ಮೂಡುಬಿದಿರೆ: ಮಿಜಾರು ಹರಿಮೀನಾಕ್ಷಿ ದೋಟ ಸುರೇಶ್ ಶೆಟ್ಟಿ ಸಾರಥ್ಯದ ತುಳುನಾಡ ಸೇನೆ ಆಶ್ರಯದಲ್ಲಿ ಅ.5ರಂದು ಕಡಲಕೆರೆ ನಿಸರ್ಗಧಾರ್ಮದಲ್ಲಿ ನಡೆಯುವ ಛತ್ರಪತಿ ಶಿವಾಜಿ ಮಹಾರಾಜ-ಸಂಬಾಜಿ ಮಹಾರಾಜ ಸ್ನೇಹಕೂಟ ಕಂಬಳದಲ್ಲಿ ಕಂಬಳ ಕ್ಷೇತ್ರ ನಾಲ್ಕು ಸ್ಟಾರ್ ಕೋಣಗಳನ್ನು ಗೌರವಿಸಲಾಗುವುದು.
ನಂದಳಿಕೆ ಶ್ರೀಕಾಂತ್ ಭಟ್ ಅವರ ನಂದಳಿಕೆ ಪಾಂಡು’, ಡಾಲ್ಫಿ ಡಿಸೋಜ, ಡೆರಿಕ್ ಡಿಸೋಜ ಅವರ ಪದವು ಕಾನಡ್ಕ ದೂಜ’, ಸತೀಶ್ ಶೆಟ್ಟಿ ಜಗದೀಶ್ ಶೆಟ್ಟಿ ಬೋಳ ಅವರ ಬೋಳದಗುತ್ತು ದೋನಿ' ಹಾಗೂ ಇರುವೈಲು ಸತೀಶ್ಚಂದ್ರ ಸಾಲ್ಯಾನ್ ಅವರ ಇರುವೈಲು ಪಾಣಿಲ ತಾಟೆ’ಯನ್ನು ಗೌರವಿಸಲಾಗುತ್ತದೆ. ತುಳು ರಂಗಭೂಮಿ, ಸಿನಿಮಾ ನಟ ಉಮೇಶ್ ಮಿಜಾರು(ಚೋಟು) ಹಾಗೂ ನಿರೂಪಕ ಜಿತೇಶ್ ಮಿಜಾರು ಅವರನ್ನು ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

