ಮಣಿಪಾಲ: ಯುವಕ ಆತ್ಮಹತ್ಯೆ..!

0
109

ಮಣಿಪಾಲ : ಪರ್ಕಳ ಸರಸ್ವತಿನಗರ ನಿವಾಸಿ, ಶಿವಳ್ಳಿ ಗ್ರಾಮದ ಪೆಸ್ಟ್ ಕಂಟ್ರೋಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪರ್ಕಳ ಕೆರೆಮನೆ ಅರುಣ್ ಶೆಟ್ಟಿಗಾರ್ (40) ಜೂ.16ರ ರಾತ್ರಿ 8ಗಂಟೆಯ ಬಳಿಕ ತಾನು ಕೆಲಸ ಮಾಡು ತಿದ್ದ ಸಂಸ್ಥೆಯ ಗೋಡಾನ್‌ನಲ್ಲಿರುವ ಫ್ಯಾನಿನ ಹುಕ್ಕಿಗೆ ಬೈರಸ್ ಕಟ್ಟಿ ಕುತ್ತಿಗೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅತ್ರಾಡಿ ಗ್ರಾಮದ ಲೋಲಾಕ್ಷಿ ಶೆಟ್ಟಿಗಾರ್ ನೀಡಿದ ಮಾಹಿತಿಯಂತೆ, ಅರುಣ್ ಶೆಟ್ಟಿಗಾರ್ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ ಗೊಂಡು ಜೂ.16ರ ರಾತ್ರಿ 8 ಗಂಟೆಯಿಂದ ಮರುದಿನ ಬೆಳಗ್ಗೆ 10 ಗಂಟೆಯ ನಡುವಿನ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here