ರೋಟರಿ 25ನೇ ವಾರ್ಷಿಕ ಚಿಣ್ಣರ ಉತ್ಸವಕ್ಕೆ ಚಾಲನೆ

0
93

ಮಕ್ಕಳ ಸೇವೆ ದೇವರ ಸೇವೆಗೆ ಸಮಾನ–ಗುರುಕಿರಣ್

ಮಂಗಳೂರು : ನಗರದ ಸುತ್ತಮುತ್ತಲಿನಲ್ಲಿಕಾರ್ಯಚರಿಸುತ್ತಿರುವ 10 ಮಕ್ಕಳ ರಕ್ಷಣೆ ಮತ್ತುಆರೈಕೆಕೇಂದ್ರದ ಸುಮಾರು 430 ಮಕ್ಕಳಿಗೆ ಒದಗಿದ ಸುವರ್ಣ ಅವಕಾಶ, ಸಂತಸ, ಸಂಭ್ರಮ, ಉತ್ಸಾಹದ ವಾತಾವರಣ, ಒಡನಾಟದಅನುಬಂಧ ಮರೆಯಲಾದ ಪ್ರಬಂಧ, ಪೋಷಕರ ಪ್ರೀತಿ ವಾತ್ಸಲ್ಯದಿಂದ ವಂಚಿತರಾದ ಮುಗ್ಧ ಮಕ್ಕಳು ಇತರಕೇಂದ್ರದ ಮಕ್ಕಳ ಜೊತೆಗೆ ಬೆರೆತು, ಮುಕ್ತವಾಗಿ ತಮ್ಮ ವ್ಯಥೆ, ಕಥೆ, ಕಷ್ಟ, ಚಿಂತೆ, ವೇದನೆಯನ್ನು ಮರೆತು, ಹುರುಪು ಹಾಗೂ ಉತ್ಸಾಹದಿಂದ ನಕ್ಕು ಕುಣಿದಾಡಿದರು. ಸ್ನೇಹ ಮತ್ತುಒಡನಾಟವನ್ನು ಸ್ಮರಿಸಿ ತಮ್ಮ ವೈಯುಕ್ತಿಕ ವಿವಿಧ ಸಿಹಿ ಕಹಿ ಅನುಭವಗಳನ್ನು ವಿನಿಮಯಿಸಿದರು.ಆಕರ್ಷಕ ಪಥ ಸಂಚಲನ ನೀಡಿದ ಬಳಿಕ ಕ್ರೀಡಾಸ್ಫೂರ್ತಿಯಿಂದ ಮತ್ತುಉತ್ಸಾಹದಿಂದತಮ್ಮಲ್ಲಿ ಹುದುಗಿದಕ್ರೀಡಾ ಸಾಮರ್ಥ್ಯ ಮತ್ತುಗಾನ, ನೃತ್ಯ, ನಾಟಕ, ಕಲಾ, ಕೌಶಲ್ಯ, ಪ್ರತಿಭೆಯನ್ನು ಪ್ರದರ್ಶಿಸಿ ಸಭಿಕರನ್ನು ರಂಜಿಸಿದರು.ಪ್ರತಿಯೊಬ್ಬರ ಮುಖದ ಮೇಲೆ ಮಂದಹಾಸ ಬೀರುತ್ತಿತ್ತು.

ರೋಟರಿಕ್ಲಬ್ ಮಂಗಳೂರು ಸೆಂಟ್ರಲ್ ಮತ್ತುರೋಟರಾಕ್ಟ್ಕ್ಲಬ್ ಮಂಗಳೂರು ಸಿಟಿ ಜಂಟಿಆಶ್ರಯದಲ್ಲಿರೋಟರಿ 25 ವಾರ್ಷಿಕ“ಅಂತರ ಮಕ್ಕಳ ರಕ್ಷಣಾ ಮತ್ತುಆರೈಕೆಕೇಂದ್ರದಚಿಣ್ಣರಉತ್ಸವ” ವನ್ನು
ತಾ:30.11.2025 ರಂದು ನಗರದಕೆನರಾ ಹೈಸ್ಕೂಲ್‌ಉರ್ವ ಪ್ರಾಂಗಣದಲ್ಲಿಆಯೋಜಿಸಲಾಗಿತ್ತು.

ಖ್ಯಾತಕನ್ನಡ ಚಲನಚಿತ್ರಕಲಾವಿದ ಹಾಗೂ ಸಂಗೀತ ನಿರ್ದೇಶಕರಾದಡಾ.ಗುರುಕಿರಣ್‌ರವರು ಸ್ಪರ್ಧಾಕೂಟವನ್ನು ಉದ್ಘಾಟಿಸಿ,“ರೋಟರಿ ಸಂಸ್ಥೆಯವರುಚಿನ್ನರಿಗಾಗಿ ವಿನೂತನ ಪರಿಕಲ್ಪನೆಯನ್ನು ಆಯೋಜಿಸಿ ಪೋಷಕರ ಪ್ರೀತಿ ವಾತ್ಸಲ್ಯದಿಂದ ವಂಚಿತ ಮಕ್ಕಳ ಉತ್ಸಾಹಕ್ಕೆ ಸ್ಪಂದಿಸಿ ಪ್ರೋತ್ಸಾಹ ನೀಡುವರೋಟರಿ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವಾ ಮನೋಭಾವ ಪ್ರಶಂಸನೀಯ”ಎAದುನುಡಿದÀÄ,ಮಕ್ಕಳ ಸೇವೆಯೇದೇವರ ಸೇವೆಗೆ ಸಮಾನಎಂದು ನುಡಿದು ಬಳಿಕ ಕನ್ನಡ ಚಲನಚಿತ್ರ ಆಪ್ತ ಮಿತ್ರದ “ಕಾಲವನ್ನುತಡೆಯೋರುಯಾರೂಇಲ್ಲ” ಹಾಡನ್ನು ಹಾಡಿ ಮಕ್ಕಳನ್ನು ರಂಜಿಸಿದರು.

ಸAಘಟನಾಅಧ್ಯಕ್ಷರೋ| ಡಾ| ದೇವದಾಸ್‌ರೈರವರುತಮ್ಮ ಪ್ರಾಸ್ತಾವಿಕಭಾಷಣದಲ್ಲಿ ಈ 25ನೇ ವಾರ್ಷಿಕ“ಚಿಣ್ಣರಉತ್ಸವ”ಕಾರ್ಯಕ್ರಮವುತಮ್ಮ ಸಂಸ್ಥೆಯ ಪ್ರತಿಷ್ಠಿತ ಸಮಾಜದ ಶ್ರೇಯೋಭಿವೃದ್ಧಿ ಸೇವಾ ಚಟುವಟಿಕೆಯಅಂಗವಾಗಿದ್ದು, ಮಕ್ಕಳ ಪ್ರತಿಭೆಯನ್ನು ಗುರುತಿಸಿ ವೇದಿಕೆಯನ್ನು ಒದಗಿಸಿ ಅವರಉತ್ಸಾಹಕ್ಕೆ ಸ್ಪಂದಿಸಿ, ಪ್ರೋತ್ಸಾಹಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರಿಸಿಕೊಳ್ಳುವುದು, ಒಂದು ದಿನದಉತ್ಸಾಹ, ಸಂತಸ ಹೊರಹೊಮ್ಮಿಸುವುದು ನಮ್ಮ ಸಂಸ್ಥೆಯ ಮುಖ್ಯಧ್ಯೇಯ, ಪ್ರಮುಖಉದ್ದೇಶಎಂದು ಮಾಹಿತಿ ನೀಡಿದರು.

ರೋಟರಿಸಂಸ್ಥೆಯಅಧ್ಯಕ್ಷರಾದರೋ | ಭಾಸ್ಕರ್‌ರೈ ಸ್ವಾಗತಿಸಿದರು. ಜಿಲ್ಲಾರೋಟರಿವಲಯಸಹಾಯಕಗವರ್ನರ್Àರಾದರೋ|ಚಿನ್ನಗಿರಿಗೌಡ ಮತ್ತು ವಲಯ ಪ್ರತಿನಿಧಿ ರೋ| ರವಿ ಜಲನ್‌ಗೌರವಅತಿಥಿಯಾಗಿ ಭಾಗವಹಿಸಿ, ಸಂದೋರ್ಭುಜಿತವಾಗಿ ಮಾತನಾಡಿದರು. ರೋಟರಾಕ್ಟ್ ಸಂಸ್ಥೆಯಅಧ್ಯಕ್ಷರೋ | ಅಕ್ಷಯ್‌ರೈ, ಕಾರ್ಯದರ್ಶಿ ರೋ| ವಿವೇಕ್‌ರಾವ್‌ವೇದಿಕೆಯಲ್ಲಿ ಉಪಸ್ಥಿತರಿದ್ದರು.ರೋಟರಿ ಸಂಸ್ಥೆಯ ಕಾರ್ಯದರ್ಶಿ ರೋ| ವಿಕಾಸ್‌ಕೊಟ್ಯಾನ್ ವಂದಿಸಿದರು.ರೊ| ಕೆ.ಎಂ. ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ ಸಮಾರಂಭದಲ್ಲಿರೋಟರಿಜಿಲ್ಲಾಚುನಾಯಿತಗವರ್ನರ್‌ರಾದರೋ | ಸತೀಶ್ ಬೋಳಾರ್ ರವರು ಮುಖ್ಯಅತಿಥಿಯಾಗಿ ಪಾಲ್ಗೊಂಡು ಸ್ಪರ್ಧಾ ವಿಜೇತರಿಗೆ ಬಹುಮಾನಮತ್ತು ಪ್ರಶಸ್ತಿ ಪ್ರಧಾನ ಮಾಡಿದರು.

(ರೋ| ಎಂ.ವಿ. ಮಲ್ಯ)
ವರದಿಗಾರರು

LEAVE A REPLY

Please enter your comment!
Please enter your name here