ಸಂಶೋಧನೆಗಳಿಂದ ಉನ್ನತ ಜ್ಞಾನದ ಬೆಳಕು ಪ್ರತಿಯೊಬ್ಬರಲ್ಲೂ ಮೂಡಿಬರಲಿ: ಎಂ.ಡಿ. ವೆಂಕಟೇಶ್

0
172

ಕೃತಕ ಬುದ್ಧಿಮತ್ತೆಯನ್ನು ಕಂಡು ಹುಡುಕಿದ ಮನುಷ್ಯ ಅದಕ್ಕಿಂತ ಉತ್ತಮವಾದ ಜ್ಞಾನವನ್ನು ಪಡೆಯುವ ಅಗತ್ಯ ಇಂದಿನ ಪ್ರಾಪಂಚಿಕ ಯುಗದಲ್ಲಿ ಅಗತ್ಯವಿದೆ. ಹೀಗಾಗಿ ಮಾಹೆ ವಿಶ್ವವಿದ್ಯಾಲಯದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಎಲ್ಲ ಶಿಕ್ಷಕ ವರ್ಗದವರು ತಮ್ಮ ಶಿಕ್ಷಣ ಜ್ಞಾನವನ್ನು ಸಂಶೋಧನೆ, ಹೆಚ್ಚಿನ ಜ್ಞಾನ ಇತ್ಯಾದಿಗಳಿಂದ ಹೆಚ್ಚಿಸಿಕೊಂಡು ಎಲ್ಲಾ ಕ್ಷೇತ್ರಗಳಲ್ಲಿಯೂ ಬೆಳೆಯುವುದಕ್ಕೆ ಪ್ರಯತ್ನಿಸಬೇಕು. ಅದಕ್ಕೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆಗಳನ್ನು ಕೂಡ ಎಜಿಇ ಮೂಲಕ ಮಾಡಿಕೊಡಲಾಗುತ್ತಿದೆ. ಅದನ್ನು ಸದುಪಯೋಗಿಸಿಕೊಂಡು ವಿದ್ಯಾರ್ಥಿಗಳ ಎದುರಿಗೆ ಶ್ರೇಷ್ಠತೆಯನ್ನು ತೋರಿಸುವ ಪ್ರಯತ್ನವನ್ನು ಪ್ರತಿಯೊಬ್ಬರೂ ಮಾಡಬೇಕು. ತನ್ಮೂಲಕ ಬೆಳಕು ಮತ್ತಷ್ಟು ಪ್ರಜ್ವಲಮಾನವಾಗಿ ಬೆಳಗುವಂತೆ ಪ್ರತಿಯೊಬ್ಬರು ಪ್ರಯತ್ನಿಸಬೇಕೆಂದು 500ಕ್ಕೂ ಹೆಚ್ಚು ಮಂದಿ ಶಿಕ್ಷಕ ವರ್ಗದವರು ಸೇರಿದ್ದ ನಾಲ್ಕನೆಯ ಎ ಜಿ ಇ ಶಿಕ್ಷಕ ಸಮ್ಮೇಳನವನ್ನು ದೀಪ ಬೆಳಗಿ ಉದ್ಘಾಟಿಸಿ, ಡಾಕ್ಟರ್ ಟಿ ಎಮ್ ಎ ಪೈ ಅವರಿಗೆ ಪುಷ್ಪ ನಮನವನ್ನು ಸಲ್ಲಿಸಿ ನುಡಿದರು.


ಮೂಡುಬಿದರೆ ಮಹಾವೀರ ಕಾಲೇಜಿನ 60ನೇ ವರ್ಷಾಚರಣೆಯ ಸಂದರ್ಭದಲ್ಲಿ ನಡೆಯುತ್ತಿರುವ ಈ ವಿಶೇಷ ಕಾರ್ಯಕ್ರಮದ ಪ್ರಾಸ್ತಾವಿಕ ಮಾತಿನಲ್ಲಿ ಮಣಿಪಾಲ್ ಎಜಿಇ ನ ಕಾರ್ಯನಿರ್ವಾಹಕ ಅಧಿಕಾರಿ ಡಾಕ್ಟರ್ ಶ್ರೀಧರ್ ಆರ್‌ ಪೈ ಉತ್ತಮ ಗುಣಮಟ್ಟದ ಸಂಶೋಧನೆಗಳು, ವೈವಿಧ್ಯಮಯ ವಿಚಾರಗಳಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಶಿಕ್ಷಕ ವರ್ಗ, ಅದಕ್ಕೂ ಮಿಗಿಲಾದ ದಕ್ಷತೆಯ ಆಡಳಿತ ತರಬೇತಿ ನೀಡುವುದು ನಮ್ಮ ಧ್ಯೇಯವಾಗಿದೆ ಆದುದರಿಂದ 15 ಸಂಸ್ಥೆಗಳ 500ಕ್ಕೂ ಹೆಚ್ಚು ಶಿಕ್ಷಕ ವರ್ಗಕ್ಕೆ ಈ ಎಲ್ಲಾ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟರು.


ಮಹಾವೀರ ಕಾಲೇಜಿನ ಆಡಳಿತ ಸಂಘದ ಚೇರ್ಮನ್, ಮಾಜಿ ಸಚಿವ ಕೆ ಅಭಯ ಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ. ರಾಧಾಕೃಷ್ಣ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಅಂಕಿತ ಶೆಟ್ಟಿ, ಡಾ ಸತೀಶ್ ಕುಮಾರ್, ಡಾ. ಕೆ ಅಭಿಲಾಶ್ ಪೈ, ಹಾಜರಿದ್ದರು ಪಿ ಯು ಕಾಲೇಜಿನ ವಿಜಯಲಕ್ಷ್ಮಿ ವಂದಿಸಿದರು.

ವರದಿ ರಾಯಿ ರಾಜ ಕುಮಾರ

LEAVE A REPLY

Please enter your comment!
Please enter your name here