ಕಲ್ಲಬೆಟ್ಟು ಸಹಕಾರಿಯ CEO ಅನಿತಾ ಶೆಟ್ಟಿ ದಿಢೀರ್ ಹಿಂಭಡ್ತಿ ವಿರೋಧಿಸಿ ಪ್ರತಿಭಟನೆ

0
219

ಮೂಡುಬಿದಿರೆ: ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿತಾ ಶೆಟ್ಟಿ ಅವರನ್ನು ದಿಢೀರ್ ಹಿಂಭಡ್ತಿ ನೀಡಿರುವುದನ್ನು ವಿರೋಧಿಸಿ ಕಲ್ಲಬೆಟ್ಟು ಪರಿಸರದ ಜನರು ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಶನಿವಾರ ಸಹಕಾರಿಯ ಎದುರು ಪ್ರತಿಭಟನೆ ನಡೆಸಿದರು.
ಕಳೆದ ಮೂವತ್ತು ವರ್ಷಗಳಿಂದ ಈ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿ, ಸಿಇಒ ಆಗಿ ಕಾರ್ಯನಿರ್ವಹಿಸಿದ ಅನಿತಾ ಶೆಟ್ಟಿ ಅವರನ್ನು ಯಾವುದೇ ನೋಟೀಸು ನೀಡದೆ, ಯಾವುದೇ ಸೂಚನೆ ನೀಡದೆ ಅವರನ್ನು ಹಿಂಭಡ್ತಿಗೊಳಿಸಲಾಗಿದ್ದು ಎನ್ನುವ ಆರೋಪಗಳನ್ನು ಪ್ರತಿಭಟನಾಕಾರರು ಮಾಡಿದ್ದಾರೆ. ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕರು, ಯಾವುದೇ ದೂರು ಇಲ್ಲದೆ ಸಿಇಒ ಅವರಿಗೆ ಹೇಗೆ ಹಿಂಭಡ್ತಿ ನೀಡುತ್ತೀರಿ? ಈ ಅಧಿಕಾರವನ್ನು ಕೊಟ್ಟವರು ಯಾರು ಎಂದು ಮೇಲಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಹಕಾರಿ ಮಾಜಿ ಅಧ್ಯಕ್ಷರಾದ ಕೃಷ್ಣರಾಜ ಹೆಗ್ಡೆ ಸುರೇಶ್ ಕೋಟ್ಯಾನ್, ನಿರ್ದೇಶಕರಾದ ಹರೀಶ್ ಶೆಟ್ಟಿ ಮಾಜಿ ಉಪಾಧ್ಯಕ್ಷ ದಿಲೀಪ್ ಶೆಟ್ಟಿ ಮಾಜಿ ನಿರ್ದೇಶಕ ಯಶವಂತ್ ಶೆಟ್ಟಿ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಪುರುಷೋತ್ತಮ ಶೆಟ್ಟಿ ನಿರ್ದೇಶಕರು, ಆಡಳಿತ ಮಂಡಳಿಯ ಹಾಲಿ ಹಾಗೂ ಮಾಜಿ ನಿರ್ದೇಶರು, ಸಿಬ್ಬಂದಿಗಳು, ಗ್ರಾಮಸ್ಥರು ಪ್ರತಿಭಟನೆಯಲ್ಲಿದ್ದರು.

LEAVE A REPLY

Please enter your comment!
Please enter your name here