ಮೂಡುಬಿದಿರೆ ಮಹಾವೀರ ಕಾಲೇಜಿನಲ್ಲಿ ತಾಂತ್ರಿಕ ವಿಚಾರ ಸಂಕಿರಣ

0
92


ವರದಿ ರಾಯಿ ರಾಜ ಕುಮಾರ
ಶಿಕ್ಷಣದಿಂದ ಆತ್ಮವಿಶ್ವಾಸವನ್ನು ಬೆಳೆಸಿಕೊಂಡಲ್ಲಿ ಯಾವುದೇ ರೀತಿಯ ತಾಂತ್ರಿಕ ಪರಿಣತಿಯನ್ನು ಹೊಂದಲು ಸಾಧ್ಯವಿದೆ. ಕೌಶಲ್ಯಯುಕ್ತವಾದ ಶಿಕ್ಷಣವನ್ನು ಗುಣಮಟ್ಟದೊಂದಿಗೆ ಬದುಕಿನಲ್ಲಿ ಅಳವಡಿಸಿಕೊಂಡು ಬೆಳೆಯಬೇಕು. ಅದೇ ನಮ್ಮ ಶ್ರೇಯಸ್ಸಿನ ಭದ್ರ ಬುನಾದಿ. ಶತಾವಧಾನಿ, ಅಷ್ಟಾವಧಾನಿಗಳ ಮೂಲ ಬಂಡವಾಳವೇ ಆತ್ಮವಿಶ್ವಾಸ. ಇಂತಹ ಆತ್ಮವಿಶ್ವಾಸವನ್ನು ಬೆಳೆಸಿಕೊಂಡ ವಿದ್ಯಾರ್ಥಿ ಬದುಕಿನಲ್ಲಿ ಸಾಕಷ್ಟ ಎತ್ತರಕ್ಕೆ ಏರುವುದಕ್ಕೆ ಸಾಧ್ಯ ಇದೆ ಎಂದು ತಾಂತ್ರಿಕ ಕ್ಲೌಡೇರಾ ಇನ್ಕಾಪರೇಷನ್ ನ ಪ್ರಿನ್ಸಿಪಾಲ್ ಇಂಜಿನಿಯರ್ ವಾದಿರಾಜ ಭಟ್ ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಂಡರು.
ಅವರು ನವಂಬರ್ 22ರಂದು 60ನೇ ವರ್ಷಾಚರಣೆಯ ಮೂಡುಬಿದಿರೆ ಮಹಾವೀರ ಕಾಲೇಜಿನಲ್ಲಿ ನಡೆದ ಕೋಡಿಂಗ್ ಮತ್ತು ಎ ಐ ಕ್ಲಬ್ ನವರ ತಾಂತ್ರಿಕ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಸಭೆಯನ್ನು ಉದ್ದೇಶಿಸಿ ಹಳೆ ವಿದ್ಯಾರ್ಥಿ ಮೈಂಡ್ ಫುಲ್ ಕನ್ಸಲ್ಟಿಂಗ ನ ಎಂ ಡಿ ಸಂಜಯ್ ಭಟ್ ಮಾತನಾಡಿ ಗುಣಮಟ್ಟ ಕಾಪಾಡಿಕೊಳ್ಳುವ ಅನಿವಾರ್ಯತೆ ಶಿಕ್ಷಣ ಸಂಸ್ಥೆಗಳಿಗೆ ಉಂಟಾಗಿದೆ. ಫಲಿತಾಂಶ, ಸೇರ್ಪಡೆ, ಉದ್ಯೋಗ ಇವುಗಳು ಒಂದಕ್ಕೊಂದು ಸಂಬಂಧ ಹೊಂದಿರುವವುಗಳು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ರಾಧಾಕೃಷ್ಣ ಅಧ್ಯಕ್ಷೀಯ ಭಾಷಣ ಮಾಡಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಫಲನ ಅಧಿಕಾರಿ ಡಾ. ಹರೀಶ್, ಪಿಯು ಕಾಲೇಜಿನ ಪ್ರಾಂಶುಪಾಲೆ ವಿಜಯಲಕ್ಷ್ಮಿ, ಕಾರ್ಯಕ್ರಮದ ನಿರ್ದೇಶಕಿ ಕೀರ್ತಲಾ, ವೇದಿಕೆಯಲ್ಲಿ ಹಾಜರಿದ್ದರು.
ತೃತೀಯ ಬಿಕಾಂನ ಕುಶಾಗ್ರ ಸ್ವಾಗತಿಸಿದರು. ಬಿ ಸಿ ಎ ಯ ಪ್ರತಿಷ್ಠಾ ಕಾರ್ಯಕ್ರಮ ನಿರ್ವಹಿಸಿದರು. ಬಿಎಸ್ಇ ಯ ರಕ್ಷಿತಾ ವಂದಿಸಿದರು.

LEAVE A REPLY

Please enter your comment!
Please enter your name here