ಸರ್ಕಾರಿ ಕಂದಾಯ ಭೂಮಿ, ಪರಿಸರ ನಾಶದ ವಿರುದ್ಧ ಅಧಿಕಾರಿಗಳ ದಿಟ್ಟ ಕ್ರಮ: ಸ್ಥಳ ಬಿಟ್ಟು ಓಡಿದ ಅತಿಕ್ರಮಣಕಾರ, ಫಲಕ ಅಳವಡಿಸಿದ ಅಧಿಕಾರಿಗಳು

0
113

ತುಳುನಾಡು÷ ಮೂಡುಬಿದಿರೆ ವ್ಯಾಪ್ತಿಯ ಶಿರ್ತಾಡಿ ಪಂಚಾಯತ್ ಒಳಪಟ್ಟ ಮೂಡುಕೋಣಾಜೆ ಗ್ರಾಮದ ಕುಂಟಲ ಎಂಬಲ್ಲಿ ಕಂದಾಯ ಭೂಮಿ ಸರ್ವೆ ನಂಬರ್ 197ರ ಅಂಶ ಸುಮಾರು 2 ಎಕರೆ ಸದಾನಂದ ಎಂಬಾತ ಕಬಳಿಸಲು ಪ್ರಯತ್ನಿಸಿದ್ದು, ಇದನ್ನು ಗಂಭೀರವಾಗಿ ಪರಿಣಿಗಣಿಸಿದ ಕಂದಾಯ ಇಲಾಖೆಯ ಸಂಬಂಧಿತ ಗ್ರಾಮ ಆಡಳಿತ ಅಧಿಕಾರಿ ಅತಿಕ್ರಮಣ ತೆರವುಗೊಳಿಸಿ, ಮರು ವಶಪಡಿಸಿಕೊಂಡು, ಸಾರ್ವಜನಿಕ ಅತಿಕ್ರಮಣ ನಿಷೇಧ ಫಲಕ ಅಳವಡಿಸಿ ಸರ್ಕಾರಿ ಭೂಮಿಯನ್ನು ರಕ್ಷಿಸಿದ್ದಾರೆ, ಮತ್ತು ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.


ಸದಾನಂದ ಎಂಬಾತ ಸ್ಥಳೀಯ ನಿವಾಸಿಯಾಗಿದ್ದು, ಪ್ರಸ್ತುತ ಮಂಗಳೂರಿನಲ್ಲಿ ವಾಸವಿದ್ದು ಅಲ್ಲಿಂದಲೇ ಕಾರ್ಯಾಚರಣೆ ರೂಪಿಸಿ ಮೂಡುಕೋಣಾಜೆ ಗ್ರಾಮದ ಸರಕಾರಿ ಭೂಮಿಯ ಹಚ್ಚ ಹಸಿರಿನ ಪ್ರಕೃತಿಯನ್ನು ನಾಶಗೊಳಿಸಿ, ನೈಸರ್ಗಿಕ ಸ್ಥಳವನ್ನು ವಿರೂಪ ಗೊಳಿಸಿ ಕಬಳಿಸಲು ಹುನ್ನಾರ ನಡೆಸಿದ್ದು,
ಸಾರ್ವಜನಿಕರಿಗೆ ಇದು ತನ್ನದೇ ಭೂಮಿ ಎಂಬಂತೆ ಭಾಸವಾಗುವ ಸಂದರ್ಭ ನಿರ್ಮಿಸಿ ಸರ್ಕಾರಿ ಭೂಮಿ ಕಬಳಿಸುವ ಹೊರಟಿರುವುದು ಸಂಪೂರ್ಣ ವಿಫಲವಾಗಿದೆ.

ಈತನ ದಬ್ಬಾಳಿಕೆ ದೌರ್ಜನ್ಯ ಸಹಿತ ಭೂಕಬಳಿಕೆ ಗಂಭೀರವಾಗಿ ಪರಿಗಣಿಸಿದ ಅಧಿಕಾರಿ ತಂಡ ತಕ್ಷಣ ದಾಳಿ ನಡೆಸಿ, ಅತಿಕ್ರಮಣಕಾರರನ್ನು ಹೊರಹಾಕಿ, ಕಂದಾಯ ಭೂಮಿ ರಕ್ಷಣೆಯಲ್ಲಿ ಯಾವುದೇ ಒತ್ತಡಕ್ಕೂ ಮಣಿಯದೆ, ಯಾವುದೇ ರಾಜಿ ಮಾಡಿಕೊಳ್ಳದೆ, ದಿಟ್ಟ ಕ್ರಮ ಕೈಗೊಂಡಿದ್ದು, ಇತರರಿಗೂ ಮಾದರಿಯಾಗಬೇಕಿದೆ, ಮತ್ತು ಈ ಪ್ರಕರಣ ಸರಕಾರಿ ಭೂಮಿ ಅತಿಕ್ರಮಣ ಮತ್ತು ಪರಿಸರ ಹಾನಿ ಮಾಡುವ ಜನರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.

ಪರಿಸರ ಸಂರಕ್ಷಣೆಗೆ ಮಾನ್ಯ ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ, ರಾಷ್ಟ್ರೀಯ ಹಸಿರು ಪೀಠ, ಪರಿಸರ ಇಲಾಖೆ ಕೂಡ ಪರಿಸರ ಸಂರಕ್ಷಣೆ ಬಗ್ಗೆ ಎಚ್ಚರಿಕೆ ವಹಿಸಿದೆ, ಮತ್ತು ಇದನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ, ಈ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಂಡು ಕಂದಾಯ ಭೂಮಿ ಹಾಗೂ ಪರಿಸರ ಸಂರಕ್ಷಿಸಿದ ಅಧಿಕಾರಿಗಳು ಅಭಿನಂದನೆಗೆ ಅರ್ಹರು

ನಿಮ್ಮ ಸುತ್ತಮುತ್ತ ಯಾವುದೇ ಅತಿಕ್ರಮಗಳು, ಕಾನೂನು ವಿರುದ್ಧ ಚಟುವಟಿಕೆಗಳು ಕಂಡು ಬಂದರೆ ತಕ್ಷಣ ಸಂಬಂಧ ಪಟ್ಟ ಇಲಾಖೆಗೆ ವರದಿ ಮಾಡಿ ಪೂರಕ ದಾಖಲೆಗಳೊಂದಿಗೆ ತುಳುನಾಡು ವಾರ್ತೆ ಸಂಪರ್ಕಿಸಿ ನಾವು ಸುದ್ದಿ ಪ್ರಸಾರ ಮಾಡಿ ಜನ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದೇವೆ.

LEAVE A REPLY

Please enter your comment!
Please enter your name here