ಉಡುಪಿ; ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಬ್ರಹ್ಮಾವರ , ಇಲ್ಲಿನ ಶ್ರೀ ಲಕ್ಷ್ಮಣಪೂರ್ವಜ: ಜಪ ಕೇಂದ್ರದಲ್ಲಿ ನ 14 ರ ಶುಕ್ರವಾರ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೆಯ ಸ್ವಾಮೀಜಿಯವ ಮಠ ಪರಂಪರೆಯ 550 ವರ್ಷದ ಆಚರಣೆಯ ಪ್ರಯುಕ್ತ ” ಶ್ರೀರಾಮ ದಿಗ್ವಿಜಯ ರಥ ” ಬದರಿ ಕ್ಷೇತ್ರ ದಿಂದ ಆರಂಭ ಗೊಂಡು ವಾರಾಣಸಿ , ಅಯೋದ್ಯೆ , ಮುತಾಂದಹ ವಿವಿಧ ಪುಣ್ಯ ಕ್ಷೇತ್ರ ಗಳಿಗೆ ಭೇಟಿ ನೀಡಿ ಸಾಗಿ ಬಂದ ” ಶ್ರೀರಾಮ ದಿಗ್ವಿಜಯ ರಥ “ವನ್ನು ಸತ್ಯನಾಥ ಸ್ಟೋರ್ ಬಳಿ ಪೂರ್ಣ ಕುಂಭ ಸ್ವಾಗತ , ಮಂಗಳವಾದ್ಯ , ಚಂಡೆವಾದನ ದೊಂದಿಗೆ ದೇವಳಕ್ಕೆ ಕರೆತರಲಾಯಿತು. ಶ್ರೀ ದೇವರ ಸನ್ನಿಧಿಯಲ್ಲಿ ಸಮೂಹಿಕ ಪ್ರಾರ್ಥನೆ ,ಧಾರ್ಮಿಕ ಪೂಜಾ ಕಾರ್ಯಗಳು ರಾಮಕೃಷ್ಣ ಭಟ್ , ಪ್ರಧಾನ ಅರ್ಚಕರು ಬಿ ಪಾಂಡುರಂಗ ಭಟ್ ಮಾರ್ಗದರ್ಶನದಲ್ಲಿ ಅರ್ಚಕವೃಂದವರು ನೆಡೆಸಿಕೊಟ್ಟರು. ,
ದೇವರಿಗೆ ವಿಶೇಷ ಅಲಂಕಾರ , ಶ್ರೀ ರಾಮ ನಾಮ ಜಪ ಪಠಣ , ಮಹಾಪೂಜೆ, ಪ್ರಸಾದ ವಿತರಣೆ, ಜರಗಿತು.
ದೇವಳದ ಆಡಳಿತ ಮೊಕ್ತೇಸರಾದ ಕೆ ನರೇಂದ್ರ ಪೈ, ಬಿ ಪಿ ಗೋಪಾಲಕೃಷ್ಣ ಪೈ, ಸತ್ಯನಾಥ ಪೈ , , ಪುರೋಷತ್ತಮ ಪೈ , ಅರ್ಚಕ ಕುಟುಂಬಸ್ಥರು ಹಾಗೂ ರಾಮ ನಾಮ ಜಪ ಅಭಿಯಾನ ಸಮಿತಿಯ ಸಂಚಾಲಕ ಬಿ ಪಿ ಮೋಹನದಾಸ ಪೈ ರಾಮ ನಾಮ ಜಪ ಅಭಿಯಾನ ಸಮಿತಿಯ ಪದಾಧಿಕಾರಿಗಳು , ಜಿ ಎಸ್ ಬಿ ಮಹಿಳಾ ಮಂಡಳಿ , ಜಿ ಎಸ್ ಬಿ ಯುವಕ ಮಂಡಳಿಯ ಸದಸ್ಯರು ಸಹಕರಿಸಿದರು , ನೂರಾರು ಸಮಾಜಬಾಂಧವರು ಉಪಸ್ಥರಿದ್ದರು.

