ಮಸ್ಕತ್ ನಲ್ಲಿ ತುಳು ಹಾಸ್ಯಮಯ ನಾಟಕ “ಎರಾ ಪಿರಾವುಡು ಉಲ್ಲೇರ್”

ತುಳು ಹಾಸ್ಯಮಯ ನಾಟಕ “ಎರಾ ಪಿರಾವುಡು ಉಲ್ಲೇರ್” ಮೂಲಕ ಪ್ರೇಕ್ಷಕರ ಮನಗೆದ್ದ ಕಲಾವಿದರಾದ ಶರತ್ ಉಚ್ಚಿಲ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಿನಕರ ಭಂಡಾರಿ ಕಳಂಜಾರು ಅವರು ಮೇ 22ರಂದು ಓಮಾನ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ವಿದೇಶದ ತುಳುಭಿಮಾನಿಗಳಿಗಾಗಿ ನಡೆಯಲಿರುವ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇವರ ಅಭಿನಯ ಮೆರಗು ನೀಡಲಿದೆ.
ಗ್ರಾಮೀಣ ಕಲಾ ಪ್ರತಿಭೆಯನ್ನು ರಾಜ್ಯ ಹಾಗೂ ದೇಶದ ಗಡಿಗಳನ್ನು ದಾಟಿಸಿ ವಿಶ್ವ ವೇದಿಕೆಗೆ ಕೊಂಡೊಯ್ಯುತ್ತಿರುವ ಈ ಇಬ್ಬರು ಕಲಾವಿದರಿಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಕಲಾಭಿಮಾನಿಗಳಿಂದ ಅಭಿನಂದನೆಗಳ ಸುರಿಮಳೆ ವ್ಯಕ್ತವಾಗಿದೆ.
ತುಳು ನಾಟಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಇವರ ಸಾಧನೆ ಯುವ ಕಲಾವಿದರಿಗೆ ಸ್ಪೂರ್ತಿಯಾಗಿದ್ದು, ತುಳು ಸಂಸ್ಕೃತಿ ಮತ್ತು ಹಾಸ್ಯ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಮಹತ್ವದ ಹೆಜ್ಜೆಯಾಗಿದೆ.

