ಮಹಿಳಾ ಆರೋಗ್ಯ ಸಬಲೀಕರಣ-ಆಳ್ವಾಸ್ ನಲ್ಲಿ ವಿಚಾರ ಸಂಕಿರಣ

0
45


ವರದಿ ರಾಯಿ ರಾಜ ಕುಮಾರ
ಕುಟುಂಬವನ್ನು ಸಲಹಿ, ರಕ್ಷಿಸಿ ಕಾಪಾಡುವ ಮಹಿಳೆಗೆ ಇಂದು ಸೂಕ್ತ ರಕ್ಷಣೆ, ಆರೋಗ್ಯದ ಮಾರ್ಗದರ್ಶನ, ಆರೋಗ್ಯದ ಮೂಲ ತಿಳುವಳಿಕೆಯ ಅಗತ್ಯ ಇದೆ. ಅದೆಲ್ಲವನ್ನು ಕೂಡ ಸಕ್ಷಮದ ಮೂಲಕ ನೀಡುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಒಟ್ಟಾರೆ ಮಹಿಳೆಯರ ಸಬಲೀಕರಣವೇ ಆಳ್ವಾಸ್ ಮಹಿಳಾ ಸಂಘ, ಸಕ್ಷಮದ ಮೂಲ ಉದ್ದೇಶವಾಗಿರುವುದು ಬಹಳ ಸಂತೋಷಕರ ಸಂಗತಿ ಎಂದು ಬೆಂಗಳೂರು ಎಸ್‍ ಡಿ ಎಂ ಕ್ಷೇಮವನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೃದ್ಧಾ ಅಮಿತ್ ನುಡಿದರು.
ಅವರು ನವೆಂಬರ್ 27ರಂದು ಮೂಡುಬಿದಿರೆ ಆಳ್ವಾಸ್ ವಿದ್ಯಾಗಿರಿಯ ವಿ ಎಸ್ ಆಚಾರ್ಯ ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಐಎಪಿ ಇಎಂ ಅಸೋಸಿಯೇಷನ್ ಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಮಹಿಳಾ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವೇದಿಕೆಯಲ್ಲಿ ಆಳ್ವಾಸ್ ಫಾರ್ಮಸಿಯ ಸಂಯೋಜಕಿ, ಸಕ್ಷಮದ ನಿರ್ದೇಶಕಿ ಡಾ. ಗ್ರೀಷ್ಮಾ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಸಕ್ಷಮದ ಅಧ್ಯಕ್ಷೆ ಡಾ. ಅರ್ಚನಾ ಪ್ರಭಾತ್ ಸ್ವಾಗತಿಸಿದರು. ಅಶಿತಾ ಕಾರ್ಯಕ್ರಮ ನಿರ್ವಹಿಸಿದರು. ಸಕ್ಷಮದ ಡಾ. ಅಖಿಲ್ ವಾಸುದೇವ, ಡಾ. ಶಿಲ್ಪ ವರ್ಮಾ, ಡಾ. ಎಮ್ ವೈ ಮಂಜುಳಾ, ಡಾ. ಕವಿತಾ ವೆಂಕಟಾಚಲಂ, ಸಹಕರಿಸಿದರು. ಆಳ್ವಾಸ್ ವೆಲ್ನೆಸ್ ತರಬೇತಿಯ ನಿರ್ದೇಶಕಿ, ಸಕ್ಷಮದ ಕಾರ್ಯದರ್ಶಿ ದೀಪ ಕೊಠಾರಿ ವಂದಿಸಿದರು.
.

LEAVE A REPLY

Please enter your comment!
Please enter your name here