ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್ (MCHP ) ನ ಕ್ಲಿನಿಕಲ್ ನ್ಯೂಟ್ರಿಷನ್ ಅಂಡ್ ಡಯಟೆಟಿಕ್ಸ್ ವಿಭಾಗವು ರಾಷ್ಟ್ರೀಯ ಪೌಷ್ಟಿಕಾಂಶ ವಾರ ಮತ್ತು ರಾಷ್ಟ್ರೀಯ ಪೋಷಣ್ ಮಹಾ 2025 ಇದರ ಅಂಗವಾಗಿ ಸೆಪ್ಟೆಂಬರ್ 3, ರಂದು ಪೌಷ್ಟಿಕಾಂಶ ಸಮಾವೇಶವನ್ನು ಆಯೋಜನೆಗೊಳಿಸಲಾಗಿತ್ತು.
ವಿದ್ಯಾರ್ಥಿಗಳು ತಯಾರಿಸಿದ ಆಹಾರದಲ್ಲಿರುವ ಸಕ್ಕರೆ ಮತ್ತು ಎಣ್ಣೆಯ ಸೂಚನಾ ಫಲಕವನ್ನು ತೆರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳಿಂದ “ಏಕ್ ಪೇಡ್ ಮಾ ಕೆ ನಾಮ್” ಎಂಬ ಧ್ಯೇಯ ದೊಂದಿಗೆ ಮೈಕ್ರೋ ಗ್ರೀನ್ಸ್ ನ್ನು ಬಿತ್ತಲಾಯಿತು.
ಈ ಕಾರ್ಯಕ್ರಮದಲ್ಲಿಕಸ್ತೂರ್ಬಾ ಆಸ್ಪತ್ರೆಯ ಕ್ರಿಟಿಕಲ್ ಕೇರ್ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ .ವಿಶಾಲ್ ಶಾನ್ ಬಾಗ್ ಮತ್ತು ಬೆಂಗಳೂರಿನ ಹೆಚ್ ,ಸಿ, ಜಿ ಆಸ್ಪತ್ರೆಯ ಪಥ್ಯಾಹಾರ ವಿಭಾಗದ ಮುಖ್ಯಸ್ಥರಾದ ಡಾ .ಎಸ್ತರ್ ಸತ್ಯರಾಜ್ ಇವರಿಂದ ಕ್ರಿಟಿಕಲ್ ಕೇರ್ ನಲ್ಲಿ ಪೌಷ್ಟಿಕಾಂಶದ ಮಹತ್ವ ಎಂಬ ವಿಷಯದ ಮೇಲೆ ಭಾಷಣಗಳು ನಡೆದವು.ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್ (MCHP ) ನ ಡೀನ್ ಆಗಿರುವ ಡಾ.ಅರುಣ್ ಜಿ ಮಯ್ಯಅವರು ಮುಖ್ಯ ಅತಿಥಿಗಳಾಗಿದ್ದರು. ಪಥ್ಯಾಹಾರ ವಿಭಾಗದ ಮುಖ್ಯಸ್ಥರು ಮತ್ತು ಸಹ ಪ್ರಾಧ್ಯಾಪಕರು ಆಗಿರುವ ಸುವರ್ಣ ಹೆಬ್ಬಾರ್ ಮತ್ತು ಪ್ರಧ್ಯಾಪಕಿಯಾದ ದಿವ್ಯಲಕ್ಷ್ಮಿ ಶೆಣೈ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಸಂಶೋಧನಾ ವಿದ್ಯಾರ್ಥಿಗಳು ,ಪಥ್ಯಾಹಾರ ತಜ್ಞರು ಉಪಸ್ಥಿತರಿದ್ದರು.

