ಮೂಡುಬಿದಿರೆ: ಅದ್ದೂರಿಯಾಗಿ ನಡೆಯಲಿರುವ ಮಡಿಕೇರಿ ದಸರಾಗೆ ಬೆಳ್ತಂಗಡಿ ತಾಲೂಕಿನ ಪಡಂಗಡಿಯ ವಿನ್ಯಾಸ್ ಕುಲಾಲ್ ರಚಿಸಿರುವ ಪೊಣ್ಣು ಎಂಬ ತುಳು ಕವಿತೆ ಆಯ್ಕೆಯಾಗಿದೆ. ಪಡಂಗಡಿಯ ವಿಶ್ವನಾಥ ಕುಲಾಲ್ ಹಾಗೂ ನಳಿನಾಕ್ಷಿ ದಂಪತಿಯ ಪುತ್ರನಾಗಿರುವ ವಿನ್ಸಾಸ್ ಪುಂಜಾಲಕಟ್ಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ.
ಮಡಿಕೇರಿ ಗಾಂಧಿ ಮೈದಾನದಲ್ಲಿ ನಡೆಯುವ ದಸರಾ ಸಂಭ್ರಮದಲ್ಲಿ ಸೆ. 25ರಂದು ನಡೆಯಲಿರುವ ಕವಿಗೋಷ್ಠಿಯಲ್ಲಿ ಇವರ ಕವಿತೆ ಪ್ರಸ್ತುತ ಪಡಿಸಲಿದ್ದಾರೆ.

