ಪರಿಹಾರದ ಹಣಕ್ಕಾಗಿ ಪತಿಯನ್ನೇ ಕೊಲೆ ಮಾಡಿ ಹುಲಿ ಕೊಂದಿದೆ ಎಂದ ಪತ್ನಿ!

0
126

ಮೈಸೂರು: ಪತಿಯನ್ನು  ಕೊಲೆ  ಮಾಡಿ ಹುಲಿ ಕೊಂದಿದೆ ಎಂದು ನಾಟಕವಾಡಿದ್ದ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಹುಣಸೂರು ತಾಲೂಕಿನ ಚಿಕ್ಕಹೆಜ್ಜೂರಿನಲ್ಲಿ ಘಟನೆ ನಡೆದಿದ್ದು, ವಿಷ ಹಾಕಿ ವೆಂಕಟಸ್ವಾಮಿ (45)ರನ್ನು ಪತ್ನಿ ಸಲ್ಲಾಪುರಿ ಕೊಲೆ ಮಾಡಿದ್ದಾಳೆ. ಬಳಿಕ ನಾಟಕವಾಡಿದ್ದಾಳೆ. ಕಾಡುಪ್ರಾಣಿ ದಾಳಿಯಿಂದ ಮೃತಪಟ್ಟಿದ್ದಾರೆ ಅಂದರೆ ಪರಿಹಾರ ಸಿಗುತ್ತದೆ ಎಂದು ಕೃತ್ಯವೆಸಗಿರುವುದಾಗಿ ಪತ್ನಿ ಹೇಳಿದ್ದಾಳೆ. ಸದ್ಯ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು?

ದಂಪತಿ ಅಡಕೆ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ಏಕಾಏಕಿ ಪತಿ ಕೊಲೆಗೈದು ನಾಪತ್ತೆಯಾಗಿದ್ದಾರೆ ಎಂದು ಪತ್ನಿ ದೂರು ನೀಡಿದ್ದಳು. ಕಳೆದ ಸೋಮವಾರ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿತ್ತು. ಈ ವೇಳೆ ಮನೆಯಿಂದ ಹೊರಹೋಗಿದ್ದ ಪತಿ ನಾಪತ್ತೆಯಾಗಿದ್ದು, ಹುಲಿ‌ ಕೊಂದು ಎಳೆದುಕೊಂಡು ಹೋಗಿರಬಹುದೆಂದು ನಾಟಕವಾಡಿದ್ದಳು.

ತಿಪ್ಪೆಗುಂಡಿಯಲ್ಲಿ ಶವ ಪತ್ತೆ: ಪೊಲೀಸರೇ ಶಾಕ್!

ಈ ಬಗ್ಗೆ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜಿಂಟಿ ಆಗಿ ಪರಿಶೀಲನೆ ಮಾಡಿದ್ದು, ಈ ವೇಳೆ ಯಾವುದೇ ಪ್ರಾಣಿ ಬಂದ ಕುರುಹು ಇರಲಿಲ್ಲ. ಅನುಮಾನಗೊಂಡು ಮನೆಯಲ್ಲಿ ಹುಡುಕಾಟ ನಡೆಸಿದ ಪೊಲೀಸರೇ ಒಂದು ಕ್ಷಣ ಶಾಕ್​ ಆಗಿದ್ದರು. ಏಕೆಂದರೆ ಮನೆಯ ಹಿಂದೆ ತಿಪ್ಪೆಗುಂಡಿಯಲ್ಲಿ ವೆಂಕಟಸ್ವಾಮಿ ಶವ ಕಂಡು ಬಂದಿತ್ತು.

ಇನ್ನು ವಿಚಾರಣೆ ವೇಳೆ ವೆಂಕಟಸ್ವಾಮಿ ಪತ್ನಿ ಸಲ್ಲಾಪುರಿ ಅಸಲಿ ಸತ್ಯ ಬಾಯಿಬಿಟ್ಟಿದ್ದಾರೆ. ಕಾಡುಪ್ರಾಣಿ ದಾಳಿಯಿಂದ ಮೃತಪಟ್ಟಿದ್ದಾರೆ ಅಂದರೆ ಲಕ್ಷಾಂತರ ರೂ ಪರಿಹಾರ ಸಿಗುತ್ತದೆ ಎಂದು ಕೃತ್ಯವೆಸಗಿದ್ದಾಗಿ ಆರೋಪಿ ಸಲ್ಲಾಪುರಿ ತಪ್ಪೊಪ್ಪಿಕೊಂಡಿದ್ದಾಳೆ. ಪೊಲೀಸರು ಆಕೆಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here