ಬೆಳ್ಮಣ್ಣು : ರೋಟರಿ ಕ್ಲಬ್ ಬೆಳ್ಮಣ್ಣು ಇವರ ನೇತೃತ್ವದಲ್ಲಿ ಬೆಳ್ಮಣ್ಣಿನಲ್ಲಿ ಜಿಲ್ಲಾ ಮಟ್ಟದ ಮುದ್ದು ಶಾರದೆ ಹಾಗೂ ಜಾನಪದ ನೃತ್ಯ ಸ್ಪರ್ಧಾ ಕಾರ್ಯಕ್ರಮವು ದಿನಾಂಕ ಸೆ. ೨೮ರಂದು ನಂದಳಿಕೆ ಬೋರ್ಡ್ ಶಾಲೆ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತ್ರಿಷಾ ಗ್ರೂಪ್ ಅಪ್ ಇನ್ಸ್ಟಿಟ್ಯೂಟ್ ನ ಮುಖ್ಯಸ್ಥರಾದ ಸಿ.ಎ ಗೋಪಾಲ ಕೃಷ್ಣ ಭಟ್ ಎನ್.ಎಸ್ ರೋಟರಿ ಕ್ಲಬ್ ಬೆಳ್ಮಣ್ ಅವರು, ತುಂಬಾ ಕ್ರಿಯಾಶೀಲವಾಗಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ, ಸಮಾಜಮುಖಿ ಕೆಲಸ ಮಾಡುವುದರಲ್ಲಿ ಈ ರೋಟರಿ ಕ್ಲಬ್ ಸಂತೃಪ್ತಿ ಭಾವನೆಯನ್ನು ಕಂಡುಕೊಳ್ಳುತ್ತಿದೆ, ಈ ಸ್ಪರ್ಧೆಯು ಮಕ್ಕಳಿಗೆ ತಮ್ಮ ತಮ್ಮ ಪ್ರತಿಭೆಗಳನ್ನು ತೋರಿಸಲು ಒಂದು ಅವಕಾಶವಾಗಿದೆ ಮಕ್ಕಳು ಮೊಬೈಲ್ ಗೀಳನ್ನು ಹಚ್ಚಿಕೊಳ್ಳುವ ಬದಲು ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪೋಷಕರು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಜಿಲ್ಲಾ-3182 ವಲಯ-5 ಅಸಿಸ್ಟೆಂಟ್ ಗವರ್ನರ್ ರೋ.ವಿಗ್ನೇಶ್ ಶೆಣೈ ಬಿ ಮಾತನಾಡಿ ಬೆಳ್ಮಣ್ ರೋಟರಿ ಕ್ಲಬ್ ಪ್ರತೀ ವರ್ಷ ಕೂಡ ಒಂದಲ್ಲ ಒಂದು ವಿನೂತನ ಹಾಗೂ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಇಂತಹ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುವುದರಿಂದ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿಗಳನ್ನು ಪರಿಚಯಿಸಿಕೊಳ್ಳುವ ಅವಕಾಶ ಲಭಿಸುತ್ತದೆ ಈ ವೇದಿಕೆಯನ್ನು ಕೇವಲ ಪ್ರಶಸ್ತಿ ಗಳಿಸಿಕೊಳ್ಳಲು ಮಾತ್ರ ಉಪಯೋಗಿಸಿಕೊಳ್ಳದೆ ತಮ್ಮಲ್ಲಿ ಅಡಗಿರುವ ಪ್ರತಿಭೆಗಳನ್ನು ತೋರಿಸಲು ಈ ವೇದಿಕೆ ಸಹಕಾರಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬೆಳ್ಮಣ್ ಅಧ್ಯಕ್ಷರಾದ ರೊ.ಶಿವಕುಮಾರ್ ಪೂಜಾರಿ, ರೋಟರಿ ಕ್ಲಬ್ ಬೆಳ್ಮಣ್ ಚಾರ್ಟರ್ ಪ್ರೆಸಿಡೆಂಟ್ ರೊ.PHF ಸೂರ್ಯಕಾಂತ್ ಶೆಟ್ಟಿ, ರೋಟರಿ ಕ್ಲಬ್ ಬೆಳ್ಮಣ್ ನ ಮಾಜಿ ಅಧ್ಯಕ್ಷರಾದ ರೊ.ದೇವೇಂದ್ರ ಶೆಟ್ಟಿ, ಕಾರ್ಯಕ್ರಮ ಸಂಯೋಜಕರಾದ ರೊ.ಸುಭಾಷ್ ಕುಮಾರ್, ರೋಟರಿ ಕ್ಲಬ್ ಬೆಳ್ಮಣ್ ನ ಕಾರ್ಯದರ್ಶಿ ರೊ.ಧೀರಜ್ ಎಸ್, ರೊ.ನಿತ್ಯಾನಂದ ಶೆಟ್ಟಿ, ರೊ.ಮುರುಳಿಧರ ಜೋಗಿ, ರೊ.ಪ್ರಭಾಕರ ಶೆಟ್ಟಿ, ರೊ.ಸಜೇಶ್ ಕುಮಾರ್, ರೊ.ಪ್ರಕಾಶ್ ಶೆಟ್ಟಿ, ರೋಟರಿ ಕ್ಲಬ್ ಬೆಳ್ಮಣ್ ನ ಸರ್ವ ಸದಸ್ಯರು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಪುಟಾಣಿಗಳು ಸ್ಪರ್ಧಾಳುಗಳು ಪೋಷಕರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ರೊ. ಅಲ್ವಿನ್ ನೇರಿ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.

