ಉಜಿರೆ: ನಾರಾವಿಯಲ್ಲಿರುವ ಭಗವಾನ್ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಅನಂತನೋಂಪಿ ಆರಾಧನಾ ವಿಧಾನವು ಸೆ. 5, 6 ಮತ್ತು 7ರಂದು ನಡೆಯಲಿದೆ ಎಂದು ಬಸದಿಯ ಆಡಳಿತ ಸಮಿತಿಯವರು ತಿಳಿಸಿದ್ದಾರೆ.
ಸೆ. 5: ಅನಂತತ್ರಯೋದಶಿ: ಬೆಳಿಗ್ಯೆ ಎಂಟು ಗಂಟೆಯಿಂದ ಜಿನಾಭಿಷೇಕದೊಂದಿಗೆ ನೋಂಪಿ ಆರಾಧನಾ ವಿಧಾನ ಪ್ರಾರಂಭ
ಸೆ.6: ಶನಿವಾರ: ಅನಂತಚತುರ್ದಶಿ: ಬೆಳಿಗ್ಗೆ ಎಂಟು ಗಂಟೆಯಿಂದ ಜಿನಾಭಿಷೇಕದೊಂದಿಗೆ ನೋಂಪಿ ಆರಾಧನಾ ವಿಧಾನ ಪ್ರಾರಂಭ. ಮಧ್ಯಾಹ್ನ ಒಂದು ಗಂಟೆಗೆ ಮತ್ತು ಮಂಗಳಾರತಿ.
ಸೆ.7: ಭಾನುವಾರ: ಅನಂತಹುಣ್ಣಿಮೆ: ಬೆಳಿಗ್ಯೆ ಎಂಟು ಗಂಟೆಯಿಂದ ಆರಾಧನಾ ವಿಧಾನ ಪ್ರಾರಂಭ
ಮಂಗಲ ಪ್ರವಚನ: ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಜೈನಮಠ, ಕಾರ್ಕಳ. ಮೂಡಬಿದ್ರೆ ಸರ್ವೇಶ್ ಜೈನ್ ಮತ್ತು ಬಳಗದವರಿಂದ ಸಂಗೀತ ಪೂಜಾಷ್ಟಕ ಕಾರ್ಯಕ್ರಮವಿದೆ.
