ಉಡುಪಿ : ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಗ್ರಾಮದ ವತಿಯಿಂದ ಶುಕ್ರ ವಾರ ಶ್ರೀದೇವಿಯ ಸನ್ನಿಧಿಯಲ್ಲಿ ಚಂಡಿಕಾ ಯಾಗ ಸೇವೆ ಸಂಪನ್ನ ಗೊಂಡಿತ್ತು , ನವರಾತ್ರಿಯ ಲಲಿತಾ ಪಂಚಮಿಯ ಪರ್ವ ದಿನದಂದು ವೀಣಾಪಾಣಿಯಾಗಿ ಕಂಗೊಳಿಸುತ್ತಿರುವ ಬೈಲೂರು ಶ್ರೀಮಹಿಷಮರ್ದಿನಿ ದೇವಿಯ ಸನ್ನಿಧಿಯಲ್ಲಿ ಸಮೂಹಿಕ ದೇವತಾ ಪ್ರಾರ್ಥನೆ , ಸಂಕಲ್ಪ ಪೂಜೆ ಯೊಂದಿಗೆ ಧಾರ್ಮಿಕ ಪೂಜಾ ವಿಧಾನಗಳನ್ನು ದೇವಳದ ತಂತ್ರಿಗಳಾದ ಕೆ ಎ ರಮಣ ತಂತ್ರಿ ಗಳು ನೇತೃತ್ವದಲ್ಲಿ ಶ್ರೀದೇವಿಗೆ ವಿಶೇಷ ಅಲಂಕಾರ ಪಂಚಾಮೃತ ಅಭಿಷೇಶಕ ,ಸುಹಾಸಿನಿ ಪೂಜೆ , ಪಲ್ಲ ಪೂಜೆ ಮಹಾಪೂಜೆ ನೆಡೆಸಿಕೊಟ್ಟರು , ಮಹಾ ಚಂಡಿಕಾ ಯಾಗದಲ್ಲಿ ಸಾವಿರಾರು ಭಕ್ತರೂ ಭೋಜನ ಪ್ರಸಾದ ಸ್ವೀಕರಿಸಿದರು.
ವಳದ ಮೊಕ್ತೇಸರ ಮುದ್ದಣ್ಣ ಶೆಟ್ಟಿ , ಕಾರ್ಯದರ್ಶಿ ನಾರಾಯಣ ದಾಸ್ ಉಡುಪ , ಕೋಶಾಧಿಕಾರಿ ಮೋಹನ್ ಕೃಷ್ಣ , ಅರ್ಚಕ ವಾಸುದೇವ ಭಟ್ , ಶ್ರೀನಿವಾಸ ಭಟ್ ಪವಿತ್ರಪಾಣಿ ಶ್ರೀನಿಚಾವಾಸ್ ಆಚಾರ್ಯ , ಆಡಳಿತ ಮಂಡಳಿಯ ಸದಸ್ಯರಾದ ಸುಬ್ರಮಣ್ಯ ತಂತ್ರಿ , ರಮೇಶ್ ಶೆಟ್ಟಿ ಕಳತ್ತೂರು , ರತ್ನಾಕರ್ ಶೆಟ್ಟಿ , ಮೋಹನ್ ಆಚಾರ್ಯ , ದುರ್ಗಾಪ್ರಸಾದ್ , ಸುರೇಶ ಶೆಟ್ಟಿ ,ಅರುಣ್ ಶೆಟ್ಟಿಗಾರ್ , ಸುರೇಶ ಶೆಟ್ಟಿ , ಸುಭಾಸ್ ಭಂಡಾರಿ , ಅರುಣ್ ಶೆಟ್ಟಿಗಾರ್ , ರೂಪಶ್ರೀ ರಾವ್ , , ಹಾಗೂ ವಿವಿಧ ಸಮಿತಿಯ ಪಧಾದಿಕಾರಿಗಳು ಉಪಸ್ಥರಿದ್ದರು.

