ವಿಧಿಯ ಕ್ರೂರ ಆಟ: ನವವಿವಾಹಿತನ ದುರ್ಮರಣ

0
245

ಶಿವಮೊಗ್ಗ : ಹೊಳೆಹೊನ್ನೂರು ಸಮೀಪದ ಹನುಮಂತಾಪುರ ಗ್ರಾಮದ ನಿವಾಸಿ 30 ವರ್ಷದ ರಮೇಶ್​ ಎಂಬಾತ, ಹಾರ್ಟ್​ ಅಟ್ಯಾಕ್ ಆಗಿ ಮೊನ್ನೆ ಸೋಮವಾರ ಸಾವನ್ನಪ್ಪಿದ್ದಾರೆ.ಸಣ್ಣ ವಯಸ್ಸಿನಲ್ಲಿಯೇ ಜೀವ ಬಿಟ್ಟ ರಮೇಶ್​ರ ಸಾವಿನ ಸುದ್ದಿ ಕೇಳಿದವರೆಲ್ಲಾ ದೇವರ ಮೇಲೆಯೇ ಬೇಸರ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿಯು ಆತ ಮದುವೆಯಾಗಿ ಒಂದು ದಿನ ಕಳೆಯುವಷ್ಟರಲ್ಲಿಯೇ ಸಾವನ್ನಪ್ಪಿರುವುದು ಎರಡೂ ಕುಟುಂಬಗಳಲ್ಲಿ ದುಖಃದ ಜೊತೆಗೆ ಆಘಾತವನ್ನು ಸಹ ನೀಡಿದೆ.

ಹನುಮಂತಾಪುರ ಗ್ರಾಮದ ನಿವಾಸಿ ರಮೇಶ್‌ ಕಳೆದ ಭಾನುವಾರ ಹರಪನಹಳ್ಳಿ ಸಮೀಪದ ಬಂಡ್ರಿ ಗ್ರಾಮದ ಯುವತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ನಂತರ ನವ ದಂಪತಿಗಳು ಸಂಪ್ರದಾಯದಂತೆ ವಧುವಿನ ಮನೆಗೆ ತೆರಳಿದ್ದರು.  ಸೋಮವಾರ ವಧುವಿನ ಮನೆಯಲ್ಲಿ ದೇವರ ಮನೆಯಲ್ಲಿ ಪೂಜೆ ಸಲ್ಲಿಸಿ, ಕೈ ಮುಗಿದು ಹೊರಗೆ ಬರುತ್ತಿದ್ದಂತೆಯೇ ರಮೇಶ್‌ ದಿಢೀರನೆ ಕುಸಿದುಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಆದರೆ, ರಮೇಶ್ ಕುಸಿದಲ್ಲಿಯೇ ಸಾವನ್ನಪ್ಪಿದ್ದರು. ಮೃತರ ಅಂತ್ಯಕ್ರಿಯೆಯು ಮಂಗಳವಾರ ಹೊಸಕೊಪ್ಪದಲ್ಲಿ ನೆರವೇರಿತು.

LEAVE A REPLY

Please enter your comment!
Please enter your name here