ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ ಅಗಲ್ಪಾಡಿ ಜಯನಗರ. ಕುಂಬಡಾಜೆ, ಕಾಸರಗೋಡು. 671551. ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ನೇತೃತ್ವದಲ್ಲಿ ಪಾಂಚಜನ್ಯ ಸಾಂಸ್ಕೃತಿಕ ಭವನದಲ್ಲಿ ಈ ಮೊದಲೇ ಕಲೆ,ಸಾಹಿತ್ಯ, ಶೈಕ್ಷಣಿಕ, ಕ್ರೀಡೆ, ಯೋಗಾ, ಮುಂತಾದ ಹಲವಾರು ತರಗತಿಗಳು ನಡೆಸಲ್ಪಡುತ್ತಿದ್ದು ಇದೀಗ ದಿನಾಂಕ 02.10.2025 ನೆಯ ಗುರುವಾರ ಬೆಳಗ್ಗೆ 9:30 ಕ್ಕೆ ವಿಜಯ ದಶಮಿಯ ಶುಭ ದಿನದಂದು ನೂತನ ವಿಭಾಗದೊಂದಿಗೆ ಯಕ್ಷಗಾನ ತರಗತಿಯನ್ನು ಪ್ರಾರಂಭಿಸಲು ತೀರ್ಮಾನಿಸಿರುತ್ತೇವೆ.
ಯಕ್ಷಗಾನವು ಉಳಿದೆಲ್ಲ ಕಲೆಗಳಿಗಿಂತ ಸನಾತನ ಸಂಸ್ಕೃತಿಯನ್ನು ಬಿಂಬಿಸುವ ಚತುರಂಗಗಳಿರುವ ದೇವತಾರಾಧನ ಕಲೆ.ನಮ್ಮ ಕರಾವಳಿಯಲ್ಲಿ ಜನ್ಮತಾಳಿದ ಈ ಕಲಾ ಪ್ರಕಾರವನ್ನು ಉಳಿಸಿ ಬೆಳೆಸಿ ಮುಂದಿನ ತಲೆಮಾರಿಗೆ ರವಾನಿಸಬೇಕಾಗಿರುವುದು ನಮ್ಮ ಕರ್ತವ್ಯ. ಆದ್ದರಿಂದ ಈ ತರಗತಿಯಲ್ಲಿ ನಮ್ಮೂರಿನ ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಸಹಕರಿಸಬೇಕಾಗಿ ವಿನಂತಿ.
