ದಾವಣಗೆರೆ: ಪತಿ ಹಾಗೂ ಪತ್ನಿ ನಡುವೆ ಹಲವು ದಿನಗಳಿಂದ ನಡೆಯುತ್ತಿದ್ದ ಮನಸ್ತಾಪ, ಜಗಳಕ್ಕೆ ಅಂತ್ಯ ಹಾಡಲು ಡಿವೋರ್ಸ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಕೌಟುಂಬಿಕ ನ್ಯಾಯಾಲಯದಲ್ಲಿ ಈ ಕುರಿತು ಪ್ರಕರಣ ವಿಚಾರಣೆ ನಡೆಯುತ್ತಿತ್ತು. ಕೋರ್ಟ್ ಸೂಚನೆ ಮೇರೆಗೆ ಡಿವೋರ್ಸ್ ಅರ್ಜಿ ವಿಚಾರಣೆಗೆ ಕೋರ್ಟ್‌ಗೆ ಆಗಮಿಸಿದ್ದಾರೆ.
ಇತ್ತ ಪತಿ ಕೂಡ ಅರ್ಜಿ ವಿಚಾರಣೆಗಾಗಿ ಆಗಮಿಸಿದ್ದಾರೆ. ಕೋರ್ಟ್ ಹಾಲ್ ಒಳಗೆ ಬರುತ್ತಿದ್ದಂತೆ ಪತ್ನಿ ಮೇಲೆ ಪತಿ ಚಾಕು ಇರಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣೆಗೆರೆ ಕೋರ್ಟ್ ಒಳಗಡೆ ಈ ಘಟನೆ ನಡೆದಿದೆ. ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆ ದಾಖಲಿಸಲಾಗಿದೆ.
ದಾವಣೆಗೆರೆ ನಿವಾಸಿಯಾದ 30 ವರ್ಷದ ಪದ್ಮಾವತಿ, ಪತತಿ ಪ್ರವೀಣ್ ಕುಮಾರ್‌ನಿಂದ ವಿಚ್ಚೇದನ ಬಯಸಿದ್ದರು. ಪತಿ ಜೊತೆಗಿನ ಮನಸ್ತಾಪ ಸೇರಿದಂತೆ ಹಲವು ಕಾರಣಗಳಿಂದ ಸಂಸಾರ ಮುಂದುವರಿಸಲು ಸಾಧ್ಯವಾಗದೇ ವಿಚ್ಚೇದನ ಬಯಸಿದ್ದರು. ಇಬ್ಬರು ಬೇರೆ ಬೇರೆಯಾಗಿದ್ದರು. ಪದ್ಮಾವತಿ ತಾಯಿ ಮನೆಗೆ ಹಿಂದಿರುಗಿದ್ದರು. ಹೀಗಾಗಿ ವಿಚ್ಚೇದನ ಅರ್ಜಿ ದಾವಣೆಗೆರೆ ಕೋರ್ಟ್‌ನಲ್ಲಿ ದಾಖಲಾಗಿತ್ತು. ಕೋರ್ಟ್ ಸೂಚನೆಯಂತೆ ಅರ್ಜಿ ವಿಚಾರಣೆಗೆ ಪತಿ ಪ್ರವೀಣ್ ಕುಮಾರ್ ಹಾಗೂ ಪತ್ನಿ ಪದ್ಮಾವತಿ ಆಗಮಿಸಿದ್ದರು. ಮೊದಲೇ ಪ್ಲಾನ್ ಮಾಡಿದ್ದ ಪ್ರವೀಣ್ ಕುಮಾರ್ ಚಾಕು ತೆಗೆದುಕೊಂಡು ಕೋರ್ಟ್ ಹಾಲ್‌ಗೆ ಆಗಮಿಸಿದ್ದ. ಪದ್ಮಾವತಿ ಕೋರ್ಟ್ ಹಾಲ್ ಪ್ರವೇಶಿಸಿದ ಬೆನ್ನಲ್ಲೇ ಅರ್ಜಿ ವಿಚಾರಣೆ ಆರಂಭಗೊಂಡಿತ್ತು. ಆದರೆ ಈ ಕ್ಷಣದಲ್ಲಿ ಪ್ರವೀಣ್ ಕುಮಾರ್, ಪತ್ನಿ ಪದ್ಮಾವತಿ ಮೇಲೆ ದಾಳಿ ಮಾಡಿದ್ದಾನೆ. ಚಾಕುವಿನಿಂದ ಇರಿದಿದ್ದಾನೆ.
ತಕ್ಷಣವೇ ಪ್ರವೀಣ್ ಕುಮಾರ್ ವಶಕ್ಕೆ ಪಡೆದ ಪೊಲೀಸರು ಸೇರಿದಂತೆ ಇತರ ಸಿಬ್ಬಂದಿಗಳು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರವೀಣ್ ಕುಮಾರ್ ಹಿಡಿದ ಚಾಕು ಪೊಲೀಸರು ಕಸಿದುಕೊಂಡಿದ್ದಾರೆ. ಬಳಿಕ ಪ್ರವೀಣ್ ಕುಮಾರ್ ವಶಕ್ಕೆ ಪಡೆದಿದ್ದಾರೆ. ಇತ್ತ ಪದ್ಮಾವತಿಯನ್ನು ಪೊಲೀಸರು ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

