ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನಿಂದ ರಸ್ತೆ ಸುರಕ್ಷತೆ ಇಮೇಜ್ ಬಿಲ್ಡಿಂಗ್ ಹೋರ್ಡಿಂಗ್ ಅನಾವರಣ

0
138

ಮಂಗಳೂರು ಉಡುಪಿ ಗಡಿಭಾಗವಾದ ಶಾಂಭವಿ ಸೇತುವೆಯ ಬಳಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನಿಂದ ರಸ್ತೆ ಸುರಕ್ಷತೆ ಇಮೇಜ್ ಬಿಲ್ಡಿಂಗ್ ಹೋರ್ಡಿಂಗ್ ಅನ್ನು ಪ್ರಾಂತ್ಯ ಹತ್ತರ ಪ್ರಾಂತ್ಯ ಅಧ್ಯಕ್ಷರಾದ ಜಗದೀಶ್ ಚಂದ್ರ ಡಿ.ಕೆ., ಪ್ರಾಂತ್ಯ ಹತ್ತರ ವಲಯ 1 ರ ವಲಯ ಅಧ್ಯಕ್ಷರಾದ ಮೇಲ್ವಿನ್ ಸಲ್ದಾನ ಹಾಗೂ ಮಂಗಳೂರು ಉತ್ತರ ವಲಯದ ಟ್ರಾಫಿಕ್ ಎಎಸ್ಐ ಮಂಜುನಾಥ್ ಇವರ ಉಪಸ್ಥಿತಿಯಲ್ಲಿ ಅನಾವರಣವನ್ನು ಮಾಡಲಾಯಿತು.

ಈ ಸಂದರ್ಭ ಮಾತನಾಡಿದ ಪ್ರಾಂತ್ಯ ಅಧ್ಯಕ್ಷರು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನಮ್ಮ ಜಿಲ್ಲೆಯಲ್ಲಿ ಉತ್ತಮ ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದು ಸತತವಾಗಿ ಕಳೆದ ಮೂರು ವರ್ಷಗಳಿಂದ ಲಯನ್ಸ್ ಜಿಲ್ಲೆಯಲ್ಲಿ ಮೊದಲಿನ ಸ್ಥಾನವನ್ನು ಪಡೆದುಕೊಂಡಿದೆ. ನಿಮ್ಮ ಈ ಸೇವ ಕಾರ್ಯಕ್ರಮಗಳು ಹೀಗೆ ಮುಂದುವರೆಯಲಿ ಎಂದು ಹಾರೈಸಿದರು. ಮಂಗಳೂರು ಉತ್ತರ ವಲಯದ ಟ್ರಾಫಿಕ್ ಎಎಸ್ಐ ಮಂಜುನಾಥ್ ರಸ್ತೆ ಸುರಕ್ಷತೆಗೆ ಅಗತ್ಯವಿರುವ ಸೂಚನಾ ಫಲಕ ಹಾಗೂ ರಸ್ತೆ ಸುರಕ್ಷತೆ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಲಯನ್ಸ್ ನಂತಹ ಸಂಘ ಸಂಸ್ಥೆಗಳು ನಡೆಸಿ ರಸ್ತೆ ಸುರಕ್ಷತೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿರುವುದು ನಿಜಕ್ಕೂ ಪ್ರಶಂಶನೀಯ ಎಂದರು ಈ ಕಾರ್ಯಕ್ರಮದಲ್ಲಿ ಸ್ಥಾಪಕ ಅಧ್ಯಕ್ಷರಾದ ಲಯನ್ ವೆಂಕಟೇಶ ಹೆಬ್ಬಾರ್ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ನ ಅಧ್ಯಕ್ಷ ರಾದ ಅನಿಲ್ ಕುಮಾರ್ ಕೋಶಾಧಿಕಾರಿ ಸಂತೋಷ್ ಕುಮಾರ್, ನಿಕಟಪೂರ್ವ ಅಧ್ಯಕ್ಷರಾದ ಬಿ ಶಿವಪ್ರಸಾದ್, ಉಪಾದಕ್ಯ ಪುಷ್ಪರಾಜ್ ಚೌಟ, ಭಾಸ್ಕರ್ ಕಾಂಚನ್ ಸುಧೀರ್ ಬಾಳಿಗ, ಮಾಜಿ ವಲಯ್ಯಾಧ್ಯಕ್ಷರಾದ ಪ್ರತಿಭಾ ಹೆಬ್ಬಾರ್, ಕಲ್ಲಪ್ಪ ತಡವಲಗ ಉಪಸ್ಥಿತರಿದ್ದರು ಪುಷ್ವರಾಜ್ ಚೌಟ ಕಾರ್ಯಕ್ರಮವನ್ನು ನಿರೂಪಿಸಿದರು

LEAVE A REPLY

Please enter your comment!
Please enter your name here