ಸಂಘಟಕರಿಗೆ ಸೌಂದರ್ಯ ಪ್ರಜ್ಞೆ ಅತ್ಯಂತ ಪ್ರಾಮುಖ್ಯವಾದುದು- ಡಾ. ಮೋಹನ್ ಆಳ್ವ

0
156

ಮೂಡುಬಿದಿರೆ: ಆಳ್ವಾಸ್ ಕೃಷಿ ಸಿರಿ ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ವಾರ್ಷಿಕ ಮಿಲನೋತ್ಸವ, ಮನೋರಂಜನಾತ್ಮಕ ಕ್ರೀಡಾಕೂಟಗಳ ಸ್ಪರ್ಧೆಯನ್ನು ಉದ್ಘಾಟಿಸಿ, ವೆಬ್ಸೈಟ್ ಅನಾವರಣಗೊಳಿಸಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಮೋಹನ್ ಆಳ್ವ ಮಾತನಾಡಿದರು.

ಅವರು ತಮ್ಮ ಭಾಷಣದಲ್ಲಿ ಈ ನೆಲದಲ್ಲಿ ಹುಟ್ಟಿರುವ ನಾವು ನಮ್ಮ ದೇಶದ ಮಣ್ಣು, ನೀರು, ಪರಿಸರದ ಬಗ್ಗೆ ಚಿಂತನೆ ನಡೆಸಿ ಸಹನೆ, ತಾಳ್ಮೆ, ಪರಿಶ್ರಮ, ಹಾಗೂ ಖಚಿತತೆಯಿಂದ ಪ್ರಾಮಾಣಿಕತೆಯಲ್ಲಿ ಕೆಲಸವನ್ನು ನಿರ್ವಹಿಸಬೇಕಾಗಿದೆ. ಶಾಮಿಯಾನ ಮಾಲಕರಿಗೂ ಕೂಡ ಸಭೆ ಸಮಾರಂಭದ ಸಿಂಗಾರಿಕೆ, ಸೌಂದರ್ಯ ಪ್ರಜ್ಞೆ, ಜನರ ಸಂಘಟನೆಗಳ ಅತಿ ಅಗತ್ಯವಿದೆ. ಎಲ್ಲದರಲ್ಲಿಯೂ ದೇಶೀಯ ಚಿಂತನೆಯನ್ನು ಜಾರಿಗೆ ತಂದಲ್ಲಿ ಕಾರ್ಯಕ್ರಮಗಳು ಬಹಳ ಸುಂದರವಾಗಿ, ಜವಾಬ್ದಾರಿಯುತವಾಗಿ ಮೂಡಿಬರಲು ಸಾಧ್ಯ ಇದೆ ಎಂದರು.
ಸಂಘದ ಶಕ್ತಿಯ ಸಾರ್ಥಕತೆ ಆಗಿರುವುದಕ್ಕೆ ತಮ್ಮ ಆಶೀರ್ವಾದಗಳನ್ನು ಪುತ್ತಿಗೆ ಅಡಿಗಳ್ ಅನಂತ ಕೃಷ್ಣ ಭಟ್ ಶುಭ ಹಾರೈಸಿದರು. ಸಭೆಯನ್ನು ಉದ್ದೇಶಿಸಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಸೀದಿಯ ಖತೀಬ್ ಷರೀಫ್ ದಾರಿನಿ, ಅರಮನೆಯ ಕುಲದೀಪ್ ಎಂ ಮಾತನಾಡಿದರು.
ವೇದಿಕೆಯಲ್ಲಿ ಚರ್ಚಿನ ಧರ್ಮ ಗುರು ರೆ.ಫಾ. ಓನಿಲ್ ಡಿಸೋಜಾ, ಉದ್ಯಮಿಗಳಾದ ಅಶ್ವಿನ್ ಜೆ ಪಿರೇರಾ, ಗೌರವಾಧ್ಯಕ್ಷರುಗಳಾದ ಆರ್ ಕೆ ಭಟ್, ಗಂಗಾಧರ ಶೇಟ್, ಜಿಲ್ಲಾ ಕಾರ್ಯದರ್ಶಿ ಮ್ಯಾಕ್ಸಿಮ್ ಸೀಕ್ವೆರಾ, ಕೋಶಾಧಿಕಾರಿ ನಿಶ್ಚಿತ್ ಪೂಜಾರಿ, ಹಾಗೂ ಮೂಡುಬಿದಿರೆ ತಾಲೂಕು ಪದಾಧಿಕಾರಿಗಳಾದ ದಿವಾಕರ ದೇವಾಡಿಗ, ಆಲ್ಡ್ರಿನ್ ಡಿಸೋಜ ಹಾಜರಿದ್ದರು.
ಮೂಡುಬಿದಿರೆ ಘಟಕದ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಸ್ವಾಗತಿಸಿದರು. ಜಿಲ್ಲಾ ಅಧ್ಯಕ್ಷ ಬಾಬು ಕೆ ವಿಟ್ಲ ಪ್ರಾಸ್ತಾವಿಕ ಮಾತನಾಡಿದರು. ತರುವಾಯ ಹಲವಾರು ಕ್ರೀಡಾಕೂಟಗಳು ಪರಿಸರದಲ್ಲಿ ನಡೆಯಿತು.

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

ಭಕ್ತಿಯ ನೆಲೆವೀಡು ಮುದ್ರಾಡಿ ಶಾರಾದೋತ್ಸವಕ್ಕೆ ಈ ಬಾರಿ 6ನೇ ವರ್ಷದ ಸಂಭ್ರಮ. ಸೆ. 29ರಂದು ನಡೆಯುವ ಈ ಸಂಭ್ರಮದಲ್ಲಿ ಅಂದು ಬೆಳಿಗ್ಗೆ 8 ಗಂಟೆಗೆ ಶಾರದಾ ಪೂಜೆಯೊಂದಿಗೆ ವೈದಿಕ ಕಾರ್ಯಕ್ರಮಗಳಿಗೆ ಚಾಲನೆ. 11-00 ಗಂಟೆಗೆ ಮಹಾಪೂಜೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯಿಲಿ ಅವರ ಅಧ್ಯಕ್ಷತೆ ಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಪದ್ಮಗೋಪಾಲ್‌ ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಅವರು ದಿಕ್ಸೂಚಿ ಉಪನ್ಯಾಸ ಮಾಡಲಿದ್ದು, ಮುದ್ರಾಡಿ ಗ್ರಾ.ಪಂ. ಅಧ್ಯಕ್ಷೆ ವಸಂತಿ ಪೂಜಾರಿ ಸೇರಿದಂತೆ ಹಲವು ಅತಿಥಿ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಮುದ್ರಾಡಿ ಶಾರದೋತ್ಸವ ಪುರಸ್ಕಾರ ಪ್ರದಾನ ಮತ್ತು ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಮಧ್ಯಾಹ್ನ 3-30 ರಿಂದ ತುಳುನಾಡ ಕಲಾಬಿರ್ಸೆ ದೀಪಕ್‌ ರೈ ಪಾಣಾಜೆ ಮಸ್ಕಿರಿ ಕುಡ್ಲ ತಂಡದ ಸದಸ್ಯರಿಂದ ತೆಲಿಕೆ ಬಂಜಿ ನಿಲಿಕೆ ಎಂಬ ಹಾಸ್ಯ ಕಾರ್ಯಕ್ರಮ ನಿಮ್ಮನ್ನು ಮನರಂಜಿಸಲಿದೆ. ಸಂಜೆ ಕುಣಿತ ಭಜನೆಯೊಂದಿಗೆ ಶಾರದಾ ಮಾತೆಯ ವೈಭವದ ಶೋಭಾಯಾತ್ರೆ ಮತ್ತು ಜಲಸ್ಥಂಭನದೊಂದಿಗೆ ಶಾರದೋತ್ಸವ ಸಂಪನ್ನ.

LEAVE A REPLY

Please enter your comment!
Please enter your name here