ದಾವಣಗೆರೆ-ಅಕ್ಟೋಬರ್
ಬೆಂಗಳೂರಿನ ರಂಗಭೂಮಿ ಕಲಾವಿದರ ಒಕ್ಕೂಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನವಂಬರ್ 1ನೇ ತಾರೀಖಿನಂದು ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿಗೆ ದಾವಣಗೆರೆಯ ಸಾಂಸ್ಕೃತಿಕ ರಾಯಭಾರಿ ಸಾಲಿಗ್ರಾಮ ಗಣೇಶ್ ಶೆಣೈಯವರಿಗೆ ವಿತರಿಸಲಾಗುವುದು ಎಂದು ರಂಗಭೂಮಿ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಸಾಗರ ಅರ್.ಕಲಾದಗಿ ತಿಳಿಸಿದ್ದಾರೆ.
ಕರ್ನಾಟಕ ನೆಲ, ಜಲ, ಭಾಷೆ, ಸಾಹಿತ್ಯ, ಶಿಕ್ಷಣ, ಸಾಂಸ್ಕೃತಿಕ ನಿರಂತರ 4 ದಶಕಗಳಿಂದ ಯಕ್ಷಗಾನ ಸೇರಿದಂತೆ ಕಠಿಣ ಪರಿಶ್ರಮದಿಂದ ಸಾಧನೆ ಮಾಡುತ್ತಿರುವ ಶೆಣೈಯವರಿಗೆ ಈ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸಂಗೀತ ಮಠಪತಿಯವರು ಪ್ರಕಟಿಸಿದ್ದಾರೆ.
ಕಲಾಕುಂಚ ಸೇರಿದಂತೆ ಯಕ್ಷರಂಗ, ಸಿನಿಮಾಸಿರಿ, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ, ಕರ್ನಾಟಕ ಸಗಮ ಸಂಗೀತ ಪರಿಷತ್ ಸೇರಿದಂತೆ, ದಾವಣಗೆರೆ ಜಿಲ್ಲಾ ಛಾಯಾಗ್ರಾಹಕ ಸಂಘ, ಕರಾವಳಿ ಮಿತ್ರ ಮಂಡಳಿ, ಶ್ರೀ ಗಾಯತ್ರಿ ಪರಿವಾರ, ಕನ್ನಡ ಸಾಹಿತ್ಯ ಪರಿಷತ್ತು, ಬಿಚ್ಕತ್ತಿ ಕುಟುಂಬ, ಸಮಾನ ಮನಸ್ಕರ ವೇದಿಕೆ ಮುಂತಾದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸರ್ವ ಸದಸ್ಯರು, ಶೆಣೈಯವರಿಗೆ ಅಭಿಮಾನದಿಂದ ಅಭಿನಂದಿಸಿದ್ದಾರೆ.

