ಚೆಸ್ ನಲ್ಲಿ ಸಾಧನೆ; ಆರಾಧ್ಯ ಎಸ್. ಶೆಟ್ಟಿಗೆ ಸನ್ಮಾನ

0
120

JCI ಕುಂದಾಪುರ ಅವರ 50ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಕ್ರೀಡಾ ಕ್ಷೇತ್ರದಲ್ಲಿ ಅಪಾರವಾದ ಸಾಧನೆಗೈದಂತಹ ಆರಾಧ್ಯ ಎಸ್ ಶೆಟ್ಟಿ (ಸಲ್ವಾಡಿ) ಇವರಿಗೆ ಗೌರವಿಸಿ ಸನ್ಮಾನಿಸಿಸಲಾಯಿತು.

ಆರಾಧ್ಯ ಎಸ್ ಶೆಟ್ಟಿ ಇವರು ಚೆಸ್ ಕಲಿಕೆಗೆ ಪಾದಾರ್ಪಣೆ ಮಾಡಿ 5 ವರ್ಷಗಳು ಕಳೆದಿದೆ, ಆ ದಿನಗಳಿಂದ ಇಲ್ಲಿಯವರೆಗೆ ಸತತವಾಗಿ 11 ಬಾರಿ ಅರ್ಧ ಅಂಕಗಳಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವುದರಿಂದ ವಂಚಿತರಾಗಿದ್ದಾರೆ ಆದರೆ ಸೋಲೇ ಗೆಲುವಿನ ಮೆಟ್ಟಿಲು ಎಂದು ಬಂದ ಸೋಲನ್ನೆಲ್ಲ ಧಾರಾಳ ಮನಸ್ಸಿನಿಂದ ಸ್ವೀಕರಿಸಿ ಎಂದಿಗೂ ಚೆಸ್ ನಲ್ಲಿ ಸಾಧನೆ ಮಾಡಲು ಸತತವಾಗಿ ಪ್ರಯತ್ನಿಸುತ್ತಾ ಬಂದಿರುತ್ತಾರೆ.

ಇವರ ಸಾಧನೆಗೆ ಉತ್ತೇಜಿಸುವಂತೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈತ ವಿದ್ಯಾರ್ಥಿನಿಯಾದ ಆರಾಧ್ಯ ಇವರಿಗೆ ಸಮ್ಮಾನಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ.* ಇವರ ಚೆಸ್ ಪಯಣ ಹೀಗೆ ಮುಂದುವರೆಯಲಿ ಕಾರ್ಯಕ್ರಮದಲ್ಲಿ ಜೆಸಿಐ ಕುಂದಾಪುರ ಅಧ್ಯಕ್ಷರಾದ ಜೆಸಿ ಸುಬ್ರಹ್ಮಣ್ಯ ಆಚಾರ್ಯ ಹಾಗೂ ಪೂರ್ವದ್ಯಕ್ಷರಾದ ಜೆಸಿ ರತ್ನಾಕರ್ ಹಾಗೂ ಜೆಸಿಐ ಕುಂದಾಪುರದ ಕೋಶಾಧಿಕಾರಿ ಜೆಸಿ ಚೇತನ್ ಹಾಗೂ ಜೆಸಿ ಪ್ರದೀಪ್ ಪಾಲ್ಗೊಂಡಿದ್ದರು ಕಾರ್ಯಕ್ರಮದ ಕೊನೆಗೆ ಕಾರ್ಯದರ್ಶಿ ಜೆಸಿ ಪ್ರವೀಣ್ ಇವರು ವಂದಿಸಿದರು.

LEAVE A REPLY

Please enter your comment!
Please enter your name here