ಬೆಳುವಾಯಿಯಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಪ್ರಯುಕ್ತ ಜಾಗೃತಿ ಜಾಥಾ

0
63

ವರದಿ ರಾಯಿ ರಾಜ ಕುಮಾರ

ಬೆಳುವಾಯಿ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯ ವತಿಯಿಂದ ಸಾರ್ವಜನಿಕ ಸಹಕಾರದೊಂದಿಗೆ ಡಿಸೆಂಬರ 4 ರಂದು ಬೆಳುವಾಯಿ ಷಣ್ಮುಖಾನಂದ ಹಾಲ್ ನಿಂದ ವಿದ್ಯಾರ್ಥಿಗಳ ಜನಜಾಗೃತಿ ಜಾಥಾ ಶಾಲೆಯ ತನಕ ನಡೆಯಿತು. ಷಣ್ಮುಖಾನಂದ ಹಾಲ್ ನ ಮಾಲೀಕ ಅಣ್ಣಿ ಪೂಜಾರಿ ಅವರು ಜಾಥಾಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸುಭಾಷ್ ಪೈ, ವ್ಯವಸಾಯ ಸಹಕಾರಿ ಬ್ಯಾಂಕಿನ ನಿರ್ದೇಶಕ ರಾಮ್ ಪ್ರಸಾದ್, ವಿಶೇಷ ಮಕ್ಕಳ ಶಾಲೆಯ ಸಂಸ್ಥಾಪಕ ಪ್ರಕಾಶ್ ಶೆಟ್ಟಿಗಾರ್, ಶಿಕ್ಷಕ ರಕ್ಷಕ ಸಮಿತಿಯ ಅಧ್ಯಕ್ಷ ಲತಾ ಸುರೇಶ್ , ಉಪಸ್ಥಿತರಿದ್ದರು.
ಅನಿತಾ ರೋಡ್ರಿಗಸ್ ಸ್ವಾಗತಿಸಿದರು, ಸುಚಿತ್ರ ಕಾರ್ಯಕ್ರಮ ನಿರೂಪಿಸಿದರು, ಮಂಗಳೂರಿನ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ಎಲ್ಲ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಉಡುಗೊರೆಯನ್ನು ನೀಡಿದರು. ಎಲ್ಲಾ ಮಕ್ಕಳು ಜಾಥಾದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here