ಉಜಿರೆ: ಧರ್ಮ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ನಾಳೆ ಶುಕ್ರವಾರ ಅಪರಾಹ್ನ ಎರಡು ಗಂಟೆಯಿಂದ ಸರ್ವಧರ್ಮೀಯರ ಧರ್ಮಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಎಲ್ಲಾ ದೇವಸ್ಥಾನಗಳು, ದೈವಸ್ಥಾನಗಳು ಹಾಗೂ ಮಠ-ಮಂದಿರಗಳ ಆಡಳಿತ ಮಂಡಳಿಯವರು, ಸಮಿತಿಗಳ ಸರ್ವಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸುವರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಂಘಟಕರು ತಿಳಿಸಿದ್ದಾರೆ.
