ಮುಲ್ಕಿ: ಜಾಗತಿಕ ಹಿರಿಯ ನಾಗರಿಕ ದಿನಾಚರಣೆ ಪ್ರಯುಕ್ತ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನಿಂದ ಹಿರಿಯ ನಾಗರಿಕರೂ ವಿಶ್ರಾಂತ ಮುಖ್ಯೋಪಾಧ್ಯಾಯರಾದ ಸೀಮಂತೂರಿನ ವಿಷ್ಣುಮೂರ್ತಿ ಭಟ್ ಅವರನ್ನು ಅವರ ಸ್ವಗೃಹದಲ್ಲಿ ಗೌರವಿಸಲಾಯಿತು.
ಸ್ಥಾಪಕ ಅಧ್ಯಕ್ಷರಾದ ಲ. ವೆಂಕಟೇಶ ಹೆಬ್ಬಾರ್ ಪ್ರಾಸ್ತವಿಕವಾಗಿ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆಯನ್ನು ಮಾಡಿ ಮುಖ್ಯೋಪಾಧ್ಯಾಯರಾಗಿ ಸರ್ಕಾರಿ ಶಾಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದಂತಹ ಕೀರ್ತಿ ವಿಷ್ಣುಮೂರ್ತಿ ಭಟ್ ಇವರದು. ದಕ್ಷಿಣ ಕನ್ನಡ ಜಿಲ್ಲೆಯ ಶಿಮಂತೂರು ಗ್ರಾಮದ ವಾಸುದೇವ ಭಟ್ ಮತ್ತು ಶಾರದಾ ಭಟ್ಟರ ಪುತ್ರನಾಗಿ ಜನಿಸಿದ ವಿಷ್ಣುಮೂರ್ತಿ ಭಟ್ ಇವರು ತಮ್ಮ ಕಾಯಕವನ್ನು ಹಾಸನ ಜಿಲ್ಲೆಯಲ್ಲಿ ಪ್ರಾರಂಭಿಸಿ ಅಲ್ಲೇ ನಿವೃತ್ತರಾಗಿ ಮುಂದೆ ತಮ್ಮ ಜನ್ಮ ಭೂಮಿಯಾದ ಶಿಮಂತೂರಿನಲ್ಲಿ ಆದಿ ಜನಾರ್ಧನ ಸ್ವಾಮಿಯ ಸೇವೆಯನ್ನು ಉದ್ದೇಶದೊಂದಿಗೆ ಮತ್ತೆ ಊರಿಗೆ ಬಂದು ನೆಲೆಸಿರುವುದು ಸಂತೋಷದ ವಿಚಾರ . ಪತ್ನಿ ಹಾಗೂ ಎರಡು ಗಂಡು ಮಕ್ಕಳು ,ಸೊಸೆಯಂದಿರು ಹಾಗೂ ಮೂರು ಜನ ಮೊಮ್ಮಕ್ಕಳ ಸುಂದರ ಪರಿವಾರ ಇವರದಾಗಿದೆ ಇವರ ಮುಂದಿನ ಜೀವನ ಉತ್ತಮವಾಗಲಿ ಎಂದು ಹಾರೈಸಿದರು
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ನ ಅಧ್ಯಕ್ಷರಾದ ಅನಿಲ್ ಕುಮಾರ್ ಮಾಜಿ ವಲಯ್ಯಾಧ್ಯಕ್ಷರಾದ ಪ್ರತಿಭಾ ಹೆಬ್ಬಾರ್, ಬಿ ಶಿವಪ್ರಸಾದ್ ಪ್ರಣವ್ ಶರ್ಮ, ಕಾಮೇಶ್ವರಿ ಭಟ್ ಭಾಸ್ಕರ್ ಕಾಂಚನ್ ಸುದರ್ಶನ್ ಉಪಸ್ಥಿತರಿದ್ದರು.

