ಮಕ್ಕಳ ದಿನಾಚರಣೆಯಂದು ಸರಗಕಾರಿ ಶಾಲೆಗಲ್ಲಿ ವಿದ್ಯಾರ್ಥಿ – ಶಿಕ್ಷಕ – ಪಾಲಕರ ಮಹಾ ಸಭೆಯ ಮೆರಗು
ಸರ್ಕಾರಿ ಶಾಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾಗುವ ಒಂದು ಶೈಕ್ಷಣಿಕ ಕಾರ್ಯಕ್ರಮವಾಗಿದೆ. ಇದನ್ನು ಆಂಧ್ರಪ್ರದೇಶ ಮತ್ತು ಪಂಜಾಬ್‌ನಂತಹ ರಾಜ್ಯಗಳಲ್ಲಿ ವಿದ್ಯಾರ್ಥಿಗಳ ಪ್ರಗತಿ, ಕಲಿಕಾ ಸವಾಲುಗಳು ಮತ್ತು ಪೋಷಕರು-ಶಿಕ್ಷಕರ ನಡುವಿನ ಸಹಯೋಗವನ್ನು ಸುಧಾರಿಸಲು ನಡೆಸಲಾಗುತ್ತದೆ. ಮುಂದುವರೆದ ಭಾಗವಾಗಿ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ 56 ಸಾವಿರ ಸರ್ಕಾರಿ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಈ mega ptm ಆಯೋಜಿಸಲಾಗುತ್ತಿದೆ. ಇದು ಮಕ್ಕಳ ಶೈಕ್ಷಣಿಕ ಮತ್ತು ಒಟ್ಟಾರೆ ಬೆಳವಣಿಗೆಯನ್ನು ಚರ್ಚಿಸಲು ದೊಡ್ಡ ಸಮುದಾಯದ ಭಾಗವಹಿಸುವಿಕೆಯನ್ನು ಒಳಗೊಂಡಿರುತ್ತದೆ.
ಕರ್ನಾಟಕ ಘನ ಸರ್ಕಾರದ ಸಚಿವಾಲಯವು 'ಬದಲಾವಣೆಯ ಶಿಕ್ಷಣ ಭವಿಷ್ಯದ ನಿರ್ಮಾಣ' ಧ್ಯೇಯದಡಿ ಸಾಕ್ಷರತೆ ಮತ್ತು ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳು ಎಲ್ಲಾ ಅರ್ಹ ವಯಸ್ಸಿನ ಮಕ್ಕಳಿಗೆ ಒಳಗೊಳ್ಳುವಿಕೆ, ಪ್ರವೇಶಾವಕಾಶ ಮತ್ತು ಸಮಾನತೆಯ ಮೂಲಕ ಶಿಕ್ಷಣವನ್ನು ಒದಗಿಸುತ್ತವೆ. ಸರ್ಕಾರಿ ಶಾಲೆ/ಕಾಲೇಜುಗಳು ಎಸ್.ಡಿ.ಎಂ.ಸಿ./ಸಿ.ಡಿ.ಸಿ. ಮತ್ತು ಒಟ್ಟಾರೆ ಸಮುದಾಯದ ಹಿತಾಸಕ್ತಿಗಳ ಫಲಶ್ರುತಿಯಾಗಿವೆ. ಈ ನಿಟ್ಟಿನಲ್ಲಿ ಎಲ್ಲಾ ಸರ್ಕಾರಿ ಶಾಲಾ/ಕಾಲೇಜುಗಳ ಎಲ್ಲಾ ಪ್ರಮುಖ ಪಾಲುದಾರರನ್ನು ತಲುಪಲು ದಿನಾಂಕ: 14.11.2025ರಂದು ಮಕ್ಕಳ ದಿನಾಚಾರಣೆಯ ಪ್ರಯುಕ್ತ ರಾಜ್ಯಾದ್ಯಂತ ಏಕಕಾಲದಲ್ಲಿ 2025-26 ನೇ ಸಾಲಿನ ಪೋಷಕ-ಶಿಕ್ಷಕರ ಮಹಾಸಭೆಯನ್ನು ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಶಾಲಾ/ಕಾಲೇಜುಗಳಲ್ಲಿ ದಾಖಲಾತಿಯನ್ನು ಹೆಚ್ಚಿಸುವ ಮೂಲಕ ಸರ್ಕಾರಿ ಶಾಲಾ-ಕಾಲೇಜುಗಳ ಬಗ್ಗೆ ಪೋಷಕರಲ್ಲಿ ಭರವಸೆಯನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ.
ರಾಷ್ಟ್ರ ನಿರ್ಮಾಣ ಮತ್ತು ಚೈತನ್ಯಶೀಲ ಸಮಾಜ ನಿರ್ಮಾಣದ ಸಾಕಾರಕ್ಕಾಗಿ ಅರ್ಹ ವಯೋಮಾನದ ಎಲ್ಲಾ ಮಕ್ಕಳು ಶಾಲೆಗೆ ದಾಖಲಾಗಿ, ನಿರಂತರವಾಗಿ ಹಾಜರಾಗಿ ಗುಣಮಟ್ಟದ ಶಿಕ್ಷಣ ಪಡೆಯುವುದು ಅತ್ಯಗತ್ಯವಾಗಿರುತ್ತದೆ. ಮಕ್ಕಳ ಕಲಿಕೆಯು ಶಾಲೆ, ಮನೆ ಮತ್ತು ಸಮಾಜಗಳ ನಡುವೆ ನಿರಂತರ ಸಂಪರ್ಕವನ್ನು ಕಲ್ಪಿಸುತ್ತದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಫೋಷಕರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಅವರನ್ನು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿರುತ್ತದೆ. ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಿ ಸರ್ಕಾರದಿಂದ ಅನುಷ್ಠಾನಿಸಲಾಗಿರುವ ಉಪಕ್ರಮಗಳು, ಪೋಷಕರು, ಶಿಕ್ಷಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸುವುದು ಪೋಷಕ-ಶಿಕ್ಷಕ ಸಭೆಗಳ ಉದ್ದೇಶವಾಗಿರುತ್ತದೆ.ಪೋಷಕ-ಶಿಕ್ಷಕ ಮಹಾ ಸಭೆಯ ಪೂರ್ವಸಿದ್ಧತೆ ಮತ್ತು ಮಹಾಸಭೆ ನಡೆಸಲು ನಿರ್ವಹಿಸಬೇಕಾದ ಜವಾಬ್ದಾರಿಗಳು:-
ರಾಜ್ಯದ ಎಲ್ಲಾ ಸರ್ಕಾರಿ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ದಿನಾಂಕ: 14-11-2025 ರ ಮಕ್ಕಳ ದಿನಾಚರಣೆಯಂದು ಹಮ್ಮಿಕೊಳ್ಳಲಾಗುತ್ತಿರುವ ಪೋಷಕ-ಶಿಕ್ಷಕ ಮಹಾಸಭೆಗೆ ಈ ಕೆಳಗಿನಂತೆ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ನಿರ್ದೇಶಕರು, ಪಿಎಂ.ಪೋಷಣ್ ಶಕ್ತಿ ನಿರ್ಮಾಣ ಯೋಜನೆ, ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಅಪರ ಆಯುಕ್ತರು, ಧಾರವಾಡ ಮತ್ತು ಕಲಬುರಗಿ ಆಯುಕ್ತಾಲಯ ಇವರು ಮಾರ್ಗದರ್ಶನ ಮತ್ತು ನಡೆಸಲು ಕ್ರಮವಹಿಸುವುದು. ಉಪನಿರ್ದೇಶಕರು(ಆಡಳಿತ), ಉಪನಿರ್ದೇಶಕರು (ಅಭಿವೃದ್ಧಿ) ಮತ್ತು ಉಪನಿದ ಪೂರ್ವ) ಇವರು ಜಿಲ್ಲಾ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಪೋಷಕ-ಶಿಕ್ಷಕರ ಮಹಾಸಭೆ ನಡೆಸುವ ಬಗ್ಗೆ ಸೂಕ್ತ ಮಾರ್ಗದರ್ಶಿ, ಪ್ರಚಾರ ಮತ್ತು ಅನುಪಾಲನೆ ಮಾಡುವುದು. ತಾಲ್ಲೂಕು ಮಟ್ಟದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆ/ಕಾಲೇಜುಗಳ ಮುಖ್ಯಸ್ಮರಿಗೆ ಮಾರ್ಗದರ್ಶನ ನೀಡುವುದು.ಮೆಗಾ ಪಿಟಿಎಂನ ಮುಖ್ಯ ಉದ್ದೇಶಗಳು:
ಪೋಷಕರು ಮತ್ತು ಶಿಕ್ಷಕರ ಸಹಯೋಗ: ಪೋಷಕರು ಮತ್ತು ಶಿಕ್ಷಕರ ನಡುವಿನ ಸಂವಹನವನ್ನು ಸುಧಾರಿಸುವುದು, ಇದರಿಂದ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಬೆಂಬಲ ಸಿಗುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ, ಭಾವನಾತ್ಮಕ ಮತ್ತು ಒಟ್ಟಾರೆ ಕಲಿಕೆಯ ಪ್ರಗತಿಯ ಸಮಗ್ರ ವರದಿಯನ್ನು ಪೋಷಕರಿಗೆ ಒದಗಿಸುವುದು.
ಕಲಿಕಾ ಅಂತರದ ಚರ್ಚೆ: ಪೋಷಕರಿಗೆ ಮಗು ಯಾವ ವಿಷಯಗಳಲ್ಲಿ ಹಿಂದುಳಿದಿದೆ ಎಂಬುದನ್ನು ತಿಳಿಸಿ, ಅದಕ್ಕೆ ಪರಿಹಾರ ಸೂಚಿಸುವುದು.
ವೃತ್ತಿ ಮಾರ್ಗದರ್ಶನ: ಹಳೆಯ ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆಗಳು ಮತ್ತು ಅವುಗಳ ತಯಾರಿಯ ಬಗ್ಗೆ ಸಲಹೆ ನೀಡುವುದು. ಪೋಷಕರ ಭಾಗವಹಿಸುವಿಕೆ: ಪೋಷಕರಿಗೆ ತಮ್ಮ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ನೇರವಾಗಿ ಶಾಲೆಗೆ ನೀಡಲು ಅವಕಾಶ ನೀಡುವುದು.
ಡಿಜಿಟಲ್ ಉಪಕ್ರಮಗಳ ಪ್ರದರ್ಶನ: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣವನ್ನು ಸುಧಾರಿಸಲು ಬಳಸಲಾಗುವ ಡಿಜಿಟಲ್ ಉಪಕ್ರಮಗಳನ್ನು ಪೋಷಕರಿಗೆ ತೋರಿಸುವುದು. ಪರಿಸರ ಕಾಳಜಿ: ಕೆಲವು ಸಂದರ್ಭಗಳಲ್ಲಿ, ವಿದ್ಯಾರ್ಥಿಗಳು ತಮ್ಮ ತಾಯಂದಿರ ಹೆಸರಿನಲ್ಲಿ ಸಸಿಗಳನ್ನು ನೆಡುತ್ತಾರೆ.
ಪೋಷಕ-ಶಿಕ್ಷಕ ಮಹಾಸಭೆಯಂದು ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳು:
ಶಾಲಾ-ಕಾಲೇಜುಗಳ ಮುಖ್ಯಸ್ತರು/ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ./ಸಿ.ಡಿ.ಸಿ.ಯವರು ಪೋಷಕರನ್ನು ಶಾಲೆಗೆ ಆತ್ಮೀಯವಾಗಿ ಬರಮಾಡಿಕೊಳ್ಳುವುದು ಹಾಗೂ ಪರಿಚಯ ಮಾಡಿಕೊಳ್ಳುವುದು. ವಿದ್ಯಾರ್ಥಿಗಳಿಗೆ ಶಾಲಾ/ಕಾಲೇಜು ಹಂತದಲ್ಲಿ ನಡೆಸಲಾಗುತ್ತಿರುವ ಪಾಠ ಆಧಾರಿತ ಮೌಲ್ಯಮಾಪನದ (LBA) ವಿಶ್ಲೇಷಣೆ ಬಗ್ಗೆ, ಪೋಷಕರಿಗೆ ಮಾಹಿತಿ ನೀಡುವುದು.
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷಾ ಸಿದ್ಧತೆಗೆ ಅನುಕೂಲಿಸಲು ಇಲಾಖೆಯಿಂದ ನೀಡಲಾಗಿರುವ ಅಧ್ಯಾಯವಾರು, ವಿಷಯಾವಾರು ನೀಲ ನಕ್ಷೆ, ಪ್ರಶ್ನೆ ಕೋಠಿ, ಮಾದರಿ ಪ್ರಶ್ನೆಪತ್ರಿಕೆಗಳು, ಮೌಲ್ಯಮಾಪನ ವಿಧಾನ, ನಡೆಸಲಾಗುತ್ತಿರುವ ಎರಡು ಪೂರ್ವ ಸಿದ್ಧತಾ ಪರೀಕ್ಷೆಗಳು, 2 ಅಂತಿಮ ಪರೀಕ್ಷೆಗಳನ್ನು ನಡೆಸುತ್ತಿರುವ ಬಗ್ಗೆ, ಪೋಷಕರಿಗೆ ಮಾಹಿತಿ ನೀಡುವುದು. ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಮತ್ತು ಆತಂಕ ನಿವಾರಣೆ, ಏಕಾಗ್ರತೆ, ಮಾನಸಿಕ ಒತ್ತಡ ನಿರ್ವಹಣೆಗಳ ಬಗ್ಗೆ ತಜ್ಞರಿಂದ ಸಂವಾದ/ಪ್ರೇರಣಾ ಕಾರ್ಯಕ್ರಮಗಳನ್ನು ಇಲಾಖೆಯಿಂದ ಆಯೋಜಿಸುತ್ತಿರುವ ಬಗ್ಗೆ ತಿಳಿಸುವುದು. ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರೊತ್ಸಾಹದಾಯಕ ಮಾತುಗಳನ್ನು ಹೇಳುವುದು.
ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಕಲಿಕೆ ಉತ್ತಮಪಡಿಸಲು ಇಲಾಖೆಯಿಂದ ಹಮ್ಮಿಕೊಂಡಿರುವ ಕಲಿಕಾ ಉಪಕ್ರಮಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡುವುದು, ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಸರ್ಕಾರದಿಂದ ನೀಡಲಾಗುತ್ತಿರುವ ಪ್ರೋತ್ಸಾಹದಾಯಕ ಯೋಜನೆಗಳ ಬಗ್ಗೆ, ಪೋಷಕರಿಗೆ ಮಾಹಿತಿ ನೀಡುವುದು. ಶಾಲಾ-ಕಾಲೇಜುಗಳಲ್ಲಿ ಲಭ್ಯಗೊಳಿಸಿರುವ ಭೌತಿಕ ಸೌಕರ್ಯಗಳು ಮತ್ತು ಶೈಕ್ಷಣಿಕ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದು.
ವಿದ್ಯಾರ್ಥಿಗಳ ಆರೋಗ್ಯ ಪೋಷಣೆ ಮತ್ತು ಕಲಿಕಾ ಪ್ರಗತಿಯಲ್ಲಿ ಪೋಷಕರ ಜವಾಬ್ದಾರಿ ಮತ್ತು ಭಾಗವಹಿಸುವಿಕೆಯ ಬಗ್ಗೆ ಅರಿವು ಮೂಡಿಸುವುದು ಮತ್ತು ವಿದ್ಯಾರ್ಥಿಗಳ ಹಾಜರಾತಿ ಮತ್ತು ಶೈಕ್ಷಣಿಕ ಪ್ರಗತಿಯನ್ನು ಪೋಷಕರೊಂದಿಗೆ ಹಂಚಿಕೊಳ್ಳುವುದು.
ಪೋಷಕರು, ಶಿಕ್ಷಕರು ಮತ್ತು ಸ್ಥಳೀಯ ಆಡಳಿತದ ಸಹಯೋಗದಿಂದ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ, ಶಾಲೆಯ ಅವಶ್ಯಕತೆಗಳು, ಸವಾಲುಗಳು ಮತ್ತು ಅಭಿವೃದ್ಧಿ ಯೋಜನೆಗಳ ಬಗ್ಗೆ ಪೋಷಕರ ನಿರೀಕ್ಷೆ, ಸಹಕಾರ ಮತ್ತು ಸಲಹೆಗಳನ್ನು ಸಂಗ್ರಹಿಸುವುದು.
ಕೆ.ಪಿ.ಎಸ್, ಪಿ.ಎಂ.ಶ್ರೀ ಹಾಗೂ ಆಯ್ಕೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಆರಂಭಿಸಿರುವ ದ್ವಿಭಾಷಾ ಮಾಧ್ಯಮ ತರಗತಿಗಳು ಮತ್ತು ಪೂರ್ವ ಪ್ರಾಥಮಿಕ ತರಗತಿಗಳ (ECCE) ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸುವುದು.
ಹೆಚ್ಚು ದಾಖಲಾತಿ ಹೊಂದಿರುವ ಸರ್ಕಾರಿ ಶಾಲಾ-ಕಾಲೇಜುಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಿ ಹೆಚ್ಚುವರಿ ಅನುದಾನ ನೀಡಿ ಅಭಿವೃದ್ಧಿಪಡಿಸುತ್ತಿರುವ ಬಗ್ಗೆ, ಮಾಹಿತಿ ನೀಡುವುದು.
ಇಲಾಖೆಯು ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅಜೀಂ ಪ್ರೇಮ್ ಜಿ ಫೌಂಡೇಷನ್ ಸಹಯೋಗದೊಂದಿಗೆ ವಾರಕ್ಕೆ 06 ದಿನಗಳು ಮೊಟ್ಟೆ/ಬಾಳೆಹಣ್ಣು ಮತ್ತು ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಸಹಯೋಗದೊಂದಿಗೆ ವಾರಕ್ಕೆ 05 ದಿನಗಳು ಸಾಯಿ ಶೂರ್ ರಾಗಿ ಹೆಲ್ತ್ ಮಿಕ್ಸ್ ಪುಡಿಯನ್ನು ಹಾಲಿನೊಂದಿಗೆ ಮಿಶ್ರ ಮಾಡಿ ನೀಡುತ್ತಿರುವ ಬಗ್ಗೆ ಪೋಷಕರಿಗೆ ಮಾಹಿತಿ ನೀಡುವುದು.
ಮಕ್ಕಳ ಹಕ್ಕುಗಳು, ಆರ್.ಟಿ.ಇ. ಕಾಯ್ದೆ, ವಿಶೇಷ ಅಗತ್ಯತೆಯುಳ್ಳ ಮಕ್ಕಳ ಶಿಕ್ಷಣ. ಮಕ್ಕಳ ರಕ್ಷಣಾ ನೀತಿ ಮತ್ತು POCSO ಕಾಯ್ದೆ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸುವುದು.
ಮಕ್ಕಳು ಶಾಲೆಯಿಂದ ಹೊರಗುಳಿಯುವ/ಗೈರುಹಾಜರಾಗುವ, ಬಾಲ ಕಾರ್ಮಿಕರು ಮತ್ತು ಬಾಲ್ಯ ವಿವಾಹಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೋಷಕರ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವುದು.
ಪೋಷಕರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅಗತ್ಯತೆಗನುಸಾರವಾಗಿ ಶಾಲಾಭಿವೃದ್ಧಿ/ಶಾಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಚರ್ಚಿಸುವುದು.
ಜಿಲ್ಲೆ ಮತ್ತು ತಾಲ್ಲೂಕು ಹಂತದ ಕ್ಷೇತ್ರ ಮಟ್ಟದ ಎಲ್ಲಾ ಅಧಿಕಾರಿಗಳು/ಸಿಬ್ಬಂದಿಗಳು ತಮ್ಮ ವ್ಯಾಪ್ತಿಯ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಕಾರ್ಯಕ್ರಮದ ಅನುಷ್ಠಾನವನ್ನು ಪರಿಶೀಲಿಸುವುದು ಹಾಗೂ ಪೋಷಕರೊಂದಿಗೆ ಚರ್ಚೆಯಲ್ಲಿ ಭಾಗವಹಿಸುವುದು.
ಎಲ್ಲಾ ಶಾಲೆಗಳಲ್ಲಿ ಪೋಷಕರ ಮಹಾಸಭೆಯಲ್ಲಿ ಭಾಗವಹಿಸಿದ ಪೋಷಕರ ವಿವರ ಮತ್ತು ಅವರು ನೀಡಿರುವ ಸಲಹೆಗಳ ಮಾಹಿತಿಯನ್ನುವಹಿಯಲ್ಲಿ ನಿರ್ವಹಿಸುವುದು.
ದಿನದ ಅಂತ್ಯದಲ್ಲಿ ತಮ್ಮ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ನಡೆದ ಪೋಷಕ-ಶಿಕ್ಷಕರ ಮಹಾಸಭೆಗಳ ವರದಿಯನ್ನು ಶಾಲಾ/ಕಾಲೇಜು ಮುಖ್ಯಸ್ಥರಿಂದ ಪಡೆದು ಕ್ರೋಢೀಕರಿಸುವುದು.
1.ಪೋಷಕ-ಶಿಕ್ಷಕ ಮಹಾ ಸಭೆಯ ಪೂರ್ವಸಿದ್ಧತೆ
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಪೋಷಕ-ಶಿಕ್ಷಕರ ಮಹಾಸಭೆ ನಡೆಸುವ ಬಗ್ಗೆ ಸೂಕ್ತ ಮಾರ್ಗದರ್ಶನ, ಪ್ರಚಾರ ಮತ್ತು ಅನುಪಾಲನೆ ಹಾಗೂ ಕ್ಲಸ್ಟರ್ ಮತ್ತು ತಾಲ್ಲೂಕು ಹಂತದ ಕ್ಷೇತ್ರ ಮಟ್ಟದ ಸಿಬ್ಬಂದಿಗೆ ಜವಾಬ್ದಾರಿ ಹಂಚಿಕೆ ಮಾಡುವುದು. ಮಾಡುವುದು.
ಎಲ್ಲಾ ಸರ್ಕಾರಿ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಪೋಷಕ-ಶಿಕ್ಷಕ ಮಹಾಸಭೆಯನ್ನು ಹಮ್ಮಿಕೊಳ್ಳುವ ಸಂಬಂಧ ಎಸ್.ಡಿ.ಎಂ.ಸಿ./ಸಿ.ಡಿ.ಸಿ.ಸಭೆಯಲ್ಲಿ ಚರ್ಚಿಸಿ ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳುವುದು.
ಪೋಷಕರ ಭಾಗವಹಿಸುವಿಕೆ: ಶಾಲಾ/ಕಾಲೇಜಿನ ಒಟ್ಟಾರೆ ದಾಖಲಾತಿಯು
<50 ಕ್ಕಿಂತ ಕಡಿಮೆ ಇದ್ದಲ್ಲಿ ಎಲ್ಲಾ ಪೋಷಕರನ್ನೂ ಆಹ್ವಾನಿಸುವುದು.
50ಕ್ಕಿಂತ ಹೆಚ್ಚು ಇದ್ದಲ್ಲಿ ಉನ್ನತ ತರಗತಿಗೆ ಪ್ರಥಮ ಆದ್ಯತೆ ನೀಡಿ ತರಗತಿಗಳ ಇಳಿಕೆ ಕ್ರಮದಲ್ಲಿ ಪೋಷಕರನ್ನೂ ಆಹ್ವಾನಿಸುವುದು
ಚಟುವಟಿಕೆಗಳು,
ಕಲಿಕೆಯಲ್ಲಿ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಉತ್ತಮ/ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸುವುದು.
ಸಭೆಗೆ ಅಗತ್ಯ ಸಾಹಿತ್ಯ, ವಿಡಿಯೋ, ಚಾರ್ಟ್ ಇತ್ಯಾದಿ ಮಾಹಿತಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವುದು.
ಮಹಾಸಭೆಯ ಬಗ್ಗೆ ಪ್ರಚಾರ ನೀಡುವ ಮೂಲಕ ಎಲ್ಲಾ ಪೋಷಕರೂ ಭಾಗವಹಿಸುವಂತೆ ಪ್ರೇರೇಪಿಸುವುದು.
ಮಹಾಸಭೆಯ ದಿನದಂದು ಶಾಲೆಯನ್ನು ತಳಿರು-ತೋರಣಗಳಿಂದ ಅಲಂಕರಿಸಿ ಹಬ್ಬದ ಮಾದರಿಯಲ್ಲಿ ಆಚರಿಸುವುದು.
2.ಪೋಷಕ-ಶಿಕ್ಷಕ ಮಹಾಸಭೆಯಂದು ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳು
ಸ್ವಾಗತ ಹಾಗೂ ಪರಸ್ಪರ ಪರಿಚಯ
ಪೋಷಕರಿಗೆ ಮಾಹಿತಿ
ಕಲಿಕಾ ಉಪಕ್ರಮಗಳು (ಜ್ಞಾನ ನೇತು, ಓದು ಕರ್ನಾಟಕ, ಕಲಿಕಾ ದೀಪ ಇತ್ಯಾದಿ) ಪಾಠ ಆಧಾರಿತ ಮೌಲ್ಯಮಾಪನದ (LBA), ಶೈಕ್ಷಣಿಕ ಸೌಲಭ್ಯಗಳು, ಕಲಿಕಾ ಪ್ರಗತಿಯಲ್ಲಿ ಪೋಷಕರ ಜವಾಬ್ದಾರಿ ಮತ್ತು ಭಾಗವಹಿಸುವಿಕೆ, ವಿದ್ಯಾರ್ಥಿಗಳ ಹಾಜರಾತಿ ಮತ್ತು ಶೈಕ್ಷಣಿಕ ಪ್ರಗತಿ, ಕೆ.ಪಿ.ಎಸ್, ಪಿ.ಎಂ.ಶ್ರೀ, ದ್ವಿಭಾಷಾ ಮಾಧ್ಯಮ ತರಗತಿಗಳು ಮತ್ತು ಪೂರ್ವ ಪ್ರಾಥಮಿಕ ತರಗತಿಗಳು (ECCE)
ಭೌತಿಕ ಸೌಲಭ್ಯಗಳು, ಶಾಲೆಯ ಅವಶ್ಯಕತೆಗಳು, ಸವಾಲುಗಳು ಮತ್ತು ಶಾಲಾ ಅಭಿವೃದ್ಧಿ ಯೋಜನೆ (SDP)
ಸರ್ಕಾರದ ಪ್ರೋತ್ಸಾಹದಾಯಕ ಯೋಜನೆಗಳು, ಉನ್ನತೀಕರಣ, ವಿದ್ಯಾರ್ಥಿಗಳ ಆರೋಗ್ಯ ಮತ್ತು ಪೋಷಣೆ
ಮಕ್ಕಳ ಹಕ್ಕುಗಳು, ಆರ್.ಟಿ.ಇ. ಕಾಯ್ದೆ, ವಿಶೇಷ ಅಗತ್ಯತೆಯುಳ್ಳ ಮಕ್ಕಳ ಶಿಕ್ಷಣ, ಮಕ್ಕಳ ರಕ್ಷಣಾ ನೀತಿ ಮತ್ತು POCSO ಕಾಯ್ದೆ
ಮಕ್ಕಳು ಶಾಲೆಯಿಂದ ಹೊರಗುಳಿಯುವ/ಗೈರುಹಾಜರಾಗುವ, ಬಾಲ ಕಾರ್ಮಿಕರು ಮತ್ತು ಬಾಲ್ಯ ವಿವಾಹಗಳನ್ನು ತಡೆಗಟ್ಟುವುದು
ಪೋಷಕರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅಗತ್ಯತೆಗನುಸಾರವಾಗಿ ಶಾಲಾಭಿವೃದ್ಧಿ/ಶಾಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು
ಪೋಷಕರು, ಶಿಕ್ಷಕರು ಮತ್ತು ಸ್ಥಳೀಯ ಆಡಳಿತದ ಸಹಯೋಗದಿಂದ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ ದೋಷಕರ ನಿರಿದ್ರೆ ಸಹಕಾರ ಮತ್ತು ಸಲಹೆಗಳ ಸಂಗ್ರಹ
3.1. ಶಾಲಾ-ಕಾಲೇಜು ಮುಖ್ಯಸ್ಥರ ಜವಾಬ್ದಾರಿಗಳು
ಎಸ್.ಡಿ.ಎಂ.ಸಿ./ಸಿ.ಡಿ.ಸಿ ಸಭೆಯಲ್ಲಿ ಚರ್ಚಿಸಿ ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳುವುದು ಶಾಲಾ ಸಿಬ್ಬಂದಿಗೆ ಜವಾಬ್ದಾರಿ ಹಂಚಿಕೆ ಮಾಡುವುದು ಹಾಗೂ ಮಕ್ಕಳ ಸುರಕ್ಷತೆಗೆ ಆದ್ಯತೆಯನ್ನು ನೀಡುವುದು.
ಪೋಷಕರ ಸಭೆಗೆ ಆಹ್ವಾನ ಪತ್ರಿಕೆಯನ್ನು ವಿದ್ಯಾರ್ಥಿಗಳ ದಿನಚರಿ ಪುಸ್ತಕದಲ್ಲಿ ಪೋಷಕರಿಗೆ ತಲುಪಿಸಲು ಕ್ರಮವಹಿಸುವುದು.
ಅಗತ್ಯ ಸಿದ್ಧತೆಗಳು-ಬ್ಯಾನರ್, ಕಾರ್ಯಕ್ರಮದ ಪಟ್ಟಿ, ಅವಶ್ಯಕ ಮಾಹಿತಿಗಳು, ಮಕ್ಕಳ ಕಲಿಕಾ ಪ್ರದರ್ಶನ ಕಾರ್ಯಕ್ರಮಗಳ ಸಿದ್ಧತೆ
ಮಧ್ಯಾಹ್ನ ಉಪಹಾರ ಯೋಜನೆಯ ಭಾಗವಾಗಿ NGO ಗಳು ಸರಬರಾಜು ಮಾಡುವ ಶಾಲೆಗಳೂ ಒಳಗೊಂಡಂತೆ ಪಲಾವ್ ಮತ್ತು ಶಾಲೆಯಲ್ಲಿ ಲಭ್ಯವಿರುವ ಹಾಲಿನ ಪೌಡರ್ ಮತ್ತು ಅಕ್ಕಿ ಬಳಸಿ ಸಿದ್ಧಪಡಿಸಿದ ಪಾಯಸವನ್ನು ಶಾಲಾ ಮಕ್ಕಳಿಗೆ ಮತ್ತು ಪೋಷಕರಿಗೂ ವಿತರಿಸುವುದು.
ಪೋಷಕ-ಶಿಕ್ಷಕರ ಸಭೆಯಲ್ಲಿ ಮತ್ತು ಊಟದ ಸಮಯದಲ್ಲಿ ಸಂಯಮ, ಶಿಸ್ತು, ಸುರಕ್ಷತೆ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು.
ಮಕ್ಕಳಿಗೆ ಮಾತ್ರ ಮೊಟ್ಟೆ ಮತ್ತು ಬಾಳೆಹಣ್ಣನ್ನು ಎಂದಿನಂತೆ ವಿತರಿಸುವುದು.
ಸಮುದಾಯ, ಸಂಸ್ಥೆ ಮತ್ತು ಖಾಸಗಿ NGO (ಪಿ.ಎಂ.ಪೋಷಣ್ ಯೋಜನೆಗೆ ಒಳಪಡದ) ಗಳಿಂದ ಭೋಜನ ಮತ್ತು ಸಿಹಿ ವಿತರಿಸುವ ವ್ಯವಸ್ಥೆ ಮಾಡಿದಲ್ಲಿ ಸರ್ಕಾರದ ವತಿಯಿಂದ ಯಾವುದೇ ಅನುದಾನ ಒದಗಿಸುವುದಿಲ್ಲ.
3.2 ತಾಲ್ಲೂಕು ಹಂತದ ಅಧಿಕಾರಿಗಳ ಜವಾಬ್ದಾರಿಗಳು
ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಪೋಷಕ-ಶಿಕ್ಷಕರ ಮಹಾಸಭೆಯನ್ನು ಏಕಕಾಲದಲ್ಲಿ ಹಾಗೂ ಏಕರೂಪದಲ್ಲಿ ನಡೆಸಲು ಕ್ರಮವಹಿಸುವುದು.
ತಾಲ್ಲೂಕು ಹಂತದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು ಶಾಲಾ ಮುಖ್ಯಶಿಕ್ಷಕರಿಗೆ ಮಾರ್ಗದರ್ಶನ ನೀಡುವುದು.
ಕ್ಲಸ್ಟರ್ ಮತ್ತು ಬ್ಲಾಕ್ ಹಂತದ ಕ್ಷೇತ್ರ ಸಿಬ್ಬಂದಿಗೆ ಕಾರ್ಯಕ್ರಮದ ಅನುಷ್ಠಾನ ಮತ್ತು ಅನುಪಾಲನೆಗೆ ಜವಾಬ್ದಾರಿ ಹಂಚಿಕೆ ಮಾಡಿ ಮೇಲ್ವಿಚಾರಣೆ ಮಾಡುವುದು,
ಶಾಲೆಗಳಲ್ಲಿ ನಡೆಸಲಾಗುವ ಸಭೆಗಳ ದಾಖಲೀಕರಣವನ್ನು (ವರದಿ ಮತ್ತು ಪೋಟೋ, ವಿಡಿಯೋ) ಶಾಲೆಗಳಿಂದ ಪಡೆದು ಕ್ಲಸ್ನರ್‌ವಾರು ಕ್ರೋಢಿಕರಣ ಮಾಡಿ ಜಿಲ್ಲಾ ಹಂತಕ್ಕೆ ಸಲ್ಲಿಸುವುದು. ಹಾಗೂ ಪ್ರತಿಯನ್ನು ssksdmc@gmail.comಗೆ ಈ-ಮೇಲ್ ಮೂಲಕ ಸಲ್ಲಿಸುವುದು.
ತಾಲ್ಲೂಕಿನಲ್ಲಿ ಶಾಲಾವಾರು ಸಭೆಗೆ ಹಾಜರಾಗಿದ್ದ ಪೋಷಕರ ಅಂಕಿ-ಅಂಶಗಳನ್ನು ಪಡೆದು ಕ್ರೋಢೀಕರಿಸುವುದು
3.3 ಉಪನಿರ್ದೇಶಕರು (ಆಡಳಿತ, ಅಭಿವೃದ್ಧಿ ಮತ್ತು ಪದವಿ ಪೂರ್ವ ಶಿಕ್ಷಣ) ಇವರ ಜವಾಬ್ದಾರಿಗಳು
ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಪೋಷಕ-ಶಿಕ್ಷಕರ ಮಹಾಸಭೆಯನ್ನು ಏಕಕಾಲದಲ್ಲಿ ಹಾಗೂ ಏಕರೂಪದಲ್ಲಿ ನಡೆಸಲು ಕ್ರಮವಹಿಸುವುದು.
ಜಿಲ್ಲಾ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು ಹಾಗೂ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರು/ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಿಗೆ ಪೋಷಕ-ಶಿಕ್ಷಕರ ಮಹಾಸಭೆಯನ್ನು ಆಯೋಜಿಸುವ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿ ಕಾರ್ಯಕ್ರಮ ಯಶಸ್ವಿಯಾಗುವಂತೆ ಅನುಪಾಲನೆ ಮಾಡುವುದು.
ಶಿಕ್ಷಣಾಧಿಕಾರಿಗಳು, ಹಿರಿಯ ಉಪನ್ಯಾಸಕರು, ಡಿ.ವೈ.ಪಿ.ಸಿ, ಉಪನ್ಯಾಸಕರು, ವಿಷಯ ಪರಿವೀಕ್ಷಕರು, ಎ.ಪಿ.ಸಿ. ಗಳು ಹಾಗೂ ಕಛೇರಿಯ ಇತರೆ ಅಧಿಕಾರಿಗಳು ಪೋಷಕ-ಶಿಕ್ಷಕರ ಸಭೆಯಂದು ಶಾಲೆಗಳಿಗೆ ಭೇಟಿ ನೀಡುವಂತೆ ನಿರ್ದೇಶನ ನೀಡುವುದು.
ಶಾಲಾ/ಕಾಲೇಜುವಾರು ಸಭೆಯಲ್ಲಿ ಹಾಜರಿದ್ದ ಪೋಷಕರ ಅಂಕಿ-ಅಂಶಗಳನ್ನು ತಾಲ್ಲೂಕುಗಳಿಂದ/ಕಾಲೇಜುಗಳಿಂದ ಪಡೆದು ಕ್ರೋಢೀಕರಿಸುವುದು. ಕಾರ್ಯಚಟುವಟಿಕೆಗಳನ್ನು ಸಮೂಹ ಮಾಧ್ಯಮಗಳಲ್ಲಿ ನಮೂದಿಸುವುದು ಮತ್ತು ಬಿತ್ತರಿಸಿ ಈ ಮೂಲಕ ಸರಕಾರಿ ಶಾಲಾ – ಕಾಲೇಜುಗಳನ್ನು ಬಲವರ್ಧನೆ ಮಾಡಿ ಸಮಾಜದ ಮುನ್ನೆಲೆಗೆ ತರುವುದು. ಪಾಲಕ, ಪೋಷಕ, ಶಾಲಾಭಿವೃದ್ಧಿ ಸಮಿತಿ, ಶಿಕ್ಷಣ ಪ್ರೇಮಿಗಳ ಮೂಲಕ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಾಸಮಾಡುವುದು ಈ ಮೆಗಾ ಪಿಟಿಯಂನ ಮಹಾ ಉದ್ದೇಶ ಸಾಕಾರವಾಗಲಿ.
ಜೈ ಶಿಕ್ಷಣ, ಜೈ ಸರಕಾರಿ ಶಾಲೆ, ಕಾಲೇಜು, ಜೈ ಕರ್ನಾಟಕ
ಸುಭಾಷ್ ಹೇಮಣ್ಣಾ ಚವ್ಹಾಣ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಜುನಾಥ ನಗರ, ಹುಬ್ಬಳ್ಳಿ ಶಹರ, 79750 26724

