ಹನಿ ಹನಿ ಸೇರಿ ಹಳ್ಳ: ಸ್ಫೂರ್ತಿ ಶಾಲೆಯ ಮಕ್ಕಳ ಭವಿಷ್ಯಕ್ಕಾಗಿ ಲಕ್ಕಿಡಿಪ್ ಖರೀದಿಸಿ”

0
123

ಮೂಡುಬಿದಿರೆ: ದೇವರ ಸ್ವರೂಪದ ವಿಶೇಷ ಚೇತನ (ಮಾನಸಿಕ ಭಿನ್ನ ಸಾಮರ್ಥ್ಯದ) ಮಕ್ಕಳಿಗಾಗಿ ಕಳೆದ 9 (26/05/2017) ವರ್ಷಗಳಿಂದ ಸರಕಾರದ ಯಾವುದೇ ಅನುದಾನವಿಲ್ಲದೆ ದಾನಿಗಳ ನೆರವಿನಿಂದ ಉಚಿತವಾಗಿ ಶಿಕ್ಷಣವನ್ನು ನೀಡುತ್ತಾ ಬಂದಿರುವ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಮತ್ತು ತರಬೇತಿ ಕೇಂದ್ರವು ಪ್ರಸ್ತುತ ಮೂಡಬಿದಿರೆಯ ಕೆಸರಗದ್ದೆ ಬೆಳುವಾಯಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಇಲ್ಲಿ ಮೂಡಬಿದ್ರಿ, ಹಾಗೂ ಆಸುಪಾಸಿನ ಗ್ರಾಮಾಂತರ ಪ್ರದೇಶದ ಒಟ್ಟು 91 ವಿಶೇಷ ಚೇತನ ಮಕ್ಕಳು ವಿಧ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ.

ಈ ವಿಶೇಷ ಚೇತನ ಮಕ್ಕಳ ಶಾಲೆಯ ಅಭಿವೃದ್ಧಿ ಕಾರ್ಯಗಳ ಸಹಾಯಾರ್ಥವಾಗಿ ಆರ್ಥಿಕ ಸಂಪನ್ಮೂಲವನ್ನು ಕ್ರೋಡೀಕರಿಸುವ ಉದ್ದೇಶದಿಂದ ಲಕ್ಕಿಡಿಪ್ ಅನ್ನು ಮಾಡಿದ್ದು ಒಂದು ಟಿಕೇಟಿನ ಬೆಲೆ 100/-ರೂ. ಆಗಿರುತ್ತದೆ. ತಾವೆಲ್ಲರೂ ಉದಾರ ಮನಸ್ಸಿನಿಂದ ಲಕ್ಕಿಡಿಪ್ ಅನ್ನು ಖರೀದಿಸಿ ಸಹಕರಿಸಬೇಕಾಗಿ ವಿನಂತಿ. ಹನಿ ಹನಿ ಸೇರಿ ಹಳ್ಳ ಎನ್ನುವಂತೆ ತಾವು ಮಾಡುವ ಸಣ್ಣ ಸಹಾಯ ಈ ವಿಶೇಷ ಮಕ್ಕಳ ಪಾಲಿಗೆ ದೊಡ್ಡ ಬೆಳಕಾಗಬಹುದು

ಬನ್ನಿ ಈ ವಿಶೇಷ ಚೇತನ ಮಕ್ಕಳೊಂದಿಗೆ ಕೈ ಜೋಡಿಸಿ

ಟಿಕೇಟಿಗಾಗಿ ಸಂಪರ್ಕಿಸಿ
9900710209
8970549708

ವಿ. ಸೂ :ನೀವು ಖರೀದಿಸಿದ ಲಕ್ಕಿಡಿಪ್ ಕೂಪನ್ ಅನ್ನು ಮೂಡಬಿದ್ರಿಯ ಮಯೂರಿ ಸಿಲ್ಕ್ಸ್ ಬಟ್ಟೆ ಅಂಗಡಿಯಲ್ಲಿ ತೋರಿಸಿದಲ್ಲಿ ನೀವು ಖರೀದಿಸಿದ ಬಟ್ಟೆಯ ಮೇಲೆ ವಿಶೇಷ ವಿನಾಯಿತಿ ದೊರೆಯುತ್ತದೆ

LEAVE A REPLY

Please enter your comment!
Please enter your name here