ರಾಜಕೀಯ ಟೀಕೆ- ಸಭ್ಯತೆಯ ಚೌಕಟ್ಟಿನಲ್ಲಿರಲಿ: ಜಯಪ್ರಕಾಶ್​ ಹೆಗ್ಡೆ

0
21


ಉಡುಪಿ: ರಾಜಕೀಯ ಟೀಕೆ-ಟಿಪ್ಪಣಿಗಳು ಕಾನೂನಿನ ಹಾಗೂ ಸಭ್ಯತೆಯ ಚೌಕಟ್ಟಿನಲ್ಲಿರಬೇಕು. ಶಾಸಕರು ಜನಪ್ರತಿನಿಧಿಗಳಾಗಿ ತಮ್ಮ ಭಾಷೆಯ ಬಳಕೆಯಲ್ಲಿ ಜಾಗರೂಕರಾಗಿರಬೇಕು. ಪಕ್ಷದ ಸಿದ್ಧಾಂತದ ಬಗ್ಗೆ ಹೋರಾಟ ಮಾಡಲು ಪ್ರತಿಯೊಬ್ಬರಿಗೂ ಹಕ್ಕಿದೆ. ಆದರೆ ವೈಯಕ್ತಿಕ ನಿಂದನೆ ಹಾಗೂ ಅತಿರೇಕದ ಮಾತುಗಳು ಸರಿಯಲ್ಲ ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್​ ಹೆಗ್ಡೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ಲಾಠಿಚಾರ್ಜ್​ ಹಾಗೂ ರಬ್ಬರ್​ ಪೆಲೆಟ್​ ದಾಳಿಯನ್ನು ಖಂಡಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ, ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು ಎಂದು ಅವರು ಪ್ರತಿಪಾದಿಸಿದರು.
ಕಾನೂನು ಕ್ರಮ
ಉಡುಪಿ ಶಾಸಕ ಯಶ್ಪಾಲ್​ ಸುವರ್ಣ ಬಾಬರಿ ಮಸೀದಿ ಧ್ವಂಸ ಹಾಗೂ ರಾಹುಲ್​ ಗಾಂಧಿ ಅವರ ಕುಟುಂಬದ ಕುರಿತು ನೀಡಿದ ಹೇಳಿಕೆಗಳು ಶಾಸಕ ಸ್ಥಾನಕ್ಕೆ ಶೋಭೆ ತರುವುದಿಲ್ಲ. ಈಗಾಗಲೇ ಈ ಸಂಬಂಧ ಎಫ್​ಐಆರ್​ ದಾಖಲಾಗಿದ್ದು, ಅಷ್ಟಕ್ಕೇ ಇದು ಮುಗಿಯುವುದಿಲ್ಲ. ಶಾಸಕರ ವಿರುದ್ಧ ಕ್ರಿಮಿನಲ್​ ಹಾಗೂ ಸಿವಿಲ್​ ಮಾನನಷ್ಟ ಮೊಕದ್ದಮೆ ಹೂಡಲು ತೀಮಾರ್ನಿಸಲಾಗಿದೆ ಎಂದರು.
ಸುಷ್ಮಾ ಸ್ವರಾಜ್​ ಮಾತುಗಳ ನೆನಪು
ಸುಷ್ಮಾ ಸ್ವರಾಜ್​ ಸಂಸತ್ತಿನಲ್ಲಿ ಮಾತನಾಡುತ್ತಾ ಆಡಳಿತ ಮತ್ತು ವಿರೋಧ ಪಕ್ಷಗಳು ವೈರಿಗಳಲ್ಲ, ಕೇವಲ ಸೈದ್ಧಾಂತಿಕ ವಿರೋಧಿಗಳು ಅಷ್ಟೇ. ಇದನ್ನು ಪ್ರತಿಯೊಬ್ಬ ಜನಪ್ರತಿನಿಧಿಯೂ ಅರ್ಥೈಸಿಕೊಳ್ಳಬೇಕು ಎಂದರು.
ಮಹಿಳಾ ಕಾಂಗ್ರೆಸ್​ ಅಧ್ಯೆ ಜ್ಯೋತಿ ಹೆಬ್ಬಾರ್​, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ರಮೇಶ್​ ಕಾಂಚನ್​, ಮುಖಂಡರಾದ ಪ್ರಸಾದ್​ರಾಜ್​ ಕಾಂಚನ್​, ಕಿಶನ್​ ಹೆಗ್ಡೆ ಕೊಳ್ಕೆಬೈಲು, ಹರೀಶ್​ ಕಿಣಿ ಉಪಸ್ಥಿತರಿದ್ದರು.

ಇಂದು ಕಾಂಗ್ರೆಸ್​ ಪ್ರತಿಭಟನೆ
ಉಡುಪಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಯಶ್​ಪಾಲ್​ ಸುವರ್ಣ ತಮ್ಮ ಹುದ್ದೆ ನತೆ ಮರೆತು ರಾಹುಲ್​ ಗಾಂಧಿ ವಿರುದ್ಧ ಕಳಪೆ ಭಾಷೆ ಪ್ರಯೋಗಿಸಿದ್ದಾರೆ. ಇದನ್ನು ಖಂಡಿಸಿ ಜುಲೈ 31ರಂದು ಬೆಳಗ್ಗೆ 10 ಗಂಟೆಗೆ ಜಡ್ಕಾ ಸ್ಟಾ$ಂಡ್​ ಬಳಿ ಕಾಂಗ್ರೆಸ್​ ಬೃಹತ್​ ಪ್ರತಿಭಟನೆ ಆಯೋಜಿಸಿದೆ ಎಂದು ಜಿಲ್ಲಾಧ್ಯಕ್ಷ ಅಶೋಕ್​ ಕುಮಾರ್​ ಕೊಡವೂರು ತಿಳಿಸಿದರು.