ಉಡುಪಿ: ಗೌಡ ಸಾರಸ್ವತ ಬ್ರಾಹ್ಮಣ ಯುವಕ ಮಂಡಳಿಯ 55 ನೇ ವಾರ್ಷಿಕೋತ್ಸವ

0
236

  ಲಕ್ಷ್ಮೀ ವೆಂಕಟೇಶ್ ದೇವಸ್ಥಾನ ತೆಂಕಪೇಟೆ ಉಡುಪಿ ಇದರ ಗೌಡ ಸಾರಸ್ವತ ಬ್ರಾಹ್ಮಣ ಯುವಕ ಮಂಡಳಿಯ 55 ನೇ ವಾರ್ಷಿಕೋತ್ಸವ  ಇತ್ತೀಚಿಗೆ ನಡೆಯಿತು.

  ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ  ಉಡುಪಿ ಜಿಲ್ಲಾ  ಶಿಕ್ಷಕ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ. ಅಶೋಕ್ ಕಾಮತ್  ವಿವಿಧ ಸ್ಫರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ  ಮಾತನಾಡಿದರು.  ಇಲ್ಲಿನ ಯುವ ಶಕ್ತಿ  ದೇವಳದ  ಅಭಿವೃದ್ಧಿ ಕಾರ್ಯಗಳಲ್ಲಿ  ಯುವಜನರ ಕೊಡುಗೆ  ಬಹಳ ದೊಡ್ಡದ್ದು ,  ಸಮಾಜದ ಆಸ್ತಿಯೇ  ಯುವ ಶಕ್ತಿಯಾಗಿದ್ದು  ಮಕ್ಕಳ  ಕ್ರಿಯಾ ಶೀಲಾ  ಬೆಳವಣಿಗೆ ದೇವಾಲಯು  ಪ್ರೇರಣಾ ಹಾಗೂ ಸ್ಫೂರ್ತಿದಾಯಕವಾಗಿದೆ. ಹಿರಿಯರು ದೇವಳಕ್ಕೆ ಬರುವಾಗ ಮಕ್ಕಳನ್ನು ಕರೆ ತಂದರೆ  ಸಂಸ್ಕಾರ, ಧರ್ಮದ  ಆಚಾರ, ವಿಚಾರ ತಿಳಿದುಕೊಳ್ಳಲು ಶಕ್ತಿ ನೀಡುತ್ತದೆ ಎಂದು ಶುಭ ಹಾರೈಸಿದರು. ಜಿ ಎಸ್ ಬಿ ಯುವಕ ಮಂಡಲದ ಗೌರವಾಧ್ಯಕ್ಷರಾದ  ಪಿ. ವಿ.  ಶೆಣೈ , ಮುಖ್ಯ ಅತಿಥಿಯಾದ   ಡಾ  ಅಶೋಕ್ ಕಾಮತ್  ಗೌರವಿಸಿದರು. ಜಿ ಎಸ್ ಬಿ ಯುವಕ ಮಂಡಳಿಯ ಅಧ್ಯಕ್ಷ ನಿತೇಶ್ ಶೆಣೈ  , ಉಪದ್ಯಾಕ್ಷ  ವಿಘ್ನೇಶ್  ಶ್ಶೆಣೈ, ಯುವಕ ಮಂಡಳಿಯ ಪದಾಧಿಕಾರಿಗಳು  ಉಪಸ್ಥಿತರಿದ್ದರು. 

LEAVE A REPLY

Please enter your comment!
Please enter your name here