾಧ್ಯಕ್ಷ ಶಂಕರ್ ಕೋಟ್ಯಾನ್‌, ಪ್ರಜ್ವಲ್ ಕುಮಾರ್, ಮೋಹನ್ ಎಸ್ಕೋಡಿ, ದಾಮೋದರ್ ಶೆಟ್ಟಿಗಾರ್, ತುಳಸಿ, ಡಾಕ್ಟರ್ ಶಿವಾನಂದ ಪ್ರಭು, ಡಾಕ್ಟರ್ ಕೀರ್ತನ್ ರಾವ್, ನಿತೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here