ಉಜಿರೆ: ಅ.13 ರಿಂದ 15ರ ವರೆಗೆ ಮೂರು ದಿನಗಳಲ್ಲಿ ಉಜಿರೆಯಲ್ಲಿ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆದ ಮಂಗಳೂರು ವಿ.ವಿ. ಅಂತರ ಕಾಲೇಜು ಪುರುಷರ ವಾಲಿಬಾಲ್ ಟೂರ್ನಿಯಲ್ಲಿ ಮೂಡಬಿದ್ರೆಯ ಆಳ್ವಾಸ್ ಕಾಲೇಜು ತಂಡ ಪ್ರಥಮ ಸ್ಥಾನ ಪಡೆದು ಶ್ರೀ ಪಟೇಲ್ ಸೌಕೂರ್ ಅಂತಯ್ಯ ಶೆಟ್ಟಿ ಫಲಕ ಪಡೆಯಿತು.
ಅತಿಥೇಯ ಉಜಿರೆಯ ಎಸ್.ಡಿ.ಎಂ. ಕಾಲೇಜು ತಂಡ ದ್ವಿತೀಯ ಸ್ಥಾನ (ರನ್ನರ್ ಅಪ್) ಪಡೆಯಿತು.
ಮೂರು ದಿನ ನಡೆದ ಟೂರ್ನಿಯಲ್ಲಿ ಒಟ್ಟು ೨೭ ತಂಡಗಳು ಭಾಗವಹಿಸಿದವು.
ಫಲಿತಾಂಶ: ಆಳ್ವಾಸ್ ಕಾಲೇಜು, ಮೂಡಬಿದ್ರೆ, (ಪ್ರಥಮ) ಎಸ್.ಡಿ.ಎಂ. ಕಾಲೇಜು, ಉಜಿರೆ (ದ್ವಿತೀಯ) ನಾರಾಯಣ ಗುರು ಕಾಲೇಜು, ಕುದ್ರೋಳಿ, ಮಂಗಳೂರು (ತೃತೀಯ), ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ (ನಾಲ್ಕನೆ ಸ್ಥಾನ)
ಉತ್ತಮ ಧಾಳಿದಾರ (ಅಟಾಕರ್): ರಾಹುಲ್, ಆಳ್ವಾಸ್ ಕಾಲೇಜು, ಮೂಡಬಿದ್ರೆ
ಉತ್ತಮ ಆಲ್ ರೌಂಡರ್: ಮಹ್ಮದ್ ಅಫ್ರೀದ್, ಎಸ್.ಡಿ.ಎಂ. ಕಾಲೇಜು, ಉಜಿರೆ
ಉತ್ತಮ ಲಿಬ್ರೋ: ಮಂಜು, ಆಳ್ವಾಸ್ ಕಾಲೇಜು, ಮೂಡಬಿದ್ರೆ
ಉತ್ತಮ ಸೆಟ್ಟರ್: ಪುನೀತ್, ಆಳ್ವಾಸ್ ಕಾಲೇಜು, ಮೂಡಬಿದ್ರೆ
ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಿಸಲಾಯಿತು.
Home Uncategorized ಮಂಗಳೂರು ವಿ.ವಿ. ಅಂತರ ಕಾಲೇಜು ವಾಲಿಬಾಲ್ ಟೂರ್ನಿ: ಶ್ರೀ ಪಟೇಲ್ ಸೌಕೂರ್ ಅಂತಯ್ಯ ಶೆಟ್ಟಿ ಫಲಕ...

