ಹದಿಹರೆಯದ ವಯಸ್ಸು ಅಸಾಧಾರಣ ಸಾಧನೆಗೆ ತಳಪಾಯವಾಗಿದೆ:ವಿಜಯ ಕುಮಾರ್

0
155

ವಿದ್ಯಾರ್ಥಿಗಳು ಗುರುಗಳಿಗೆ ವಿಧೇಯರಾದರೆ ಉನ್ನತ ಸಾಧನೆ ಮಾಡಬಲ್ಲರು: ಉಲ್ಲಾಸ್

ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೊರವರವರು ಇತರರಿಗೆ ಆದರ್ಶಪ್ರಾಯ: ವೀರಯ್ಯ

6ರಿಂದ 12ನೇ ತರಗತಿಯ ಮಕ್ಕಳು ಕಲಿಕೆಯೆಡೆಗೆ ಸರಿಯಾಗಿ ಗಮನ ಹರಿಸಿದರೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ಹಲವಾರು ಸಾಮ್ಯಗಳನ್ನು ಉದಾಹರಿಸಿ ಮಾರ್ಮಿಕವಾಗಿ ಮಾತನಾಡಿದ ಜೆಂಟ್ಸ್ ಗ್ರೂಪ್ ಆಫ್ ಮೇನ್ ಹುಬ್ಬಳ್ಳಿ ತಾಲೂಕ ಕಾರ್ಯದರ್ಶಿಗಳಾದ ಕೆ. ವಿಜಯ್ ಕುಮಾರ್ ರವರು 1ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿ ವಿದ್ಯಾರ್ಥಿ ಜೀವನದ ಯಶಸ್ಸಿಗೆ ಕಿವಿಮಾತು ಹೇಳುತ್ತ, ಹದಿಹರೆಯದ ವಯಸ್ಸು ಅಸಾಧಾರಣ ಸಾಧನೆಗೆ ತಳಪಾಯವಾಗಿದೆ. ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನದಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.ರಾಜ್ಯ ಮಟ್ಟದಲ್ಲಿ ಶಾಲೆಯ ಕೀರ್ತಿಯನ್ನು ಹಬ್ಬಿಸಿ, ರಾಜ್ಯ ಸರ್ಕಾರದ 2025ನೇ ಸಾಲಿನ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದ ಪ್ರಧಾನಗುರುಗಳಾದ ಹುಚ್ಚಪ್ಪ ಬಿ.ಕೊರವರವರಿಗೆ ಜೆಂಟ್ಸ್ ಗ್ರೂಪ್ ಸಂಘಟನೆಯ ರಾಜ್ಯ ಉಪಾಧ್ಯಕ್ಷರರು, ಹುಬ್ಬಳ್ಳಿಯ ಮಕ್ಕಳ ಚಾಚಾ ಟಿ. ಉಲ್ಲಾಸ್ ರವರು ಸತ್ಕರಿಸಿ ವಿದ್ಯಾರ್ಥಿಗಳು ಗುರುಗಳಿಗೆ ವಿಧೇಯರಾದರೆ ಉನ್ನತ ಸಾಧನೆ ಮಾಡಬಲ್ಲರು. ಕೊರವರ ಇವರ ಮಕ್ಕಳ ಸೇವೆ ನಮಗೆ ತೃಪ್ತಿ ನೀಡಿದೆ ಎಂದು ಅಪ್ತತೆಯಿಂದ ಹೇಳುತ್ತಾ, ಸದಾ ನಾವು ಬಡ ಮಕ್ಕಳ ಸೇವೆಗೆ ಸಹಾಯ ಮಾಡುತ್ತೇವೆ. ಜೆಂಟ್ಸ್ ಗ್ರೂಪ್ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಇದಕ್ಕೆ ನಮ್ಮ ಸ್ನೇಹಿತರು ಸ್ವತಃ ತಮ್ಮ ದುಡಿಮೆಯ ಹಣದಿಂದ ಸೇವೆಗೆ ಅಣಿಯಾಗಿದ್ದಾರೆ ಎಂದು ನುಡಿದರು.12 ಪಾಠಿಚೀಲ (ಸ್ಕೂಲ್ ಬ್ಯಾಗ್), ನೂರಾರು ನೋಟ ಬುಕ್ಕಗಳು ಮತ್ತು ಪೆನ್ನುಗಳನ್ನು ವಿತರಿಸಿದ ಅಧ್ಯಕ್ಷರಾದ ವೀರಯ್ಯ ಚಿಕ್ಕಮಠರವರು ಇತರರಿಗೆ ಆದರ್ಶಪ್ರಾಯರಾಗಿದ್ದಾರೆಂದು ಸಂತಸ ವ್ಯಕ್ತಪಡಿಸುತ್ತಾ ಗುರು ಬಳಗದ ಸೇವೆಯನ್ನು ಶ್ಲಾಘಿಸಿದರು. ಸೇಂಟ್ಸ್ ಗ್ರೂಪ್ ಫೆಡರೇಶನ್ ಅಧಿಕಾರಿಗಳಾದ ಚನ್ನಬಸಪ್ಪ ಧಾರವಾಡ ಶೆಟ್ಟರ್, ರಾಜ್ಯ ನಿರ್ದೇಶಕರಾದ ಸುರೇಶ್ ಮಂಜಪ್ಪನವರು ವೇದಿಕೆ ಮೇಲಿದ್ದರು. ಇದೆ ಸಂದರ್ಭದಲ್ಲಿ ಜೆಂಟ್ಸ್ ಗ್ರೂಪ್‌ನ ನೂತನ ತಾಲ್ಲೂಕು ಅಧ್ಯಕ್ಷರಾದ ವೀರಯ್ಯನವರನ್ನು ಶಾಲೆವತಿಯಿಂದ ಸನ್ಮಾನಿಸಲಾಯಿತು.ಪ್ರಧಾನ ಗುರುಗಳಾದ ಕೊರವರವರು ಸತ್ಕಾರವನ ಸ್ವೀಕರಿಸಿ ಮಾತನಾಡುತ್ತಾ ಜೆಂಟ್ಸ್ ಗ್ರೂಪಿನ್ ಹಿರಿಮೆಯನ್ನು ಹಾಗೂ ತಮ್ಮ ಶಾಲೆಗೆ ನೀಡಿದ ಯೋಗದಾವನ್ನು ಸ್ಮರಿಸುತ್ತಾ ಮಕ್ಕಳ ಶ್ರೇಯಸ್ಸಿಗಾಗಿ ಪ್ರಿಂಟರ್ (ಝರಾಕ್ಸ ಮಸಿನ್) ದಾನವಾಗಿ ನೀಡಿದ ಉಲ್ಕಾಸರವರ ಶಿಕ್ಷಣ ಪ್ರೇಮಕ್ಕೆ ಧನ್ಯವಾದಗಳನ್ನು ವ್ಯಕ್ತಪಡಿಸಿದರು. ಶಾಲಾ ಹಿರಿಯ ಶಿಕ್ಷಕಿಯರಾದ ಸಾವಿತ್ರಿ ಹರನಾಳ, ಮಂಜುಳಾ ಸಾತಪುತೆ, ಕುಸುಮಾ ಚಕ್ರಸಾಲಿ, ಸೈನಾಬಿ ನದಾಫ, ವೇದಾ ನಾಗನೂರ, ರೂಪ ಹೆಬ್ಬಳ್ಳಿ, ವಿಜಯಾ, ಪ್ರಕಾಶರವರು ಉಪಸ್ಥಿತರಾಗುದ್ದರು. ಶಿಕ್ಷಕ ಸಾಹಿತಿ ಸುಭಾಷ್ ಚವ್ಹಾಣ ಅತಿಥಿಗಳನ್ನು ಸ್ವಾಗತಿಸಿ, ಬಹು ಸ್ವಾರಸ್ಯಕರವಾಗಿ ನಿರೂಪಿಸುತ್ತ ವಂದಿಸಿದರು.

ವರದಿ: ಸುಭಾಷ್ ಹೇಮಣ್ಣಾ ಚವ್ಹಾಣ, ಸಹಶಿಕ್ಷಕರು ವ ಹವ್ಯಾಸಿ ವರದಿಗಾರರು, ಹುಬ್ಬಳ್ಳಿ ಶಹರ

LEAVE A REPLY

Please enter your comment!
Please enter your name here