ಬೆಳ್ತಂಗಡಿ: ಹೊಸ ಕೃಷಿ ತಾಂತ್ರಿಕ ಮಳಿಗೆ ಉದ್ಘಾಟನಾ ಕಾರ್ಯಕ್ರಮ

0
51

ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಅನುಮೋದನೆಗೊಂಡ ಮೊಬಿನ್ಸ್ ಇಂಜಿನಿಯರಿಂಗ್ ಸೊಲ್ಯೂಷನ್ಸ್ ಕಂಪನಿಯವರು ಕೃಷಿ/ತೋಟಗಾರಿಕೆ ಯಂತ್ರೋಪಕರಣಗಳ ಮಾರಾಟ ಹಾಗೂ ಸರ್ವೀಸ್ ಸೆಂಟರ್ ಮಳಿಗೆಯನ್ನು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದಲ್ಲಿ ತೆರೆದಿದ್ದು ಇದರ ಉದ್ಘಾಟನಾ ಕಾರ್ಯಕ್ರಮವು ನೆರವೇರಿತು ಈ ಸಂಧರ್ಭದಲ್ಲಿ ಸದರಿ ಕಂಪನಿಯಿಂದ ಖರೀದಿ ಮಾಡಿದ ಆಯ್ದ ಯಂತ್ರೋಪಕರಣಗಳಿಗೆ ಕೃಷಿ/ತೋಟಗಾರಿಕೆ ಇಲಾಖೆಯಿಂದ ಸಹಾಯಧನವು ಲಭ್ಯವಿದ್ದು ಇಂದು ಅರ್ಜಿ ಹಾಕಿದ ಅರ್ಹ 60 ಜನ ರೈತ ಫಲಾನುಭವಿಗಳಿಗೆ ತೋಟಗಾರಿಕೆ ಇಲಾಖೆಯ ಸಹಾಯಧನದಲ್ಲಿ ಅಡಿಕೆ ಮರ ಹತ್ತುವ ಯಂತ್ರೋಪಕರಣಗಳನ್ನು ಪ್ರಾತ್ಯಕ್ಷಿತೆ ನೀಡಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಅಧ್ಯಕ್ಷರಾದ ಜಯಾನಂದ ಗೌಡ, ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಜಯಂತಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು ಮತ್ತು ಫಲಾನುಭವಿಗಳಿಗೆ ಯಂತ್ರೋಪಕರಣಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಅರವಿಂದ ಲಾಯಿಲ, ಗಣೇಶ್ ಆರ್, ನಗರ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶರತ್ ಕುಮಾರ್ ,ಶಾಸಕರ ಆಪ್ತ ಕಾರ್ಯದರ್ಶಿ ಮಂಜುನಾಥ್ ಎಂ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್ ಹಾಗೂ ಸಿಬ್ಬoದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here