ವೀರಕಂಭ ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತಿನ ತಾತ್ಕಾಲಿಕ ಪಂಪು ಚಾಲಕರ ತುರ್ತು ಸಭೆ

0
82

ಬಂಟ್ವಾಳ ತಾಲೂಕು ವೀರಕಂಭ ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತಿನ ತಾತ್ಕಾಲಿಕ ಪಂಪು ಚಾಲಕರ ತುರ್ತು ಸಭೆ ಪಂಚಾಯತ್ ಅಧ್ಯಕ್ಷ ಲಲಿತ ರವರ ಅಧ್ಯಕ್ಷತೆಯಲ್ಲಿ ಶನಿವಾರ ಗ್ರಾಮ ಪಂಚಾಯತಿನಲ್ಲಿ ಜರಗಿತು.
ಪಂಪ್ ಚಾಲಕರನ್ನು ಉದ್ದೇಶಿಸಿ ಮಾತನಾಡಿದ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಭು ಕುಮಾರ ಶರ್ಮಾ ಈಗಾಗಲೇ ಮಳೆಗಾಲ ಮುಗಿದಿದ್ದು ಇನ್ನು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಗ್ರಾಮಸ್ಥರ ಮೂಲ ಸೌಕರ್ಯಗಳಲ್ಲಿ ಒಂದಾದ ನೀರಿನ ಸಮಸ್ಯೆ ಯಾವುದೇ ಕಾರಣಕ್ಕೂ ವೀರಕಂಭದ ಗ್ರಾಮದಲ್ಲಿ ಬರಬಾರದು, ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಿಕೊಂಡು ಸರಿಪಡಿಸುವ ಉದ್ದೇಶದಿಂದ ಗ್ರಾಮದ ನಾಲ್ಕು ವಾರ್ಡ್ ಗಳ ಎಲ್ಲಾ ಪಂಪು ಚಾಲಕರನ್ನು ಕರೆದ್ದು ಸಭೆ ಮಾಡಲಾಗಿದ್ದು ತಮ್ಮ ತಮ್ಮ ಪ್ರದೇಶದಲ್ಲಿರುವ ಸಮಸ್ಯೆಗಳನ್ನು ಗ್ರಾಮ ಪಂಚಾಯತಿನ ಗಮನಕ್ಕೆ ತಂದು ಸರಿಪಡಿಸಿಕೊಂಡು ಸರಿಯಾದ ಸಮಯಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಗ್ರಾಮಸ್ಥರಿಗೆ ತಲುಪುವಂತೆ ಮಾಡಲು ಸಹಕರಿಸಬೇಕು ಎಂದರು. ಈ ಕಾರ್ಯದಲ್ಲಿ ಅಸಡ್ಡೆ ತೋರಿಸುವರನ್ನು ನಿರ್ದಾಕ್ಷಿಣವಾಗಿ ತೆಗೆದು ಬದಲಿ ವ್ಯವಸ್ಥೆ ಮಾಡಲಾಗುವುದು ಎಂದರು.

ಸಭೆಯಲ್ಲಿಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಪಂಚಾಯತ್ ಸದಸ್ಯರುಗಳಾದ ದಿನೇಶ್ ಪೂಜಾರಿ, ಸಂದೀಪ್ ಪೂಜಾರಿ, ಜಯಪ್ರಸಾದ್, ನಿಶಾಂತ್ ರೈ, ಅಬ್ದುಲ್ ರೆಹಿಮಾನ್,,ಜಯಂತಿ, ಗೀತಾ ಗಾಂಭೀರ್ ಮೀನಾಕ್ಷಿ, ಉಮಾವತಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ನವೀನ್ ರಾಬರ್ಟ್, ಚಂದ್ರಹಾಸ್, ಮಿಥುನ್, ಮೊದಲಾದವರು  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here