ಉಡುಪಿ: ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ಸಂಘ ಉಡುಪಿ ಜಿಲ್ಲೆ ವತಿಯಿಂದ ಸಾಧಕ ಕನ್ನಡ ಶಿಕ್ಷಕರಿಗೆ ಅಭಿನಂದನೆಯ ಕಾರ್ಯಕ್ರಮವು ಕ್ರಿಯೇಟಿವ್ ಕಾಲೇಜು ಕಾರ್ಕಳದಲ್ಲಿ
ನವೆಂಬರ್ 30, 2025ರಂದು ಭಾನುವಾರ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.
ಈ ಕಾರ್ಯಕ್ರಮವನ್ನು ಶ್ರೀ ಮಂಜುನಾಥ ಪೂಜಾರಿ ಮುದ್ರಾಡಿ ಅಧ್ಯಕ್ಷರು, ನಾರಾಯಣ ಗುರು ಅಭಿವೃದ್ಧಿ ನಿಗಮ, ಕರ್ನಾಟಕ ಸರಕಾರ ಉದ್ಘಾಟನೆ ಮಾಡಲಿರುವರು. ಪಿ.ವಿ. ಆನಂದ ಸಾಲಿಗ್ರಾಮ ಅಧ್ಯಕ್ಷರು, ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ಸಂಘ, ಉಡುಪಿ ಜಿಲ್ಲೆ ಅಧ್ಯಕ್ಷತೆ ವಹಿಸಲಿರುವರು. ಡಾ. ಸುಲತಾ ಹೆಬ್ರಿ ಕನ್ನಡ ಉಪನ್ಯಾಸಕರು, ಆಳ್ವಾಸ್ ಪದವಿಪೂರ್ವ ಕಾಲೇಜು, ಮೂಡಬಿದ್ರೆ ಅಭಿನಂದಿಸಲಿರುವರು. ಅಭ್ಯಾಗತರು ಲೋಕೇಶ್ ಸಿ. ಉಪನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ ಜಿಲ್ಲೆ, ಗಿರಿಜಮ್ಮ ಕ್ಷೇತ್ರ ಶಿಕ್ಷಣಾಧಿಕಾರಿ, ಕಾರ್ಕಳ , ಅಶ್ವಥ್ ಎಸ್. ಎಲ್ ಸಹ ಸಂಸ್ಥಾಪಕರು, ಕ್ರಿಯೇಟಿವ್ ಎಜ್ಯುಕೇಶನಲ್ ಫೌಂಡೇಶನ್ (ರಿ.) ಮೂಡುಬಿದ್ರೆ, ಕಾರ್ಕಳ, ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಗೌರವಾಧ್ಯಕ್ಷರು, ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಉಡುಪಿ ಜಿಲ್ಲೆ, ಗಣೇಶ್ ಜಾಲ್ಲೂರು ಅಧ್ಯಕ್ಷರು, ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ಸಂಘ, ಕಾರ್ಕಳ ತಾಲೂಕು ಉಪಸ್ಥಿತರಿರಲಿರುವರು.
ಕನ್ನಡ ಜ್ಞಾನ ನೇಸರ : ನಾರಾಯಣ ಪರಮೇಶ್ವರ ಭಾಗ್ಯತ್, ಪ್ರಶಸ್ತಿ ಸ್ವೀಕರಿಸುವವರು ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ಅಭಿನಂದನೆ ಸ್ವೀಕರಿಸುವವರು : ಜಿಲ್ಲಾ ಮತ್ತು ರಾಜ್ಯ ಮಟ್ಟದ ೯ ಮಂದಿ ಪ್ರಶಸ್ತಿ ಪುರಸ್ಕೃತರು, ಪೂರ್ಣಾಂಕ ದಾಖಲಿಸಿದ ಜಿಲ್ಲೆಯ 85 ಕನ್ನಡ ಶಿಕ್ಷಕರು ಸಾಧಕ ಶಿಕ್ಷಕ ಗೌರವ ಸ್ವೀಕರಿಸಲಿರುವರು.

