ಹೆಚ್. ಪಿ.ವಿ ಚುಚುಮದ್ದು ಕ್ಯಾನ್ಸರ್ ವೈರಸ್ ಹಬ್ಬದಂತೆ ತಡೆಯುತ್ತದೆ: ಸುಷ್ಮಾ ಹಿರೇಮಠ
೨೬ ನವೆಂಬರ್ ೨೦೨೫ರಂದು ಕಿಮ್ಸ್ ನ ಮಕ್ಕಳ ವಿಭಾಗದ ಒಪಿಡಿಯಲ್ಲಿ ಮಕ್ಕಳ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ. ವಿನೋದ ರಟಗೇರಿಯವರು ಹುಬ್ಬಳ್ಳಿ ಶಹರದ ಮಂಜುನಾಥ ನಗರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಾಗೂ ಮತ್ತಿತರ ಶಾಲೆಯ ೯ ವರ್ಷ ಮೇಲ್ಪಟ್ಟ ೧೪ ವರ್ಷದೊಳಗಿನ ೪೦ ಹದಿಹರೆಯದ ಬಾಲಕಿಯರಿಗೆ ಇನ್ನರ್ ವ್ಹೀಲ್ ಕ್ಲಬ್‌ನ ಧನಸಹಾಯದಿಂದ ಹ್ಯೂಮನ್ ಪ್ಯಾಪಿಲೋಮ ವೈರಸ್ (ಎಚ್.ಪಿ.ವಿ.) ಹೆಣ್ಣುಮಕ್ಕಳ ಗರ್ಭಕೋಶದ ಕೊರಳಿನ ಕರ್ಕರೋಗ ತಡೆಗಟ್ಟುವ ಲಸೀಕರಣ ನೀಡಿ, ಭವಿಷ್ಯದಲ್ಲಿ ಹೆಣ್ಣು ಮಕ್ಕಳ ಜೀವ ಹಿಂಡುವ ಕ್ಯಾನ್ಸರ್ ಕಾರಿ ವೈರಸ್ ತಾಗದಂತೆ ಸದರಿ ಲಸಿಕೆ ಉತ್ತಮ ಕಾರ್ಯ ಮಾಡುತ್ತದೆ. ಹೆಣ್ಣು ಮಕ್ಕಳು ಸಂತಸದಾಯಕ ಜೀವನ ನಡೆಸಲು ವರದಾನ ವಾಗಿದೆ, ಎರಡು ಡೋಜನ್ ಪ್ರಕ್ರಿಯೆ ಇದಾಗಿದ್ದು; ನಾಲ್ಕು ತಿಂಗಳ ನಂತರ ಎರಡನೆ ಡೋಜ ನೀಡಲಾಗುತ್ತದೆ ಎಂದರು. ಕಿಮ್ಸ್ ನಿರ್ದೇಶಕರಾದ ಡಾ. ಈಶ್ವರ ಹೊಸಮನಿಯವರು ಬಡ ಹೆಣ್ಣು ಮಕ್ಕಳ ಆರೋಗ್ಯ ಕಾಳಜಿಯಯನ್ನು ಹೊಂದಿರುವ ಸೇವಾಗುಣವನ್ನು ಮೆಚ್ಚಿ ಶುಭಕೋರಿದರು.

ಶಾಲಾ ಮುಖ್ಯ ಗುರುಗಳಾದ ಹೆಚ್. ಬಿ. ಕೊರವರ ಹಾಗೂ ಶಿಕ್ಷಕ ವರ್ಗದ ರವರ ಸಮ್ಮತಿಯೊಂದಿಗೆ ವಿಜ್ಞಾನ ಶಿಕ್ಷಕಿಯರಾದ ವೇದಾ ಸು. ನಾಗನೂರ ರವರ ಉಸ್ತುವಾರಿಯಲ್ಲಿ ಹೆಣ್ಣು ಮಕ್ಕಳ ಪಾಲಕರಿಗೆ ಹೆಣ್ಣು ಮಕ್ಕಳ ಜೀವನದಲ್ಲಿ ಮಾರಿಯಾಗಿ ಕಾಡುವ ಖಾಯಿಲೆಯಿಂದ ರಕ್ಷಿಸಿಕೊಳ್ಳಲು ತಿಳಿ ಹೇಳಿ ಅವರಿಂದ ಒಪ್ಪಿಗೆ ಪತ್ರ, ಆದಾರಕಾರ್ಡಗಳನ್ನು ಪಡೆದು; ಭವಿಷ್ಯದಲ್ಲಿ ಉಂಟಾಗುವ ಗರ್ಭಾಂಶಯ ಕಂಠದ ಮಾರಕ ಕ್ಯಾನ್ಸರ್ ರೋಗವನ್ನು ತಡೆಯುವ ಎಚ್. ಪಿ. ವಿ. ಚುಚ್ಚುಮದ್ದನ್ನು ನೀಡಲು ತಿಂಗಳ ಪೂರ್ತಿ ಯೋಜನೆ ರೂಪಿಸಲಾಗಿತ್ತು. ಕಿಮ್ಸ್ ಆರೋಗ್ಯ ವಾಹನವು ಮಧ್ಯಾನ್ಹ ೧:೩೦ ಕ್ಕೆ ಶಾಲೆಗೆ ಬಂದು ಮಕ್ಕಳು, ಶಿಕ್ಷಕರು ಮತ್ತು ಪೋಷಕರನ್ನು ಕರೆದುಕೊಂಡು ಲಸಿಕೆ ಹಾಕಿಸಿ ೩:೩೦ ಕ್ಕೆ ಶಾಲೆಗೆ ಕರತಂದು ಸುರಕ್ಷಿತವಾಗಿ ತಲುಪಿಸಿದರು. ಮಕ್ಕಳ ಜವಾಬ್ದಾರಿ ನಿಭಾಯಿಸಲು ಶಿಕ್ಷಕಿಯರಾದ ಕೆ. ಆರ್. ಚಕ್ರಸಾಲಿ, ವೇದಾ ನಾಗನೂರ ಮತ್ತು ಶಿಕ್ಷಕ ಸಾಹಿತಿ ಸುಭಾಷ್ ಚವ್ಹಾಣರವರು ಮಕ್ಕಳ ಪಾಲಕರಿಗೆ ಸಹಾಯ ಸಹಕಾರ ನೀಡಿದರು.
ಮಕ್ಕಳ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ. ವಿನೋದ ರಟಗೇರಿ, ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ. ಲಕ್ಷ್ಮೀಕಾಂತ ಲೋಕರೆ, ಮೆಡಿಕಲ್ ರಿಪ್ರಜೆಂಟೆಟ್ಯೂ ವರುಣ ಪಾಟೀಲ, ಒಬಿಜಿ ಡಾ. ಮಧು ಕಲ್ಲಾಪುರ ಹಾಗು ಸಹಾಯಕ ಪ್ರಾಧ್ಯಾಪಕರಾದ ಡಾ. ಸುಷ್ಮಾ ಹೆಚ್. ಆರ್, ಸೂಶ್ರೊಷಕರು, ವೈದ್ಯಕೀಯ ಸಾಮಾಜಿಕ ಕಾರ್ಯಕರ್ತರಾದ ಮಂಜುನಾಥ ಅಣ್ಣಿಗೇರಿ ಕಿಮ್ಸ್ ಆರ್ ಐ ಸಂಸ್ಥೆಯ ಸಿಬ್ಬಂದಿಯವರು ವಾಹನ ಚಾಲಕ ಅಸ್ಕರ್ ಮತ್ತಿತರರು ಹಾಜರಿದ್ದು ಲಸೀಕರಣ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಿದರು.

ಎಚ್.ಪಿ.ಎ. ಲಸಿಕೆಗೆ ಸಂಪೂರ್ಣ ಧನಸಹಾಯ ನೀಡಿದ ಹುಬ್ಬಳ್ಳಿಯ ಇನ್ನರ್ ವ್ಹೀಲ್ ಕ್ಲಬ್ ನಿಂದ ಚುಚ್ಚುಮದ್ದಿಗೆ ಒಳಗಾದ ಎಲ್ಲಾ ಹೆಣ್ಣು ಮಕ್ಕಳಿಗೆ ಇನ್ನರ್ ವ್ಹೀಲ್ ಕ್ಲಬ್ ಹುಬ್ಬಳ್ಳಿ ಅಧ್ಯಕ್ಷರಾದ ಸುಷ್ಮಾ ಹಿರೇಮಠರವರು ಹಣ್ಣಿನ ಜ್ಯೂಸ್ ವಿತರಿಸಿ, ಆರ್ಥಿಕವಾಗಿ ದುರ್ಬಲರಿರುವ ಪೋಷಕರ ಹೆಣ್ಣು ಮಕ್ಕಳಿಗೆ ಕಿಮ್ಸ್ ವೈದ್ಯರ ನೆರವಿನೊಂದಿಗೆ ಭವಿಷ್ಯದಲ್ಲಿ ಕ್ಯಾನ್ಸರ್ ಕಾಡದಿರಲೆಂದು ಚುಚ್ಚುಮದ್ದು ನೀಡುತ್ತಿದ್ದೇವೆ ಎಂದು ಹೇಳಿದರು. ಕಾರ್ಯದರ್ಶಿಗಳಾದ ರೇಖಾ ಪಾಟೀಲ, ಸಿಪಿಸಿಸಿ ವಿಜಯಲಕ್ಷ್ಮೀ ಕಟ್ಟಿಮಠ, ಖಜಾಂಚಿ ಎಲಿನಾ ಲಾರೆನ್ಸ್, ಸದಸ್ಯರಾದ ಡಾ ಜಗದೇವಿ, ಪಿಪಿ ಪ್ರೇಮಾ ಪಾಟೀಲ, ಜಯಶ್ರೀ ವಾಲಿ, ಜ್ಯೋತಿ ಬಜ್ಜಿ, ಮೀನಾಕ್ಷಿ ಸಂಕನೂರ, ಸುನೀಲಾ ಗಿರಿಮಠ, ಮಕ್ಕಳಿಗೆ ಆರೋಗ್ಯ ಜಾಗೃತಿಯನ್ನು ಮೂಡಿಸಿದರು.
ವಿದ್ಯಾರ್ಥಿನಿಯರ ಪೋಷಕರಾದ ಸರಸ್ವತಿ ಸುಣಗಾರ, ಲಕ್ಷ್ಮೀ ಹೊಂಬಳ, ಶಾಂತಾ ದೇವರಮನಿ, ಮಂಜುಳಾ ತಾಳಿಕೋಟಿ, ಲಕ್ಷ್ಮೀ ಕೊರವರ, ದುಂಡಮ್ಮ ನಡಗೇರಿ, ರತ್ನಾ ಹೊಂಬಳ, ಉಮಾ ಡೊಂಬರ, ಮಂಜುಳಾ ಲಕ್ಕುಂಡಿ, ಶ್ರೀಯಾಲಾ ಮುತ್ತಿನ, ಸಂಗೀತಾ ಜಪಾಟೆ, ಸಮೀನಾ ನೂಲ್ವಿ, ನಾಗಮ್ಮ ಲಕ್ಕುಂಡಿ ಮುಂತಾದವರು ಹಾಜರಿದ್ದು ವೈದ್ಯರಿಂದ ಸಲಹೆ ಸೂಚನೆಗಳನ್ನು ಪಡೆದು ಕೃತಜ್ಞತೆ ಅರ್ಪಿಸಿದರು.
ವರದಿ: ಸುಹೇಚ ಪರಮವಾಡಿ

