ಪಿಎಂಆವೈ (ಸರ್ವರಿಗೂ ಸೂರು) ಯೋಜನೆಯಡಿ ಪತ್ತೊಂಜಿಕಟ್ಟೆಯಲ್ಲಿ ಗುಂಪು ಮನೆ ನಿರ್ಮಾಣ ಕಾಮಗಾರಿಗೆ ಪುರಸಭೆ ಅಧ್ಯಕ್ಷರಿಂದ ವೀಕ್ಷಣೆ

0
187

ಪ್ರಧಾನಮಂತ್ರಿ ಆವಾಸ್ ಯೋಜನೆ-ಸರ್ವರಿಗೂ ಸೂರು (HFA) ಯೋಜನೆಯಡಿ ಕರ್ನಾಟಕ ಸರ್ಕಾರದ ಕೊಳಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರುರವರಿಂದ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ವಸತಿರಹಿತರಿಗೆ (ಅಂದರೆ ಸ್ವಂತ ಮನೆ ಇಲ್ಲದೇ ಬಾಡಿಗೆ ಆಧಾರದಲ್ಲಿ ವಾಸಿಸುವವರು) ಕಾರ್ಕಳ ಪುರಸಭಾ ವ್ಯಾಪ್ತಿಯ ಪತ್ತೊಂಜಿಕಟ್ಟೆ ಪ್ರದೇಶದಲ್ಲಿ ಗುಂಪು ಮನೆಗಳನ್ನು ನಿರ್ಮಿಸುತ್ತಿದ್ದು, ಸದ್ರಿ ಕಾಮಗಾರಿಯನ್ನು ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ ಇವರು ವೀಕ್ಷಿಸಿದರು.

ಈ ಸಂದರ್ಭ ಪುರಸಭಾ ಉಪಾಧ್ಯಕ್ಷರಾದ ಪ್ರಶಾಂತ್ ಕೋಟ್ಯಾನ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ಪ್ರದೀಪ್, ವಿಪಕ್ಷ ನಾಯಕರಾದ ಶುಭದ ರಾವ್, ಸದಸ್ಯರುಗಳಾದ ಹರೀಶ್ ದೇವಾಡಿಗ, ವಿನ್ನಿ ಬೋಲ್ಡ್ ಮೆಂಡೋನ್ಸಾ, ನಳಿನಿ ವಿ ಆಚಾರ್ಯ, ಪ್ರತಿಮಾ, ಸುಮಾ ಕೇಶವ್, ಭಾರತಿ ಅಮೀನ್, ಮಮತಾ, ನೀತಾ ಆಚಾರ್ಯ, ಮೀನಾಕ್ಷಿ ಗಂಗಾಧರ್, ರೆಹಮತ್ ಎನ್ ಶೇಖ್, ಪಲ್ಲವಿ, ಶ್ರೀ ವಿವೇಕಾನಂದ ಶೆಣೈ ಹಾಗೂ ಪುರಸಭಾ ಮಖ್ಯಾಧಿಕಾರಿಗಳಾದ ಲೀನಾ ಬ್ರಿಟ್ಟೋ ಹಾಗೂ ಸಹಾಯಕ ಅಭಿಯಂತರರಾದ ಶ್ರೀ ಕೃಷ್ಣ ಇವರು ಉಪಸ್ಥಿತರಿದ್ದರು. ಒಟ್ಟು 250 ಗುಂಪು ಮನೆಗಳ ಪೈಕಿ, ಈಗಾಗಲೇ 97 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಇನ್ನುಳಿದ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸೂಚಿಸಿದರು.

LEAVE A REPLY

Please enter your comment!
Please enter your name here