ಕ್ರಿಶ್ಚಿಯನ್, ಮುಸ್ಲಿಂ ಬ್ರಾಹ್ಮಣ ನಮೂದಿಸಿರುವ ಜಾತಿಗಣತಿ ಸಮೀಕ್ಷೆ ವಿರುದ್ಧ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಕ್ರೋಶ

0
169

ಪ್ರೆಸ್ ಕ್ಷಬ್ ಬೆಂಗಳೂರು:ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಅಡಿಯಲ್ಲಿ ಜಾತಿಜನಗಣತಿಯಲ್ಲಿ ಅಸಮರ್ಪಕ ಶೈಕ್ಷಣಿಕ ಸಮೀಕ್ಷೆ ಮತ್ತು ಕ್ರಿಶ್ಚಿಯನ್ ಬ್ರಾಹ್ಮಣ, ಮುಸ್ಲಿಂ ಬ್ರಾಹ್ಮಣ ಸಮುದಾಯ ನಮೂದಿಸಿರುವ ಕಾರಣಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಮಾಧ್ಯಮಗೋಷ್ಟಿ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಎಸ್.ರಘುನಾಥ್ ರವರು, ಹಿರಿಯ ಉಪಾಧ್ಯಕ್ಷರಾದ ಆರ್.ಲಕ್ಷ್ಮಿಕಾಂತ್ ರವರು ಮಾಧ್ಯಮಗೋಷ್ಟಿಯಲ್ಲಿ ಭಾಗವಹಿಸಿದ್ದರು.

ಅಧ್ಯಕ್ಷರಾದ ಎಸ್.ರಘುನಾಥ್ ರವರು ಮಾತನಾಡಿ ರಾಜ್ಯದಲ್ಲಿ ಅಂದಾಜು 30ಲಕ್ಷಕ್ಕಿಂತ ಹೆಚ್ಚು ಬ್ರಾಹ್ಮಣ ಸಮುದಾಯದವರು ಇದ್ದಾರೆ ಅದರೆ ಗಣತಿಯಲ್ಲಿ 16ತೋರಿಸಿದರು ಅಸಮಾಧಾನವಾಗಿದೆ. ಜಾತಿಗಣತಿಯಲ್ಲಿ ನಮ್ಮ ದೂರುಗಳನ್ನು ಸಲ್ಲಿಸಲಾಗಿದೆ ಅದರೆ ಯಾವುದೇ ಪರಿಗಣನೆ ಮಾಡಿಲ್ಲ ಅದ್ದರಿಂದ ಸಾರ್ವಜನಿಕರ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಅಡಿಯಲ್ಲಿ ಜನಗಣತಿ ಮಾಡಿದರೆ ಪರವಾಗಿಲ್ಲ ಅದರೆ ಎಲ್ಲ ನಮ್ಮ ಅಭ್ಯಂತರವಿಲ್ಲ ಜಾತಿ ಹೆಸರಿನಲ್ಲಿ ವಿಂಗಡನೆ ಮಾಡಬೇಡಿ. 1561ಜಾತಿ ತೋರಿಸಿದ್ದಾರೆ ಅದರೆ ಉಪಜಾತಿಗಳು ತೋರಿಸಿಲ್ಲ. ಎಲ್ಲ ಉಪಜಾತಿಗಳನ್ನು ಮುಖ್ಯ ಜಾತಿಗಳಾಗಿ ಪರಿಗಣನೆ ಮಾಡಿದ್ದಾರೆ. ವ್ಯಾಸ ಬ್ರಾಹ್ಮಣ ಕ್ರಿಚ್ಚಿಯನ್, ಮುಜಾವರ್ ಬ್ರಾಹ್ಮಣ ಎಂದು ನಮೂದಿಸಿದ್ದಾರೆ ಸಮೀಕ್ಷೆ ಹೊಸ ಜಾತಿಗೆ ಸೃಷ್ಟಿಕರ್ತರಾಗಿದ್ದಾರೆ. ವಿದ್ಯುಚ್ಚಕಿ ಮೀಟರ್ ಮೇಲೆ ಜನಗಣತಿ ಮಾಡುತ್ತಿದ್ದಾರೆ ಅವರ ಮನೆಗೆ ಅಂಟಿಸಿದ ಸ್ಟೀಕರ್ ಕಿತ್ತು ಹಾಕಿದ್ದಾರೆ ಇದರಿಂದ ಸಮೀಕ್ಷೆ ಮಾಡುವುದು ಕಷ್ಟ. ಕೈಪಿಡಿಯಲ್ಲಿ 60ಪ್ರಶ್ನೆಗಳು ಇದೆ 15 ದಿನಗಳಲ್ಲಿ ಸಮೀಕ್ಷೆ ಮಾಡಲು ಸಾಧ್ಯವೆ, ದಸರಾ ಬರುವುದರಿಂದ ನಿವಾಸಿಗಳು ಪ್ರವಾಸಕ್ಕೆ ಹೋಗಿರುತ್ತಾರೆ ಸಮೀಕ್ಷೆ ಮಾಡಲು ಹೇಗೆ ಸಾಧ್ಯ. ಬ್ರಾಹ್ಮಣ ಸಮುದಾಯದವರು ಅತ್ಯಂತ ಕಷ್ಟದಲ್ಲಿ ಇದ್ದಾರೆ ಬ್ರಾಹ್ಮಣ ಸಮುದಾಯದ ಕುರಿತು ಸಮರ್ಪಕವಾಗಿ ಸರ್ವೆಯಾಗಬೇಕು. ಜಾತಿಜನಗಣತಿ ಸಮೀಕ್ಷೆ ಮನೆ ಬಾಗಿಲಿಗೆ ಬಂದರೆ ಧರ್ಮ ಎಂದರೆ ಹಿಂದೂ ಜಾತಿ ಕಾಲಂ ನಲ್ಲಿ ಬ್ರಾಹ್ಮಣ ಎಂದು ಬರೆಸಿ.ಬೇಕು.

ಬಹಳ ವಿಷಯಗಳ ಕುರಿತು ಸಮರ್ಪಕ ಸರ್ವೆ ನಡೆಯುತ್ತಿಲ್ಲ ಅದ್ದರಿಂದ ಕಾನೂನು ಮೂಲಕ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು. ಆರ್.ಲಕ್ಷ್ಮಿಕಾಂತ್ ರವರು ಮಾತನಾಡಿ ಸಮರ್ಪಕವಾಗಿ, ನ್ಯಾಯಯುತವಾಗಿ ಜಾತಿ ಜನಗಣತಿಯಾಗಬೇಕು. ಇಲ್ಲದೇ ಹೋದರೆ ನಮ್ಮ ಹೋರಾಟ ಮುಂದುವರೆಯುತ್ತದೆ. ಈ ಸಮಸ್ಯೆ ಕುರಿತು ಮುಖ್ಯಮಂತ್ರಿಗಳಿಗೆ ಮತ್ತು ಹಿಂದುಳಿದ ವರ್ಗದ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ. ಬ್ರಾಹ್ಮಣ ಸಮುದಾಯಕ್ಕೆ ಅನ್ಯಾಯವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು. ಉಪಾಧ್ಯಕ್ಷರುಗಳಾದ ಸುದರ್ಶನಂ, ಅನಿಲ್ ಕುಮಾರ್, ಮಾಲಿನಿ, ಜಿಲ್ಲಾ ಪ್ರತಿನಿಧಿಗಳಾದ ಕೆ.ಎನ್.ರವಿಕುಮಾರ್, ನಾಗೇಶ್ ರವರು, ಮಂಜುನಾಥ್ ರವರು ಉಪಸ್ಥಿತರಿದ್ದರು.

ವರದಿ : ಮಂದಾರ ರಾಜೇಶ್ ಭಟ್

LEAVE A REPLY

Please enter your comment!
Please enter your name here