ಉಡುಪಿ : ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್ ಕ್ಲಬ್ ಬನ್ನಂಜೆ ಕ್ರೌನ್ ವತಿಯಿಂದ 2026/27 ನೇ ಸಾಂಸ್ಥಿಕ ವರ್ಷದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮವು ಆಗಸ್ಟ್ 7, 2025 ರ ಶುಕ್ರವಾರದಂದು ಸಂಜೆ 7 ಗಂಟೆಗೆ ಉಡುಪಿ ಟೌನ್ ಹಾಲ್‌ನಲ್ಲಿ ವಿಜೃಂಭಣೆಯಿಂದ ಜರಗಿತು.

ಮುಖ್ಯ ಅತಿಥಿಗಳು
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಿಎಂಎಫ್ ಲಯನ್ ಹರಿಪ್ರಸಾದ್ ರೈ – ಫಸ್ಟ್ ವೈಸ್ ಡಿಸ್ಟ್ರಿಕ್ಟ್ ಗವರ್ನರ್, ಡಿಸ್ಟ್ರಿಕ್ಟ್ 317ಸಿ ಮತ್ತು ಎಂಜೆಎಫ್ ಲಯನ್ ಜಯಕರ ಶೆಟ್ಟಿ ಇಂದ್ರಾಳಿ – ಡಿಸ್ಟ್ರಿಕ್ಟ್ ಗವರ್ನರ್, ಡಿಸ್ಟ್ರಿಕ್ಟ್ 317ಸಿ 2011-12 ರವರು ಆಗಮಿಸಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

2026/2027ನೇ ಸಾಲಿನ ನೂತನ ಪದಾಧಿಕಾರಿಗಳು ಈ ಸಾಲಿಗೆ ಆಯ್ಕೆಯಾದ ನೂತನ ಪದಾಧಿಕಾರಿಗಳು:
- ಅಧ್ಯಕ್ಷರು: ಲಯನ್ ಸುಮಾಲಿನಿ ದಯಾನಂದ
- 1ನೇ ಉಪಾಧ್ಯಕ್ಷರು: ಲಯನ್ ವಿದ್ಯಾಲತಾ ಯು ಶೆಟ್ಟಿ
- ಕಾರ್ಯದರ್ಶಿ: ಲಯನ್ ಅನುಪಮ ಜಯಕುಮಾರ್
- ಖಜಾಂಚಿ: ಲಯನ್ ರಮಾದೇವಿ
- ಲಯನ್ ಟೀಮರ್: ಲಯನ್ ಸೃಜನ್ ಶೆಟ್ಟಿ
- ಟೈಲ್ ಟ್ವಿಸ್ಟರ್: ಲಯನ್ ಪ್ರೇಮಾ ಶೆಟ್ಟಿ
ಚೇರ್‌ಪರ್ಸನ್‌ಗಳು:
ಕ್ಲಬ್ ಸರ್ವಿಸ್: ಲಯನ್ ಅಶ್ವಥ್ ನಾಯಕ್
ಕ್ಲಬ್ ಮಾರ್ಕೆಟಿಂಗ್: ಲಯನ್ ರವೀಂದ್ರ ಕುಂದರ್
ಸದಸ್ಯತ್ವ ಸಮಿತಿ: ಲಯನ್ ವಿದ್ಯಾ ಶೆಟ್ಟಿ, ಕಾರ್ಕಳ
ನಿರ್ದೇಶಕರು:
ಲಯನ್ ಮಾಯಾ ಶೆಟ್ಟಿ
ಲಯನ್ ರಂಜಿತಾ ಶೆಟ್ಟಿ
ಲಯನ್ ಶಕುಂತಲಾ ಶೆಟ್ಟಿ
ಲಯನ್ ವಿಶಾಲಾ ಶೆಟ್ಟಿ
ಲಯನ್ ಅಶೋಕ್ ಶೆಟ್ಟಿ
2025-2026ನೇ ಸಾಲಿನ ಮಾಜಿ ಪದಾಧಿಕಾರಿಗಳು
ಅಧ್ಯಕ್ಷರು ಲಯನ್ ಅಶೋಕ್ ಡಿ. ಶೆಟ್ಟಿ, ಕಾರ್ಯದರ್ಶಿ ಲಯನ್ ಪ್ರೇಮಾ ಶೆಟ್ಟಿ ಅವರು ಉಪಸ್ಥಿತರಿದ್ದರು.
ಸನ್ಮಾನ ಹಾಗೂ ಸೇವಾ ಕಾರ್ಯ
ಈ ಸಂದರ್ಭದಲ್ಲಿ ದೈವಾರಾಧನೆ, ಸಮಾಜ ಸೇವಾ, ಸಹಕಾರಿ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಅಮೂಲ್ಯ ಸೇವೆಯನ್ನು ಪರಿಗಣಿಸಿ ಶ್ರೀ ವಿನೋದ್ ಶೆಟ್ಟಿ ಅವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಮಮತಾ ಶೆಟ್ಟಿ ಮತ್ತು ಪ್ರಶಾಂತ್ ಪೂಜಾರಿ ಅವರನ್ನು ಕೂಡ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ 2 ಟೈಲರಿಂಗ್ ಮಿಷನ್‌ಗಳನ್ನು ವಿತರಿಸಲಾಯಿತು ಹಾಗೂ ಆರ್ಥಿಕ ಸಹಾಯವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಕ್ಲಬ್‌ನ ಎಲ್ಲಾ ಸದಸ್ಯರು, ಗಣ್ಯರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಪೂಜಾ ಶೆಟ್ಟಿ ಅವರು ಅಚ್ಚುಕಟ್ಟಾಗಿ ನೆರವೇರಿಸಿದರು.

