ಉನ್ನತವಾದ ಆದರ್ಶಗಳನ್ನು ಹೊಂದಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿ – ಸ್ವಾಮಿ ಸುಹಿತಾನಂದಜಿ ಮಹಾರಾಜ್

0
130

“ಮಂಗಳೂರು ರಾಮಕೃಷ್ಣ ಮಠ ಸಮಾಜದಲ್ಲಿ ಸ್ವಚ್ಛತೆಯಜೊತೆಗೆ ಜನರಲ್ಲಿ ಉತ್ತಮ ಚಿಂತನೆಗಳನ್ನು ಮೂಡಿಸುವ ಮೂಲಕ ಹೊಸ ಆಯಾಮವನ್ನು ನೀಡಿದೆ. ವಿದ್ಯಾರ್ಥಿಗಳು, ಪೋಷಕರು, ಸಮಾಜದಗಣ್ಯ ವ್ಯಕ್ತಿಗಳನ್ನೊಳಗೊಂಡಂತೆ ಸಮಾಜದ ಸಜ್ಜನ ನಾಗರಿಕರನ್ನುಗಮನದಲ್ಲಿಟ್ಟುಕೊಂಡು ಹಲವಾರು ಕಾರ್ಯಗಳನ್ನು ಮಾಡಿದೆ. ಈ ಕಾರ್ಯಗಳು ಇದೇರೀತಿ ಮುಂದುವರಿಯಲಿ. ಕೇವಲ ಉತ್ತಮ ಕೆಲಸ ಹಾಗೂ ಸಂಬಳ ಪಡೆಯುದರ ಜೊತೆಗೆ ಉನ್ನತವಾದ ಆದರ್ಶಗಳನ್ನು ಹೊಂದಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿ ಉತ್ತಮ ನಾಗರೀಕರಾಗೋಣ”ಎಂದು ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್, ಬೇಲೂರು ಮಠ, ಹೌರಾ, ಪಶ್ಚಿಮ ಬಂಗಾಳ ಇದರ ಉಪಾಧ್ಯಕ್ಷರಾದ ಶ್ರೀಮತ್ ಸ್ವಾಮಿ ಸುಹಿತಾನಂದಜಿ ಮಹಾರಾಜ್‌ ಅವರು ಹೇಳಿದರು.
ಮಂಗಳೂರಿನ ರಾಮಕೃಷ್ಣ ಮಿಷನ್ ನಲ್ಲಿನಡೆದ ಪ್ರಜ್ಞಾ – ವೃತ್ತಿಪರ ವಿದ್ಯಾರ್ಥಿಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಂಗಳೂರಿನ ರಾಮಕೃಷ್ಣ ಮಿಷನ್‌ ಅಮೃತ ಮಹೋತ್ಸವದ ಪ್ರಯುಕ್ತ ನಾಲ್ಕು ದಿನಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮೊದಲ ದಿನದ ಶೈಕ್ಷಣಿಕ ವಿಚಾರ ಸಂಕಿರಣ, ೧೮೯೩ ರಲ್ಲಿಚಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರ ಐತಿಹಾಸಿಕ ಭಾಷಣದ ಸ್ಮರಣಾರ್ಥ “ಸೇವೆ – ನಿಜವಾದ ಶಿಕ್ಷಣದ ಸ್ಫೂರ್ತಿ” ಎಂಬ ಪರಿಕಲ್ಪನೆಯಲ್ಲಿ ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿಮೈಸೂರು ಶ್ರೀ ರಾಮಕೃಷ್ಣಆಶ್ರಮದಅಧ್ಯಕ್ಷರು ಹಾಗೂ ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್, ಬೇಲೂರು ಮಠಇದರ ವಿಶ್ವಸ್ಥರಾದ ಸ್ವಾಮಿ ಮುಕ್ತಿದಾನಂದಜಿಹಾಗೂಮAಗಳೂರು ರಾಮಕೃಷ್ಣ ಮಠದಅಧ್ಯಕ್ಷರಾದ ಸ್ವಾಮಿಜಿತಕಾಮಾನಂದಜಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರಿನ ಎಂ.ಆರ್.ಪಿ.ಎಲ್. – ಒ.ಎನ್.ಜಿ.ಸಿ. ಯಕಾರ್ಯನಿರ್ವಾಹಕ ನಿರ್ದೇಶಕ (ಪ್ರಾಜೆಕ್ಟ್ಸ್) ಬಿ. ಹೆಚ್. ವಿ. ಪ್ರಸಾದ್‌ಅವರು ಮಾತನಾಡಿ“ಧನಾತ್ಮಕ ಮನೋಭಾವ ಮತ್ತುಧನಾತ್ಮಕ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು.ಇದು ನಮ್ಮಜೀವನವನ್ನು ನಿರ್ಧರಿಸುತ್ತದೆ. ಇದನ್ನು ನೀವು ಅಭ್ಯಸಿಸಿದಲ್ಲಿ ಇದು ನಿಮ್ಮಜೀವನಕ್ರಮವಾಗುತ್ತದೆ. ಯಶಸ್ವೀ ವ್ಯಕ್ತಿಗಳ ಜೀವನವನ್ನು ನಾವು ನೋಡಿದಾಗಅವರ ಯಶಸ್ಸಿನ ರಹಸ್ಯಇದೇಆಗಿರುತ್ತದೆ. ನಮ್ಮ ಸಂಸ್ಥೆ ಹಾಗೂ ಮಂಗಳೂರು ರಾಮಕೃಷ್ಣ ಮಿಷನ್ ಸಂಬAಧಒAದುದಶಕಕ್ಕೂ ಹಳೆಯದು. ಸ್ವಚ್ಛ ಮಂಗಳೂರು ಅಭಿಯಾನ ನಮ್ಮ ಸಂಸ್ಥೆಯ ಸಹಯೋಗದೊಂದಿಗೆಅತ್ಯAತ ಯಶಸ್ವಿಯಾಗಿ ನಡೆದಿದೆಇದರಕೀರ್ತಿರಾಮಕೃಷ್ಣ ಮಿಷನ್‌ಗೆ ಸಲ್ಲಬೇಕು. ಈ ಕಾರ್ಯವನ್ನು ನಿರಂತರವಾಗಿ ಮಾಡಿ ಕೇವಲ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯಲ್ಲದೆ ಸ್ವಚ್ಛ ಮನಸ್, ಸ್ವಚ್ಛ ಸೋಚ್, ಜಾಗೃತಿಅಭಿಯಾನದಂತಹ ಕಾರ್ಯಕ್ರಮಗಳ ಮೂಲಕ ಜನರಲ್ಲಿಜಾಗೃತಿ ಮೂಡಿಸಿದ ರಾಮಕೃಷ್ಣ ಮಿಷನ್‌ಕಾರ್ಯ ನಿಜಕ್ಕೂ ಶ್ಲಾಘನೀಯ”ಎಂದು ಹೇಳಿದರು.
ಉದ್ಘಾಟನಾ ಸಮಾರಂಭದ ನಂತರ ಸಂಪನ್ಮೂಲ ವ್ಯಕ್ತಿಗಳಿಂದ ಭಾಷಣ ಹಾಗೂ ಸಂವಾದ ನಡೆಯಿತು. ಮೈಸೂರಿನರಾಮಕೃಷ್ಣ ನೈತಿಕ ಮತ್ತುಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ ಇದರ ಸಂಚಾಲಕರಾದ ಪೂಜ್ಯ ಸ್ವಾಮಿ ಮಹಾಮೇಧಾನಂದಜಿಯವರು ಮೊದಲ ಅವಧಿಯನ್ನು ನಡೆಸಿಕೊಟ್ಟರು. ಎರಡನೇಅವಧಿಯಲ್ಲಿ ಬೆಂಗಳೂರಿನ ಮನಸ್‌ತರಬೇತಿಕೇಂದ್ರದ ನಿರ್ದೇಶಕರಾದ ಪ್ರೊ. ಕೆ. ರಘೋತ್ತಮರಾವ್‌ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ನಂತರ“ವೃತ್ತಿಜೀವನದಯಶಸ್ಸನ್ನು ಸಮುದಾಯ ಸೇವೆಯೊಂದಿಗೆ ಸಮತೋಲನಗೊಳಿಸುವುದು” ಎಂಬ ವಿಷಯದಕುರಿತಾಗಿ ನಡೆದ ಸಂವಾದದಲ್ಲಿಮAಗಳೂರಿನ ಸೆಂಟರ್ ಫಾರ್‌ಅಡ್ವಾನ್ಸ್ಡ್ ಲರ್ನಿಂಗ್ (ಅಈಂಐ) ಸಂಶೋಧನಾ ನಿರ್ದೇಶಕಿಡಾ. ಸ್ಮಿತಾ ಹೆಗ್ಡೆ, ಮಂಗಳೂರಿನ ಇಂಡಿಯಾ ಪ್ರೈ. ಲಿ. ಮಾನವ ಸಂಪನ್ಮೂಲ ವಿಭಾಗದಮುಖ್ಯಸ್ಥರಾದ ಸಂತೋಷ್ ಪೈ, ಮಂಗಳೂರಿನ ಎಸ್‌ಕ್ಯೂಬ್‌ಗ್ರೂಪ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಶಾಂಕ್ ಶೆಟ್ಟಿ ಭಾಗವಹಿಸಿದರು. ಸ್ವಚ್ಛ ಮಂಗಳೂರು ಅಭಿಯಾನದ ಮುಖ್ಯ ಸಂಯೋಜಕರಾದರAಜನ್ ಬೆಳ್ಳರ್ಪ್ಪಾಡಿ ಸಂವಾದಕಾರ್ಯಕ್ರಮ ನಿರ್ವಹಿಸಿದರು. ಭಾರತೀಯ ಸೇನೆಯ ನಿವೃತ್ತಯೋಧರಾದಕ್ಯಾಪ್ಟನ್‌ಗಣೇಶ್‌ಕಾರ್ಣಿಕ್ ಸ್ವಾಗತಿಸಿ, ಭಾರತೀಯ ಸೇನೆಯ ನಿವೃತ್ತಯೋಧರಾದಬೆಳ್ಳಾಲ ಗೋಪಿನಾಥ್‌ರಾವ್‌ವಂದಿಸಿದರು. ರೆಜಿನಾ ದಿನೇಶ್‌ಕಾರ್ಯಕ್ರಮ ನಿರ್ವಹಿಸಿದರು. ದಕ್ಷಿಣಕನ್ನಡಜಿಲ್ಲೆಯ ವಿವಿಧ ಭಾಗದಿಂದ ೧೦ ಕಾಲೇಜುಗಳ ಸುಮಾರು೭೦೦ ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here