ಮೈಸೂರು: ಅಪಘಾತವೊಂದರಲ್ಲಿ ಒಂದು ಕಾಲು ಕಳೆದುಕೊಂಡು ದುಡಿಯಲಾಗದ ಸ್ಥಿತಿಯಲ್ಲಿರುವ ಗಣೇಶ್ ಶರ್ಮ ಎಂ. ಚಿಕಿತ್ಸೆಯ ವೆಚ್ಚ ಭರಿಸಲು ದಾನಿಗಳ ಮೊರೆ ಹೋಗಿದ್ದಾರೆ.
೨೦೧೬ರಲ್ಲಿ ನಡೆದ ಅಪಘಾತದಲ್ಲಿ ಗಣೇಶ್ ಶರ್ಮಾ ಒಂದು ಕಾಲು ಕಳೆದುಕೊಂಡಿದ್ದಾರೆ. ಹಿಟ್ ಆಂಡ್ ರನ್ ಆಗಿರುವ ಕಾರಣದಿಂದ ಅಪಘಾತದಲ್ಲಿ ಇವರಿಗೆ ಪರಿಹಾರ ಸಿಗಲಿಲ್ಲವಂತೆ.
3 ವರ್ಷಗಳ ಕಾಲ ಹಾಸಿಗೆ ಇಂದ ಕೆಳಗೆ ಇಳಿಯಲೇ ಇಲ್ಲ. ಇವರ ತಾಯಿ 5 ಲಕ್ಷ ಸಾಲ ಮಾಡಿ ಉಳಿಸಿಕೊಂಡಿದ್ದಾರೆ ಎಂದು ಗಣೇಶ್ ಶರ್ಮಾ ಹೇಳಿಕೊಂಡಿದ್ದಾರೆ. ಆ ಸಾಲ ತೀರಿಸುವ ಹೊಣೆ ಈಗ ಗಣೇಶ್ ಶರ್ಮಾ ಮೇಲಿದೆ. ಏನಾದರೂ ಸಮಾಜಸೇವೆ ಮಾಡಬೇಕೆಂಬ ಆಸೆ, ಉತ್ಸಾಹ ಹೊಂದಿರುವ ಇವರು ಆಗ ಪುನಃ ರಕ್ತದಾನ ಮಾಡಲು ಪ್ರಾರಂಭಿಸಿದ್ದಾರೆ. ಇಲ್ಲಿಯವರೆಗೆ 38 ಬಾರಿ ರಕ್ತದಾನ ಮಾಡಿರುವುದಾಗಿ ಹೇಳಿರುವ ಇವರು 150 ಜನರಿಗೆ ರಕ್ತವನ್ನು ಏರ್ಪಟು ಮಾಡಿಕೊಟ್ಟಿದ್ದಾರಂತೆ.
ಚುಟುಕು ಕವನಗಳನ್ನು ಬರೆದು ಕವಿಗೋಷ್ಠಿಯಲ್ಲಿ ಹೇಳಿ ಬಹುಮಾನ ಪಡೆದಿದಿದ್ದಾರೆ. ತನ್ನೊಳಗೆ ಎಷ್ಟೇ ನೋವಿದ್ದರೂ ರೀಲ್ಸ್ ಗಳನ್ನು ಸಹ ಮಾಡಿ ಜನರಲ್ಲಿ ಚಿರಪರಿಚಿತರಾಗಿದ್ದಾರೆ. ಇತ್ತೀಚೆಗೆ ಇವರ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಕೊಟ್ಟು ಸನ್ಮಾನಿಸಿದ್ದಾರೆ. ಈಗ ಅಮ್ಮನಿಗೂ ಕೆಲಸ ಇಲ್ಲ. ನಾನು ಒಂದು ಚಿಕ್ಕ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತೇನೆ ಸಂಬಳ ತುಂಬಾ ಕಮ್ಮಿ ಕೊಡುತ್ತಾರೆ. ನೆಂಟರು, ಸ್ನೇಹಿತರು ಯಾರು ಕಷ್ಟಕ್ಕೆ ಬರುತ್ತಿಲ್ಲ. ನಾನು ವಿಕಲಚೇತನವಾಗಿರುವ ನನಗೆ ಸಹಾಯ ಮಾಡಿ ಎಂದು ದಾನಿಗಳಲ್ಲಿ ಗಣೇಶ್ ಬೇಡಿಕೊಂಡಿದ್ದಾರೆ.
ಇವರಿಗೆ ಆರ್ಥಿಕ ಸಹಾಯ ಮಾಡಲಿಚ್ಚಿಸುವ ದಾನಿಗಳು ಗಣೇಶ್ ಶರ್ಮಾ ಅವರ ಫೋನ್ ಪೇ /ಗೂಗಲ್ ಪೇ ನಂಬರ್ – 7090156688 ಮಾಡಬಹುದು ಅಥವಾ ಸಂಪರ್ಕಿಸಬಹುದು. ಗಣೇಶ್ ಶರ್ಮಾ ಎಂ. ಅವರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬೆಳವಾಡಿ ಬ್ರಾಂಚ್, ಅಕೌಂಟ್ ನಂಬರ್ – 40819412247, ಐಎಫ್ಎಸ್ಸಿ ಕೋಡ್ – SBIN0006768 ಹಣ ಕಳುಹಿಸಬಹುದು.

