ಚಿರತೆ ಕಾಟಕ್ಕೆ ಕಂಗಾಲಾದ ಕಡಂದಲೆ, ಪಾಲಡ್ಕ ಗ್ರಾಮಸ್ಥರು

0
201

ಮೂಡುಬಿದಿರೆ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಚಿರತೆ ಕಾಟ ಹೆಚ್ಚುತ್ತಿರುವ ಬಗ್ಗೆ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮಾಂತರ ಪ್ರದೇಶದ ಕಲ್ಲಮುಂಡ್ಕೂರು, ಕಡಂದಲೆ ಪಾಲಡ್ಕ ಪ್ರದೇಶಗಳಲ್ಲಿ ಕತ್ತಲು ಕಾಣುತ್ತಿದ್ದಂತೆ ಚಿರತೆ ರಸ್ತೆಯಲ್ಲಿ ಅಡ್ಡಾಡುತ್ತಿರುವ ಬಗ್ಗೆ ಜನತೆ ದೂರಿದ್ದಾರೆ. ಹಳ್ಳಿ ಪ್ರದೇಶಗಳಲ್ಲಿ ರಾತ್ರಿ ರಿಕ್ಷಾ ಕಾರು ಚಾಲಕರು ಬಾಡಿಗೆ ನಡೆಸಲು ಕೂಡ ಹೆದರಿಕೊಳ್ಳುತ್ತಿರುವ ಬಗ್ಗೆಯೂ ದೂರಿದ್ದಾರೆ.
ಪಾಲಡ್ಕ ಪಂಚಾಯತ್ ಕಡಂದಲೆ ಪ್ರದೇಶದಲ್ಲಿ ನಾಲ್ಕಾರು ಚಿರತೆ ಕಾಣಿಸಿಕೊಳ್ಳುವ ಬಗ್ಗೆ ವಿಶ್ರಾಂತ ಶಿಕ್ಷಕ ಟಿ ಎನ್ ಕೆಂಬಾರೆ ಲೋಕ ಆಯುಕ್ತ ಜನ ಸಂಪರ್ಕ ಸಭೆಯಲ್ಲಿ ದೂರು ನೀಡಿದ್ದಾರೆ. ಕೆಲವೊಮ್ಮೆ ಹಗಲು ಹೊತ್ತಿನಲ್ಲಿ ಕೂಡ ಚಿರತೆ ಕಾಣಿಸಿಕೊಳ್ಳುತ್ತಿರುವ ಬಗ್ಗೆಯೂ ಜನರದ್ದು ದೂರಿದೆ. ಚಿರತೆ ಸಂಚಾರ ಸಾಕು ಪ್ರಾಣಿಗಳಾದ ಜಾನುವಾರು ನಾಯಿ ಗಾಳಿಗೂ ಅಪಾಯ ತೋರಿದೆ. ಮುಂದೆ ಮನುಷ್ಯರಿಗೂ ಅಪಾಯ ಕಾಣುವ ಸಾಧ್ಯತೆಯಿದೆ. ಈ ಬಗ್ಗೆ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯ ಇರುವುದಾಗಿ ಜನತೆ ಒತ್ತಾಯಿಸಿದ್ದಾರೆ

LEAVE A REPLY

Please enter your comment!
Please enter your name here