ಮುನಿಯಾಲಿನ ಕೆ. ಪಿ. ಎಸ್ ಶಾಲೆಯ ಪಧವಿ ಪೂರ್ವ ವಿಭಾಗದ ವಾರ್ಷಿಕೋತ್ಸವ ಸಮಾರಂಭವು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಪದ್ಮಾವತಿ ಕಲಾಮಂದಿರದಲ್ಲಿ ನೆರವೇರಿತು.
ಹೊಸ ಸಭಾಂಗಣಕ್ಕೆ ಕ್ಷೇತ್ರದ ಶಾಸಕರ ನಿಧಿಯಿಂದ ರೂ. 25 ಲಕ್ಷ ಘೋಷಣೆ.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾರ್ಕಳ ಕ್ಷೇತ್ರದ ಶಾಕರಾದ ಶ್ರೀ ವಿ ಸುನಿಲ್ ಕುಮಾರ್ ಇವರು, ತಾಲ್ಲೂಕಿನ ಸುಸಜ್ಜಿತ ಸರಕಾರಿ ಶಾಲೆಯಲ್ಲೊಂದಾದ ಮುನಿಯಾಲಿನಲ್ಲಿ ಕೆ. ಪಿ. ಎಸ್ ಶಾಲೆಯನ್ನಾಗಿ ಪರಿವರ್ತಿಸಿ ಸ್ಥಳೀಯ ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯುಕ್ತ ವಾಗಿದೆ ಅಲ್ಲದೆ ಈಗಾಗಲೇ ಎರಡು ಮಹಡಿಯ ಸುಸಜ್ಜಿತ ಕಟ್ಟಡವೂ ನಿರ್ಮಾಣವಾಗಿದ್ದು ಬಹಳಷ್ಟು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುತ್ತಿರುವುದು ಬಹಳ ಸಂತೋಷದ ವಿಚಾರ, ಕ್ರೀಡಾ ವಿಭಾಗ, ಸಾಂಸ್ಕೃತಿಕ ರಂಗ ಅದರ ಜೊತೆ ಜೊತೆಯಲ್ಲಿ ಕಲಿಕೆಯಲ್ಲೂ ಮಕ್ಕಳು ಉತ್ತಮ ಸಾಧನೆಯನ್ನು ಮಾಡಿರುವುದಕ್ಕೆ ಇಲ್ಲಿಯ ಶಿಕ್ಷಣ, ಪರಿಸರ ಹಾಗೂ ಸಮಿತಿಯವರ ಶಾಲೆಯ ಮೇಲಿರುವ ಜವಾಬ್ದಾರಿ ಹಾಗೂ ಪ್ರೀತಿ ಎದ್ದು ಕಾಣುತ್ತದೆ.
ಶಾಲಾ ವಠಾರದಲ್ಲಿ ಸಭಾಂಗಣದ ವ್ಯವಸ್ಥೆ ಇದ್ದರೂ ಬಹಳಷ್ಟು ಹೆಚ್ಚು ವಿದ್ಯಾರ್ಥಿಗಳ ಸಂಖ್ಯೆ ಇದ್ದು ಇಂತಹ ವಾರ್ಷಿಕೋತ್ಸವದ ಸಮಯದಲ್ಲಿ ಬೇರೆ ಸಭಾಂಗಣವನ್ನು ಅವಲಂಬಿಸುವುದರಿಂದ ಶಾಲಾ ವಠಾರದಲ್ಲಿ ಸುಸಜ್ಜಿತ ಸಭಾಂಗಣಕ್ಕಾಗಿ ಶಾಸಕರ ನಿಧಿಯಿಂದ ರೂ 25 ಲಕ್ಷವನ್ನು ಘೋಷಿಸಿ ಕಾಮಗಾರಿಯನ್ನು ಆದಷ್ಟು ಬೇಗ ಪ್ರಾರಂಭಿಸುವುದಾಗಿ ತಮ್ಮ ಮಾತಿನಲ್ಲಿ ನುಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ
ವರಂಗ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಅಮೀನ್, ಉದ್ಯಮಿ ದಿನೇಶ್ ಪೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮಚಂದ್ರ ನಾಯಕ್, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಹರೀಶ್ ಪೂಜಾರಿ, ಪಂಚಾಯತ್ ಸದಸ್ಯರಾದ ರತ್ನಾಕರ್ ಪೂಜಾರಿ, ರಮೇಶ್ ನಾಯರ್, ಪ್ರಾಂಶುಪಾಲರಾದ ಶ್ರೀಮತಿ ಬೇಬಿ ಶೆಟ್ಟಿ, ಉಪ ಪ್ರಾಂಶುಪಾಲರದ ರವೀಂದ್ರ ರಾವ್, ಪ್ರಾಥಮಿಕ ವಿಭಾಗದ ಶಿಕ್ಷಕಿ ಉಷಾ ಶೆಟ್ಟಿ, ಕಾಲೇಜು ವಿದ್ಯಾರ್ಥಿ ನಾಯಕ ಆಯುಷ್ ಹಾಗೂ ಹೈಸ್ಕೂಲ್ ವಿದ್ಯಾರ್ಥಿ ನಾಯಕ ಶ್ರೇಯಸ್ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಪ್ರಾಂಶುಪಾಲರಾದ ಶ್ರೀಮತಿ ಬೇಬಿ ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕರಾದ ಜಯಶ್ರೀ ವಂದಿಸಿದರು ಹಾಗೂ ಅನಿಲ್ ಕುಮಾರ್ ಜೈನ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿ ಗಳಿಂದ ವಿವಿಧ ವಿನೋದಾವಳಿಗಳು ನೆರವೇರಿತು.

