ಪಕ್ಷಿಕೆರೆ : ನಮ್ಮ ದೇಶದ ಸ್ವಾತಂತ್ರ್ಯ ಹೋರಟಕ್ಕೆ ಸಾವಿರ ಸಾವಿರ ಜನರ ಬಲಿದಾನ ವಾಗಿದೆ ಅದನ್ನು ನೆನಪಿಸುವ ಕೆಲಸ ಆಗಬೇಕಾಗಿದೆ. ಎಲ್ಲಾ ತ್ಯಾಗವಾಗಿ ಭಾರತಮಾತೆಗೆ ತಮ್ಮನ್ನು ತಾವು ಅರ್ಪಿಸಿ ಕೊಂಡ ಕ್ರಾಂತಿ ವೀರ ದೇಶ ಭಕ್ತರನ್ನು ನೆನಪಿಸಿ ಆವರ ಬಗ್ಗೆ ಮುಂದಿನ ಪೀಳಿಗಗೆ ತಿಳಿಸುವ ಕೆಸಲ ಆಗಬೇಕು ಈ ನಿಟ್ಟಿನಲ್ಲಿ ಇಲ್ಲಿನ ಸಂಘಟಗಳ ಕೆಲಸ ಶ್ಲಾಘನೀಯ ಎಂದು ಮಂಗಳೂರು ವಿಶ್ವಹಿಂದೂ ಪರಿಷತ್ ವಿಭಾಗದ ಕಾರ್ಯದರ್ಶಿ ಶಿವಾನಂದ ಮೆಂಡನ್ ಹೇಳಿದರು.

ಅವರು ಪಕ್ಷಿಕೆರೆ ಪೇಟೆಯಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗ ದಳ ಮೂಲ್ಕಿ ಪ್ರಖಂಡ ಇವರ ನೇತೃತ್ವದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಹಾಗೂ ಪಂಜಿನ ಮೆರವಣಿಯೆ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿದರು. ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವಾಭಿರಾಮ ಉಡುಪ ಅಧ್ಯಕ್ಷವಹಿಸಿ ಮಾತನಾಡಿದರು. ಮೂಲ್ಕಿ ಪ್ರಖಂಡ ವಿಶ್ವ ಹಿಂದೂ ಪರಿಷತ್ ಬಜರಂಗದಳ ಉಪಾಧ್ಯಕ್ಷ ಶಂಕರ ಮಾಸ್ತರ್ , ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಸಚಿನ್ ಮೆಲ್ಕಾರ್, ಸಂಚಾಲಕ ರಾಜೇಶ್ ಪೂಜಾರಿ, ಉಪಸ್ಥಿರಿದ್ದರು. ಉಮೇಶ್ ಪಂಜ ಪ್ರಸ್ತಾವನೆಗೈದರು.

ಸಂಘಟನೆಯ ದೇವಿ ಪ್ರಸಾದ್ ಸ್ವಾಗತಿಸಿದರು. ಶ್ಯಾಮ ಸುಂದರ್ ವಂದಿಸಿದರು. ಪಕ್ಷಿಕೆರೆ ತಿಮ್ಮ ಕಟ್ಟೆಯಿಂದ ಪಕ್ಷಿಕೆರೆ ಪೇಟೆಯ ತನಕ ಪಂಜಿನ ಮೆರವಣಿಗೆ ನಡೆಯಿತು.

