ದೇಶದ ಪ್ರಥಮ ಸ್ವಾಯತ್ತ ಸರ್ಕಾರಿ ಪಾಲಿಟೆಕ್ನಿಕ್, ಮಂಗಳೂರು ಕೆ ಪಿ ಟಿ ಯಲ್ಲಿ ಉತ್ಕೃಷ್ಟ ತಂತ್ರಜ್ಞಾನ ವೃತ್ತಿ ಜೀವನಕ್ಕೆ ಅವಕಾಶ

0
3

ದೇಶದಲ್ಲಿಯೇ ಪ್ರಪ್ರಥಮ ಸ್ವಾಯತ್ತ ಸರ್ಕಾರಿ ಪಾಲಿಟೆಕ್ನಿಕ್ ಕೆ ಪಿ ಟಿ ಮಂಗಳೂರು ನಲ್ಲಿ ವಿದ್ಯಾರ್ಥಿಗಳಿಗೆ ಉತ್ಕೃಷ್ಟ ತಂತ್ರಜ್ಞಾನ ವೃತ್ತಿ ಜೀವನವನ್ನು ನಡೆಸಲು ಈ ವರ್ಷದಿಂದ ಅವಕಾಶ ದೊರಕಿರುತ್ತದೆ.

75 ವರ್ಷಗಳ ಸುವರ್ಣ ಪರಂಪರೆಯನ್ನು ಹೊಂದಿರುವ ಕೆಪಿಟಿ 17 ಎಕರೆ ವಿಶಾಲ ಹಸಿರು ಕ್ಯಾಂಪಸನ್ನು ಹೊಂದಿದ್ದು ಭಾರತದ ಎ ಐ ಸಿ ಟಿ ಇ ನಿಂದ ಸದಾ ಪರಿಶೀಲಿಸಲ್ಪಡುತ್ತಿದೆ.

ಸ್ವಾಯತ್ತತೆಯಿಂದಾಗಿ ತನ್ನದೇ ಪಠ್ಯಕ್ರಮವನ್ನು ಕೈಗಾರಿಕಾ ಅಗತ್ಯಗಳಿಗೆ ಪರಿಷ್ಕರಿಸಿಕೊಳ್ಳಲು, ಉದ್ಯೋಗ ಮಾರುಕಟ್ಟೆಗೆ ಸೂಕ್ತ ನವೀನ ತಂತ್ರಜ್ಞಾನದ ಕಲಿಕೆಯನ್ನು, ಕೈಗಾರಿಕಾ ಸಹಭಾಗಿತ್ವದ ಕೋರ್ಸ್ ಗಳ ವಿನ್ಯಾಸಗಳನ್ನು, ತ್ವರಿತ ಮತ್ತು ಪಾರದರ್ಶಕ ಮೌಲ್ಯಮಾಪನವನ್ನು, ಗುಣಮಟ್ಟದ ಭೋದಕ ವರ್ಗವನ್ನು, ಸಂಶೋಧನೆ, ಪ್ರಾಜೆಕ್ಟ್, ನಾವೀನ್ಯತೆಯ ಹೊಸ ತಂತ್ರಜ್ಞಾನದ ಕೋರ್ಸುಗಳನ್ನು ಕೂಡ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮನ್ನಣೆಯೊಂದಿಗೆ ಮುಂದುವರಿಸುವ ಅವಕಾಶ ಪಡೆದಿರುತ್ತದೆ.

10ನೇ ತರಗತಿಯಿಂದ ನೇರವಾಗಿ ಮೂರು ವರ್ಷದ ಉದ್ಯೋಗ ಆಧಾರಿತ ಡಿಪ್ಲೋಮಾ ಕೋರ್ಸ್ಗಳಾದ ಅಟೋಮೊಬೈಲ್, ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಕೆಮಿಕಲ್, ಪಾಲಿಮರ, ಕಮ್ಯುನಿಕೇಶನ್, ಕಂಪ್ಯೂಟರ್ ಸೈನ್ಸ್ ಇತ್ಯಾದಿ ಇಂಜಿನಿಯರಿಂಗ್ ಕೋರ್ಸ್ಗಳ ಕಲಿಕೆಗೆ ಅವಕಾಶ ಲಭ್ಯವಿರುತ್ತದೆ. ಡಿಪ್ಲೋಮಾದಾರರಿಗೆ ಇಂಜಿನಿಯರಿಂಗ್ ನಲ್ಲಿ ಎರಡನೇ ವರ್ಷಕ್ಕೆ ನೇರ ಅವಕಾಶ ದೊರಕಲಿದೆ.

ಅತೀ ಅಲ್ಪ ಶುಲ್ಕದಲ್ಲಿ ವಿದ್ಯಾರ್ಥಿಗಳಿಗೆ ಕಲಿಯಲು ಅವಕಾಶ ದೊರಕುವುದರೊಂದಿಗೆ ಸಾಕಷ್ಟು ವಿದ್ಯಾರ್ಥಿ ವೇತನಗಳ ಸೌಲಭ್ಯವು ಕೂಡ ಲಭ್ಯವಿರುತ್ತದೆ ಎಂದು ಕೆಪಿಟಿ ಮಂಗಳೂರಿನ ಡೀನ್ ರವೀಂದ್ರ ಕೇಣಿ, ಮುಖ್ಯಸ್ಥರುಗಳಾದ ಹರೀಶ್ ಶೆಟ್ಟಿ, ನಾರಾಯಣಸ್ವಾಮಿ,ಡಾ. ಸತೀಶ್ ಕೆ ಎಂ, ವಿನೋದಕುಮಾರಿ, ಪಿ ಡಿ ತಲ್ವಾರ್, ಹರೀಶ್, ಮಾಹಿತಿ ನೀಡಿದರು. ಕೋರ್ಸುಗಳ ಸಂಪೂರ್ಣ ವಿವರ, ಅಜ್ಜಿ ನಮೂನೆ, ಮಾಹಿತಿ ಪುಸ್ತಕ ಇತ್ಯಾದಿಗಳಿಗೆ ವಿದ್ಯಾರ್ಥಿ ಹಾಗೂ ಹೆತ್ತವರು ನೇರವಾಗಿ ಕಾಲೇಜಿಗೆ ಭೇಟಿ ನೀಡಿ ಪಡೆಯಬಹುದಾಗಿದೆ. ಮಾಹಿತಿ ಪುಸ್ತಕದೊಂದಿಗೆ ಪ್ರವೇಶ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆ, ಸಲ್ಲಿಸಬೇಕಾದ ದಾಖಲೆಗಳ ವಿವರ, ಇತ್ಯಾದಿ ಲಭ್ಯವಿದ್ದು ಆಸಕ್ತರು ಯಥಾ ಶೀಘ್ರ ಕಾಲೇಜಿಗೆ ಭೇಟಿ ನೀಡುವುದು ಉತ್ತಮ.

ವಿದ್ಯಾರ್ಥಿ ಕಲ್ಯಾಣದ 10 ಘಟಕಗಳು ಉತ್ತಮ ಸಾರ್ವಜನಿಕ ಸಹಾಯವನ್ನು ಮಾಡುತ್ತಿದ್ದು ಸಾರ್ವಜನಿಕರ ಮೆಚ್ಚುಗೆಯನ್ನು ಪಡೆದಿರುತ್ತದೆ ಇದರಿಂದಾಗಿ 75 ಕೋಟಿ ವೆಚ್ಚದ ಲಾಜೆಸ್ಟಿಕ್ ಮತ್ತು ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ಸೌಲಭ್ಯವು ಕೂಡ ಕೆಪಿಟಿಗೆ ಲಭ್ಯವಾಗಿರುತ್ತದೆ.

ಸಂಸ್ಥೆಯು 13 ವರ್ಷಗಳಿಂದ ಸತತವಾಗಿ ರಾಜ್ಯಮಟ್ಟದ ಕ್ರೀಡಾ ಸಮಗ್ರ ಪ್ರಶಸ್ತಿ, ಎನ್‌ಸಿಸಿ, ಎನ್ಎಸ್ಎಸ್, ರೆಡ್ ಕ್ರಾಸ್, ಯೋಗ ಇತ್ಯಾದಿ ಸರ್ವತೋಮುಖ ಅಭಿವೃದ್ಧಿಯ ಕಾರ್ಯಗಳನ್ನು ನಡೆಸುತ್ತಿದೆ. 60ಕ್ಕೂ ಹೆಚ್ಚು ಕಂಪನಿಗಳು ಕ್ಯಾಂಪಸ್ ನೇಮಕಾತಿಯನ್ನು ಪ್ರತಿವರ್ಷ ನಡೆಸುತ್ತಿವೆ. ಸಹಾಯಕರುಗಳಾದ ದೇವರಾಜ, ರೊನಾಲ್ಡ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು..

ವರದಿ ರಾಯಿ ರಾಜ ಕುಮಾರ

LEAVE A REPLY

Please enter your comment!
Please enter your name here