15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ ಹೋಂ ನರ್ಸ್!

0
180

ಉಡುಪಿ: ಮೂಡನಿಡಂಬೂರು ಗ್ರಾಮದ ಅಜ್ಜರಕಾಡು ಪಾರ್ಕಿನ ಬಳಿಯಿರುವ ವಸತಿ ಸಮುಚ್ಚಯದಲ್ಲಿ ಹೋಂ ನರ್ಸ್​ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ನಡೆದಿದೆ.
ಬೆಂಗಳೂರಿನ ನಮ್ರತಾ (54) ಎಂಬುವವರ ತಾಯಿ ನಾಗಮಾಲಿನಿ ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಜಸಿಂತಾ ಎಂಬುವವರನ್ನು ಹೋಂ ನರ್ಸ್​ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಈಕೆ ಮನೆಯಲ್ಲಿದ್ದ 20 ಗ್ರಾಂ ತೂಕದ ಚಿನ್ನ-ವಜ್ರ ಹರಳನ್ನು ಹೊಂದಿದ್ದ ಬಳೆ ಹಾಗೂ 44 ಗ್ರಾಂ ತೂಕದ ವಜ್ರದ ಪದಕವನ್ನು ಹೊಂದಿದ ಚಿನ್ನದ ಸರ ಸಹಿತ 15 ಲಕ್ಷ ರೂ. ಮೌಲ್ಯದ ವಜ್ರ-ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here