ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಮೈನ್ ಇದರ ಹಳೆ ವಿದ್ಯಾರ್ಥಿಗಳ ಸಂಘದ ಸಮಾರಂಭವು 24. 10.2025 ರಂದು ನಡೆಯಿತು.
105 ವರ್ಷ ಇತಿಹಾಸವುಳ್ಳ ಈ ಶಾಲೆಗೆ ನೂತನ ಕಟ್ಟಡ ರಚನೆಯಾಗಬೇಕು. ಮೂಲಭೂತ ಸೌಕರ್ಯ ಒದಗಿಸಬೇಕು ಆಂಗ್ಲ ಮಾಧ್ಯಮ ಹಾಗೂ ಆಧುನಿಕ ಶಿಕ್ಷಣಕ್ಕೆ ಒತ್ತು ನೀಡಬೇಕೆಂಬ ಹಂಬಲದಿಂದ ಹುಟ್ಟಿಕೊಂಡ ಹಳೆ ವಿದ್ಯಾರ್ಥಿ ಸಂಘವನ್ನು, ನಾಯರ ಬೆಟ್ಟು ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷರಾದ ಕೆ ಆರ್ ಸುಧೀರ್ ಹೆಗ್ಡೆ ಅವರ ಅಮೃತ ಹಸ್ತದಿಂದ ಉದ್ಘಾಟಿಸಲಾಯಿತು. ಸಭೆಯ ಅಧ್ಯಕ್ಷ ಸ್ಥಾನವನ್ನು ಸಂಘದ ಅಧ್ಯಕ್ಷರಾದ ವಾಸುದೇವ ಶೆಟ್ಟಿಗಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ, ದಿನೇಶ್ ಕೊಡವೂರು ಕಾರ್ಕಳ ಜ್ಞಾನ ಸುಧಾ ಕಾಲೇಜಿನ CEO ಹಾಗೂ ಪ್ರಾಂಶುಪಾಲರು, ಕೌಡೂರು ಶ್ರೀಯುತ ಡಾ .ಪ್ರಸನ್ನ ಕುಮಾರ್ ಹೆಗ್ಡೆ, ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಆಶಾ ಬಾನು, ಸಂಘದ ಗೌರವ ಅಧ್ಯಕ್ಷರಾದ ಸುರೇಶ್ ಸಾಲಿಯಾನ್, ಕೌಡೂರು ಹರಿ ಜೀವನ್ ಹೆಗ್ಡೆ, ಕೌಡೂರು ವಸಂತಶೆಟ್ಟಿ ಉದ್ಯಮಿ, ನಿವ್ರತ ಯೋಧರಾದ ಸಹದೇವ ನಾಯಕ್, ಉದ್ಯಮಿ ಮಂಜುನಾಥ ಶೆಣೈ, S D M C ಅಧ್ಯಕ್ಷರಾದ ಸಚ್ಚಿದಾನಂದ ಶೆಟ್ಟಿ ಬೈಲೂರು ಉಪಸ್ಥಿತರಿದ್ದರು . ಅಧ್ಯಕ್ಷರಾದ ವಾಸುದೇವ ಶೆಟ್ಟಿಗಾರ್ ಸ್ವಾಗತಿಸಿದರು. ಕೌಶಿಕ್ ಮುನಿಯಾಲು ಕಾರ್ಯಕ್ರಮ ನಿರೂಪಿಸಿದರು ಆಶಾ ಭಾನು ಅವರು ವಂದಿಸಿದರು
ಈ ಪ್ರಯುಕ್ತ ಕಮಲಾಕ್ಷ ಕಾಮತ್ ರವರು ಶಾಲೆಗೆ ಭೇಟಿ ನೀಡಿದ್ದರು . ಶಾಲೆಯಲ್ಲಿ ಪುಸ್ತಕ ಪೂಜೆ,ಭಜನೆ ಹಾಗೂ ಮಕ್ಕಳಿಗೆ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿತ್ತು.
ಶಾಲಾ ಶಿಕ್ಷಕ ವೃಂದ, ಅಡುಗೆ ಸಿಬ್ಬಂದಿ ಹಾಗೂ S D M C ಯಾ ಎಲ್ಲಾ ಸದಸ್ಯರು ಸಹಕರಿಸಿದರು.

